

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ಅಭಿನಯಿಸಿದ ಮೊದಲ ಚಿತ್ರ ‘ಮೊಗ್ಗಿನ ಮನಸ್ಸು’ ಬಿಡುಗಡೆಯಾಗಿ ಜುಲೈ 18ಕ್ಕೆ 12 ವರ್ಷಗಳಾದವು. ಆ ಸಂಭ್ರಮವನ್ನು ಮತ್ತಷ್ಟು ಜೋರಾಗು ಆಚರಿಸಲು ಅಭಿಮಾಣಿಗಳು ಸಿಡಿಪಿ ಬಿಡುಗಡೆ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿರುವ ಯಶ್ ಅವರ ಅಭಿಮಾನಿಗಳ ಬಳಗಗಳೆಲ್ಲ ಸಿಡಿಪಿ ಹಾಕಿಕೊಂಡು ಶುಬಾಶಯ ಕೋರಿದ್ದಾರೆ. ಹೀಗಿರುವಾಗಲೇ ಕೆಜಿಎಫ್ ತಂಡದಿಂದಲೂ ವಿಶೇ ಉಡುಗೊರೆ ಸಿಕ್ಕಿದೆ.
ಕೆಜಿಎಫ್ ಚಿತ್ರತಂಡ ನಟ ಯಶ್ ಅವರಿಗೆ ಶುಭ ಕೋರುವ ಸಲುವಾಗಿ ಫೋಟೋವೊಂದನ್ನು ಬಿಡುಗಡೆ ಮಾಡಿದೆ. ಅಚ್ಚರಿ ಏನೆಂದರೆ ಆ ಫೋಟೋವನ್ನು ನಿರ್ದೇಶಕರಾಗಲಿ, ನಟ ಯಶ್ ಆಗಲಿ, ಚಿತ್ರದ ನಿರ್ಮಾಪಕರಾಗಲಿ ಯಾರೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ. ಆದರೂ, ಯಶ್ ಅವರ ಹೊಸ ಲುಕ್ ಎಲ್ಲೆಡೆ ವೈರಲ್ ಆಗುತ್ತಿದೆ. ಮಾಸ್ ಅವತಾರದಲ್ಲಿ ಎದುರಾಗಿರುವ ಯಶ್, ಸೂಟು ಬೂಟು ತೊಟ್ಟು ರಗಡ್ ಆಗಿ ಕಾಣಿಸಿದ್ದಾರೆ.
ಇನ್ನು ಕೆಜಿಎಫ್ ಸಿನಿಮಾ ಬಗ್ಗೆ ಮಾತನಾಡುವುದಾದರೆ, ಇಷ್ಟೊತ್ತಿಗಾಗಲೇ ಚಿತ್ರೀಕರಣ ಮುಗಿದಿರಬೇಕಿತ್ತು. ಕರೊನಾದಿಂದಾಗಿ ಚಿತ್ರೀಕರಣ ಮುಂದೂಡಲಾಗುತ್ತಿದೆ. ಇನ್ನೊಂದು 20 ದಿನದ ಶೂಟಿಂಗ್ ಮುಗಿದರೆ, ಸಿನಿಮಾ ಮುಗಿದಂತೆ. ಸದ್ಯ ಶೂಟಿಂಗ್ ಮಾಡಿಕೊಳ್ಳುವ ವಾತಾವರಣ ಇಲ್ಲ. ಎಲ್ಲವೂ ತಹಬದಿಗೆ ಬರುತ್ತಿದ್ದಂತೆ ಚಿತ್ರೀಕರಣಕ್ಕೆ ಚಾಲನೆ ನೀಡಲು ನಿರ್ದೇಶಕರು ತಯಾರಿ ನಡೆಸಿದ್ದಾರೆ.