

Puja Khedkar : ನವಿ ಮುಂಬೈನಲ್ಲಿ ನಡೆದ ರಸ್ತೆ ಗಲಭೆಯ ಘಟನೆಯ ನಂತರ ಟ್ರಕ್ ಚಾಲಕನನ್ನು ಅಪಹರಿಸಿದ ಆರೋಪದಡಿಯಲ್ಲಿ ಮಾಜಿ ಐಎಎಸ್ ಪ್ರೊಬೆಷರ್ ಪೂಜಾ ಅವರ ಕುಟುಂಬದ ಅಂಗರಕ್ಷನನ್ನು ಶುಕ್ರವಾರ (ಸೆಪ್ಟೆಂಬರ್ 20) ಮಹಾರಾಷ್ಟ್ರದ ಧುಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಪ್ರಹ್ಲಾದ್ ಕುಮಾರ್ (22) ಚಲಿಸುತ್ತಿದ್ದ ಟ್ರಕ್ ಮುಂಬೈನ ಮುಲುಂಡ್-ಐರೋಲಿ ರಸ್ತೆಯಲ್ಲಿ ಖೇಡ್ಕರ್ ಅವರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳೊಂದಿಗೆ ವಾಗ್ವಾದ ನಡೆಯಿತು. ಈ ವೇಳೆ ಕಾರಿಗೆ ಉಂಟಾದ ಹಾನಿಗೆ ಪರಿಹಾರ ನೀಡುವಂತೆ ಖೇಡ್ಕರ್ ತಂದೆ ಮತ್ತು ಅವರ ಅಂಗರಕ್ಷಕ ಟ್ರಕ್ ಚಾಲಕನನ್ನು ಅವರ ಕಾರಿನಲ್ಲಿ ಖೇಡ್ಕರ್ ಅವರ ಬಂಗಲೆಗೆ ಕರೆದೊಯ್ದಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಪೊಲೀಸರು ಟ್ರಕ್ ಡ್ರೈವರ್ ಇರುವಂತಹ ಸ್ಥಳವನ್ನು ಪತ್ತೆಹಚ್ಚಲು ಬಂದಾಗ ಖೇಡ್ಕರ್ ಅವರ ತಾಯಿ ಅವರನ್ನು ಬಂಗಲೆ ಆವರಣಕ್ಕೆ ಪ್ರವೇಶಿಸದಂತೆ ತಡೆದರು. ಹಾಗೇ ಈ ಅಪಹರಣದ ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳನ್ನು ಮಧ್ಯಾಹ್ನ 3 ಗಂಟೆಗೆ ಠಾಣೆಗೆ ಕಳುಹಿಸುವುದಾಗಿ ಪೊಲೀಸರಿಗೆ ಭರವಸೆ ನೀಡಿದ್ದರು. ಇವರ ಮಾತುಗಳನ್ನು ನಂಬಿ ಪೊಲೀಸರು ಸ್ಥಳದಿಂದ ವಾಪಾಸ್ಸಾಗಿದ್ದಾರೆ.
ಒಂದು ದಿನ ಕಳೆದ ನಂತರವೂ ಆರೋಪಿಗಳು ಠಾಣೆಗೆ ಹೋಗದೆ ಇರುವುದರಿಂದ, ಪೊಲೀಸರು ಮತ್ತೆ ಬಂಗಲೆ ಬಳಿ ಹೋಗಿದ್ದು, ಈ ವೇಳೆ ಅವರ ಕಾರು, ಖೇಡ್ಕರ್ ಅವರ ತಂದೆ ಹಾಗೂ ಅಂಗರಕ್ಷಕ ನಪತ್ತೆಯಾಗಿರುವುದನ್ನು ಕಂಡುಕೊಂಡಿದ್ದಾರೆ. ಇನ್ನು ಮನೋರಮಾ ಅಧಿಕಾರಿಗಳನ್ನು ಹೆದುರಿಸಲು ನಾಯಿಯನ್ನು ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
2024 ರಲ್ಲಿ, ತರಬೇತಿ ಐಎಎಸ್ ಅಧಿಕಾರಿಯಾಗಿದ್ದ ಖೇಡ್ಕರ್ ಅವರು ಯುಪಿಎಸ್ಸಿ ಉಮೇದುವಾರಿಕೆಯಲ್ಲಿ ಅಧಿಕಾರ ದುರುಪಯೋಗ ಮತ್ತು ಸುಳ್ಳು ಹೇಳಿಕೆಗಳ ಆರೋಪಗಳನ್ನು ಎದುರಿಸಿದರು. ಅದೇ ವೇಳೆ ಖೇಡ್ಕರ್ ಅವರ ತಾಯಿ ಭೂ ವಿವಾದದ ಬಗ್ಗೆ ನಡೆದ ವಾಗ್ವಾದದ ಸಂದರ್ಭದಲ್ಲಿ ಬಂದೂಕನ್ನು ತೋರಿಸಿ ಹೆದರುಸುತ್ತಿರುವಂತಹ ವಿಡಿಯೋ ಎಲ್ಲಡೆ ಹರಡಿತ್ತು. ಈ ಎಲ್ಲಾ ಪ್ರಕರಣದಿಂದ ಅವರು ಬಂಧನಕ್ಕೆ ಒಳಪಟ್ಟಿದ್ದು, ನಂತರ ಜಮೀನಿನ ಮೇಲೆ ಹೊರ ಬಂದರು ಎಂದು ತಿಳಿಸಲಾಗಿದೆ. (ಏಜೆನ್ಸೀಸ್)