

ಉಳ್ಳಾಲ: ಪಾವೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಕಾಳಿಂಗ ಸರ್ಪ ಪತ್ತೆಯಾಗಿದೆ. ಸಂಜೆ ಶಾಲೆ ಬಿಡುವ ಸಂದರ್ಭ ಗಾರ್ಡನ್‌ನಲ್ಲಿ ಹಾವು ಕಾಣಿಸಿಕೊಂಡಿದೆ. ಇದನ್ನು ನೋಡಿದ ಒಂದಿಬ್ಬರು ಮಕ್ಕಳು ಕಲ್ಲೆಸೆದಿದ್ದು ಆಗ ಕಾಳಿಂಗ ಸರ್ಪ ಗಾರ್ಡನ್‌ನಿಂದ ಹೊರಬಂದಿದೆ. ಈ ವೇಳೆ ಶಿಕ್ಷಕರು ಹಾವನ್ನು ಗಮನಿಸಿ ಉರಗ ತಜ್ಞ ದಿಲೀಪ್ ಕುಮಾರ್ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ದಿಲೀಪ್ ಸುಮಾರು 25 ಅಡಿಯಷ್ಟು ಉದ್ದವಿದ್ದ ಕಾಳಿಂಗ ಸರ್ಪವನ್ನು ಹಿಡಿದರು.