

ಚೆನ್ನೈ: ಕಾಲಿವುಡ್ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ ವಿಚಾರದಲ್ಲಿ ಆಸಕ್ತಿಕರ ಬೆಳವಣಿಗೆಯೊಂದು ನಡೆದಿದೆ. ಲೋಕೇಶ್ ಅವರ ಮಾನಸಿಕ ಸ್ಥಿತಿಯನ್ನು ಪರಿಕ್ಷೀಸಿಸುವಂತೆ ಕೋರಿ ವ್ಯಕ್ತಿಯೊಬ್ಬರು ಮದ್ರಾಸ್ ಹೈಕೊರ್ಟ್ ಮೆಟ್ಟಿಲೇರಿದ್ದಾರೆ.
ಅರ್ಜಿದಾರರ ಪ್ರಕಾರ ಯುವ ಜನಾಂಗದ ಗಮನ ಸೆಳೆಯಲು ಹಿಂಸೆ ಮತ್ತು ರಕ್ತಸಿಕ್ತ ಅಂಶಗಳನ್ನು ಲೋಕೇಶ್ ಅವರು ತಮ್ಮ ಸಿನಿಮಾದಲ್ಲಿ ನಯಾವಾಗಿ ಚಿತ್ರೀಕರಿಸುತ್ತಾರೆ. ತಮ್ಮ ನಿರ್ದೇಶನದ ಪ್ರತೀ ಸಿನಿಮಾದಲ್ಲಿ ಹೀರೋಯಿನ್ ಬರ್ಬರವಾಗಿ ಹತ್ಯೆಯಾಗುತ್ತಾರಲ್ಲ ಅದು ಹೇಗೆ ಎಂಬುದನ್ನು ಸಹ ಅರ್ಜಿದಾರರು ಪ್ರಶ್ನೆ ಮಾಡಿದ್ದಾರೆ.
ತನ್ನ ವಾದಕ್ಕೆ ಸಾಕ್ಷಿಯಾಗಿ ಇತ್ತೀಚೆಗಷ್ಟೇ ತೆರೆಕಂಡ ಲಿಯೋ ಸಿನಿಮಾವನ್ನು ಅರ್ಜಿದಾರ ಉದಾಹರಣೆಗೆ ನೀಡಿದ್ದಾರೆ. ಪ್ರತಿ ಚಿತ್ರದಲ್ಲೂ ಹಿಂಸೆ ಮತ್ತು ರಕ್ತವನ್ನು ವೈಭವೀಕರಿಸುವ ತಮ್ಮದೇ ಶೈಲಿಯನ್ನು ಅನುಸರಿಸುವ ಮೂಲಕ ಸಮಾಜಕ್ಕೆ ತಪ್ಪು ಸಂದೇಶವನ್ನು ಲೋಕೇಶ್ ಕನಗರಾಜ್ ಅವರು ರವಾನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅರ್ಜಿದಾರನನ್ನು ರಾಜಾ ಮುರುಗನ್ ಎಂದು ಗುರುತಿಸಲಾಗಿದೆ. ಇವರು ಮದುರೈ ಮೂಲದವರು. ಲೋಕೇಶ್ ಅವರ ಮಾನಸಿಕ ಸ್ಥಿತಿಯನ್ನು ಪರೀಕ್ಷೆ ಮಾಡಲು ಮನವಿ ಮಾಡಿದ್ದಾರೆ. ಹೈಕೋರ್ಟ್ನ ಮದುರೈ ವಿಭಾಗೀಯ ಪೀಠ ವಿಚಾರಣೆ ನಡೆಸುವ ವೇಳೆ ನಿರ್ದೇಶಕ ಲೋಕೇಶ್ ಪರ ವಕೀಲರು ಹಾಜರರಿಲಿಲ್ಲ. ಸದ್ಯ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ.
ಅರ್ಜಿದಾರ ರಾಜಾ ಮುರುಗನ್ ಅವರು 'ಲಿಯೋ' ಚಿತ್ರದ ಟೆಲಿವಿಷನ್ ಪ್ರೀಮಿಯರ್ ಅನ್ನು ನಿಷೇಧಿಸುವಂತೆ ನ್ಯಾಯಾಲಯವನ್ನು ಇದೇ ಸಂದರ್ಭದಲ್ಲಿ ಕೋರಿದ್ದಾರೆ. ಇಂತಹ ಭಯಾನಕ ಚಲನಚಿತ್ರವನ್ನು ಥಿಯೇಟರ್‌ಗಳಲ್ಲಿ ವೀಕ್ಷಣೆ ಮಾಡಿದ್ದಕ್ಕೆ 1000 ರೂಪಾಯಿಗಳನ್ನು ಪರಿಹಾರವಾಗಿ ಕೋರಿದ್ದಾರೆ. (ಏಜೆನ್ಸೀಸ್)