ಕೇರ್ಪಡ ಶ್ರೀದೇವಿಗೆ ಶ್ರದ್ಧಾಭಕ್ತಿಯ ಬ್ರಹ್ಮಕಲಶಾಭಿಷೇಕ : ಮಕರ ಲಗ್ನ ಶುಭ ಮುಹೂರ್ತದಲ್ಲಿ ಸಂಪನ್ನ ಅಷ್ಟಬಂಧಕ್ರಿಯೆ, ಚಂಡಿಕಾ ಹೋಮ

New Project (22)
Published on

ಸುಬ್ರಹ್ಮಣ್ಯ: ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಧಾನ ಅಂಗವಾಗಿ ಸೋಮವಾರ ಶ್ರೀ ದೇವಿಗೆ ಶ್ರದ್ಧಾ ಭಕ್ತಿಯಿಂದ ಬ್ರಹ್ಮಕಲಶಾಭಿಷೇಕ ನೆರವೇರಿತು.

ಕ್ಷೇತ್ರ ತಂತ್ರಿ ಕೆಮ್ಮಿಂಜೆ ನಾಗೇಶ ತಂತ್ರಿ ವಿವಿಧ ವೈದಿಕ ವಿಧಿವಿಧಾನ ನಡೆಸಿ ಬ್ರಹ್ಮಕಲಶಾಭಿಷೇಕ ನೆರವೇರಿಸಿದರು. ಸಹಸ್ರಾರು ಭಕ್ತರು ಉಪಸ್ಥಿತರಿದ್ದು ಶ್ರೀ ದೇವಿಯ ಬ್ರಹ್ಮಕಲಶಾಭಿಷೇಕ ವೀಕ್ಷಿಸಿ ಕೃತಾರ್ಥರಾದರು.

ಸೋಮವಾರ ಬೆಳಗ್ಗೆ ಮಹಾಗಣಪತಿ ಹೋಮ ನಡೆಯಿತು. ನಂತರ ಚಂಡಿಕಾಹೋಮ ಆರಂಭವಾಯಿತು. ಬೆಳಗ್ಗೆ 8.23ರಿಂದ 9.23ವರೆಗೆ ಮಕರ ಲಗ್ನ ಶುಭಮುಹೂರ್ತದಲ್ಲಿ ದೇವರಿಗೆ ಅಷ್ಟಬಂಧಕ್ರಿಯೆ ನೆರವೇರಿ ಬ್ರಹ್ಮಕಲಶಾಭಿಷೇಕ ಸಂಪನ್ನವಾಯಿತು. ಮಧ್ಯಾಹ್ನ ಚಂಡಿಕಾ ಹೋಮದ ಪೂರ್ಣಾಹುತಿ ನೆರವೇರಿ, ಸುವಾಸಿನಿ ಆರಾಧನೆ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷೆ ಶಾಸಕಿ ಭಾಗೀರಥಿ ಮುರುಳ್ಯ, ಪ್ರಧಾನ ಅರ್ಚಕ ಶ್ರೀಹರಿ ಕುಂಜೂರಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ವ್ಯವಸ್ಥಾಪನಾ ಸದಸ್ಯರಾದ ವೆಂಕಪ್ಪ ಗೌಡ ಆಲಾಜೆ, ರೂಪರಾಜ ರೈ ಕೆ.ಪಜಿಂಬಿಲ, ನಾಗೇಶ್ ಆಳ್ವ ಕಟ್ಟಬೀಡು, ಯೋಗಾನಂದ ಉಳ್ಳಲಾಡಿ, ಭಾಗ್ಯ ಪ್ರಸನ್ನ ಎಣ್ಮೂರು, ರಘುನಾಥ ಎಂಜೀರು, ವಾರಿಜಾಕ್ಷಿ ಕೇರ್ಪಡ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಶಿವಾನಂದ ಬೊಳ್ಕಜೆ, ಪ್ರಧಾನ ಕಾರ್ಯದರ್ಶಿ ಅನೂಪ್ ಕುಮಾರ್ ಆಳ್ವ, ಜತೆ ಕಾರ್ಯದರ್ಶಿ ಸೀತಾರಾಮ ಗೌಡ ನಾಗನಕಜೆ, ಜಯಪ್ರಕಾಶ್ ಲೆಕ್ಕೆಸಿರಿಮಜಲು, ಮಹಿಷ ಮರ್ದಿನಿ ಭಜನಾ ಮಂಡಳಿ ಅಧ್ಯಕ್ಷ ಸುಂದರ ಗೌಡ ಆರೆಂಬಿ, ಸೇರಿದಂತೆ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರು, ಸದಸ್ಯರು, ವಿವಿಧ ಸಮಿತಿಗಳ ಸದಸ್ಯರು, ಸೇವಾ ಸಮಿತಿ ಸದಸ್ಯರು, ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net