ಹ್ಯಾರಿ ಬ್ರೂಕ್ IPL​​ ನಿಷೇಧಕ್ಕೊಳಗಾದ ಬಗ್ಗೆ ಕ್ಲಾರಿಟಿ ಕೊಟ್ಟ ಕೆವಿನ್​ ಪೀಟರ್ಸನ್​! | Breaks Silence

dk - 2025-05-05T150814.352
Published on

Breaks Silence : ಇಂಗ್ಲೆಂಡ್‌ನ ಯುವ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಿಂದ ಹೊರಗುಳಿದಿದ್ದಕ್ಕೆ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡದ ಮಾರ್ಗದರ್ಶಕ ಮತ್ತು ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಕೆವಿನ್ ಪೀಟರ್ಸನ್ ನಿರಾಶೆ ವ್ಯಕ್ತಪಡಿಸಿದ್ದಾರೆ.

ಹೌದು, ಈ ಕುರಿತು ಮಾತನಾಡಿರುವ ಡೆಲ್ಲಿ ಕೋಚ್​ ಪೀಟರ್ಸನ್, '' ಬ್ರೂಕ್ ಕಳೆದ ವರ್ಷದ ವೈಯಕ್ತಿಕ ಕಾರಣಗಳಿಂದ - ಅಜ್ಜಿಯ ಮರಣ - ಐಪಿಎಲ್ ಅನ್ನು ತಪ್ಪಿಸಿಕೊಂಡಿದ್ದರು ಮತ್ತು ಇಂಗ್ಲೆಂಡ್‌ನ ಭಾರತ ಪ್ರವಾಸವನ್ನು ತಪ್ಪಿಸಿಕೊಂಡಿದ್ದರು. ಐಪಿಎಲ್ ನಿಯಮಗಳ ಪ್ರಕಾರ, ಸತತ ಎರಡು ಬಾರಿ ಹಿಂದೆ ಸರಿದ ಕಾರಣ(ಗೈರು ಹಾಜರು) ಅವರನ್ನು ಎರಡು ವರ್ಷಗಳ ಕಾಲ ಲೀಗ್‌ನಲ್ಲಿ ಭಾಗವಹಿಸದಂತೆ ನಿಷೇಧಿಸಲಾಗಿದೆ'' ಎಂದು ಬ್ಯಾನ್​ ಬಗ್ಗೆ ಮೌನ ಮುರಿದಿದ್ದಾರೆ. ಅಲ್ಲದೆ ಕಾರಣ ಕೂಡ ಕೋಚ್​ ಹೇಳಿದ್ದಾರೆ.

ಹ್ಯಾರಿ ಬ್ರೂಕ್ ಅವರನ್ನು ಕಳೆದ ವರ್ಷ ಐಪಿಎಲ್ ಮೆಗಾ ಹರಾಜಿನಲ್ಲಿ ಡಿಸಿ ತಂಡ 6.25 ಕೋಟಿ ರೂ.ಗೆ ಖರೀದಿಸಿತ್ತು. ಆದರೆ, ಇಂಗ್ಲೆಂಡ್ ತಂಡದೊಂದಿಗೆ ಬಿಡುವಿಲ್ಲದ ಕಾರಣ ಮೊದಲು "ಸ್ವತಃ ಪುನರ್ಭರ್ತಿ ಮಾಡಿಕೊಳ್ಳುವ" ಅಗತ್ಯವನ್ನು ಉಲ್ಲೇಖಿಸಿ ಸೀಸನ್ ಪ್ರಾರಂಭವಾಗುವ ಮೊದಲೇ ಹಿಂದೆ ಸರಿದರು. ಸುಮಾರು ಒಂದು ತಿಂಗಳ ನಂತರ, ಇತ್ತೀಚಿನ ಐಸಿಸಿ ಪಂದ್ಯಾವಳಿಗಳಲ್ಲಿ ತಂಡದ ಕಳಪೆ ಪ್ರದರ್ಶನದ ನಂತರ ಜೋಸ್ ಬಟ್ಲರ್ ಬದಲಿಗೆ ಬ್ರೂಕ್ ಅವರನ್ನು ಇದೀಗ ಇಂಗ್ಲೆಂಡ್‌ನ ಹೊಸ ವೈಟ್-ಬಾಲ್ ನಾಯಕನನ್ನಾಗಿ ನೇಮಿಸಲಾಯಿದೆ. ಈ ವೇಳೆ ಪೀಟರ್​ಸನ್​ ಬ್ಯಾನ್​ ಬಗ್ಗೆ ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net