ಬಾಲಕ ಬಾಲಕಿಯರ ಖೋ ಖೋ ಪಂದ್ಯಾಟ

Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ತಲಪಾಡಿ ದೇವಿನಗರ ಶಾರದಾ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ(ಪದವಿಪೂರ್ವ) ಉಳ್ಳಾಲ ತಾಲೂಕು ಆಶ್ರಯದಲ್ಲಿ ಪದವಿಪೂರ್ವ ಬಾಲಕ- ಬಾಲಕಿಯರ ಖೋ ಖೋ ಪಂದ್ಯಾಟ ಗುರುವಾರ ತಲಪಾಡಿ ಶಾರದಾ ವಿದ್ಯಾನಿಕೇತನದ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆಯಿತು.

ಪದವಿಪೂರ್ವ ಬಾಲಕ- ಬಾಲಕಿಯರ ಖೋ ಖೋ ಪಂದ್ಯಾಟದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಪರಿಜ್ಞಾನ ಕಾಲೇಜು ತಂಡ.
ಪದವಿಪೂರ್ವ ಬಾಲಕ- ಬಾಲಕಿಯರ ಖೋ ಖೋ ಪಂದ್ಯಾಟದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಪರಿಜ್ಞಾನ ಕಾಲೇಜು ತಂಡ.

ಸಂಸ್ಥೆ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಉದ್ಘಾಟಿಸಿದರು. ಸಂಸ್ಥೆ ನಿರ್ದೇಶಕ ಸಮೀರ್ ಪುರಾಣಿಕ್, ಶಾರದಾ ಪದವಿ ಕಾಲೇಜಿನ ಪ್ರಾಂಶುಪಾಲೆ ವೀಣಾ ಪಣಿಕ್ಕರ್, ಪ್ರೌಢಶಾಲೆ ಪ್ರಾಂಶುಪಾಲ ಮೋಹನದಾಸ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿನಾಯಕ್ ಬಿ.ಜಿ. ಮತ್ತು ಆಡಳಿತಾಧಿಕಾರಿ ಪ್ರಫುಲ್ ಕುವಾರ್ ಉಪಸ್ಥಿತರಿದ್ದರು.

ಪದವಿಪೂರ್ವ ಬಾಲಕ- ಬಾಲಕಿಯರ ಖೋ ಖೋ ಪಂದ್ಯಾಟದ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸಂತ ಸೆಬಾಸ್ಟಿಯನ್ ಕಾಲೇಜು ತಂಡ.
ಪದವಿಪೂರ್ವ ಬಾಲಕ- ಬಾಲಕಿಯರ ಖೋ ಖೋ ಪಂದ್ಯಾಟದ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸಂತ ಸೆಬಾಸ್ಟಿಯನ್ ಕಾಲೇಜು ತಂಡ.

ಫಲಿತಾಂಶ: ಬಾಲಕಿಯರ ವಿಭಾಗದಲ್ಲಿ ಪರಿಜ್ಞಾನ ಕಾಲೇಜು ಪ್ರಥಮ, ಸಂತ ಸೆಬಾಸ್ಟಿಯನ್ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು. ಬಾಲಕರ ವಿಭಾಗದಲ್ಲಿ ಸಂತ ಸೆಬಾಸ್ಟಿಯನ್ ಕಾಲೇಜು ಪ್ರಥಮ, ಪರಿಜ್ಞಾನ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net