ವಿಷ್ಣುವರ್ಧನ್‌ ಸ್ಮಾರಕಕ್ಕಾಗಿ ಬೆಂಗಳೂರಿನಲ್ಲಿ ಅರ್ಧ ಎಕರೆ ಭೂಮಿ ಖರೀದಿಸಿದ ಕಿಚ್ಚ ಸುದೀಪ್​! Sudeep Buys Land To Build Vishnuvardhan Smaraka

Vishnuvardhan
Published on

ಬೆಂಗಳೂರು:  ( Sudeep Buys Land To Build Vishnuvardhan Smaraka )ಸಾಹಸಸಿಂಹ ಡಾ.  ವಿಷ್ಣುವರ್ಧನ್​​ ಅವರ ಸ್ಮಾರಕ ನಿರ್ಮಾಣಕ್ಕಾಗಿ ನಟ ಕಿಚ್ಚ ಸುದೀಪ್​​ ಬೆಂಗಳೂರಿನಲ್ಲಿ ಅರ್ಧ ಎಕರೆ ಜಮೀನು ಖರೀದಿ ಮಾಡಿದ್ದಾರೆ.

ವಿಷ್ಣುವರ್ಧನ್‌ ಸ್ಮಾರಕ ವಿವಾದಕ್ಕೆ ಶೀಘ್ರದಲ್ಲೇ ತಾರ್ಕಿಕ ಅಂತ್ಯ

ಕೆಂಗೇರಿಯ ಹತ್ತಿರ ಅರ್ಧ ಎಕರೆ ಜಾಗವನ್ನು ಸುದೀಪ್ ಅವರು ಖರೀದಿ ಮಾಡಿದ್ದಾರೆ. ಅಲ್ಲಿಯೇ ಡಾ. ವಿಷ್ಣುವರ್ಧನ್ ಅವರ ಸ್ಮಾರಕ, ದರ್ಶನ ಕೇಂದ್ರ ಆಗಲಿದೆ. ಶೀಘ್ರದಲ್ಲೇ ಅದರ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗುತ್ತದೆ. ಸೆಪ್ಟೆಂಬರ್ 18ಕ್ಕೆ ನಾವು ಅಡಿಗಲ್ಲು ಹಾಕುವ ಯೋಜನೆ ಇದೆ. ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ದಿನ ಸ್ಮಾರಕದ ಮಾಡೆಲ್ ಬಿಡುಗಡೆ ಮಾಡಲಾಗುತ್ತದೆ. ಈ ಜಾಗದಲ್ಲಿ ಗ್ರಂಥಾಲಯ, ವಿಷ್ಣು ಅವರ 25 ಅಡಿಯ ಪುತ್ಥಳಿ ಹಾಗೂ ಒಂದು ಗ್ಯಾಲರಿ ನಿರ್ಮಾಣವಾಗಲಿದೆ ಎನ್ನಲಾಗಿದೆ.

ವಿಷ್ಣುವರ್ಧನ್ ಸ್ಮಾರಕ ಕೆಡವಿದಾಗ ಬೇಸರಪಟ್ಟವರಲ್ಲಿ ಸುದೀಪ್ :

ಆಗಸ್ಟ್​ 8ರಂದು ರಾತ್ರೋ ರಾತ್ರಿ ವಿಷ್ಣು ಸ್ಮಾರಕಾನೇ ನೆಲಸಮ ಮಾಡ್ಬಿಟ್ಟಿದ್ರು ಕಿಡಿಗೇಡಿಗಳು. ಇದು ವಿಷ್ಣು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಕಣ್ಣೀರು, ಆಕ್ರೋಶ, ಗಲಾಟೆ, ಉದ್ವೇಗಕ್ಕೂ ಈ ಘಟನೆ ಕಾರಣವಾಗಿತ್ತು.

ವಿಷ್ಣುವರ್ಧನ್ ಸ್ಮಾರಕ ಕೆಡವಿದಾಗ ಬೇಸರಪಟ್ಟವರಲ್ಲಿ ಸುದೀಪ್ ಕೂಡ ಒಬ್ಬರು. ಅಂದು ಮಾತನಾಡಿದ್ದ ಸುದೀಪ್ ಮುಂದೆ ನಾವೇನ್ ಮಾಡ್ಬೇಕು ಗೊತ್ತಿದೆ.. ಮಾಡೇ ಮಾಡ್ತೀವಿ ಎಂದಿದ್ದರು. ನಟ ವಿಷ್ಣುವರ್ಧನ್‌ಗಾಗಿ  ಇಡೀ ಕರುನಾಡು ಮೆಚ್ಚುವಂತ ಕೆಲಸ ಮಾಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಕಿಚ್ಚನ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net