More

    ವಿಶ್ವ ಪರಿಸರ ದಿನದಂದು ರಸ್ತೆ ಬದಿಯಲ್ಲೇ ಗಾಂಜಾ ಗಿಡ ನೆಟ್ಟ ಯುವಕನಿಗಾಗಿ ಪೊಲೀಸರ ತಲಾಶ್!​

    ತಿರುವನಂತಪುರಂ: ಜೂನ್​ 5ರ ವಿಶ್ವ ಪರಿಸರ ದಿನದಂದು ಎಲ್ಲರೂ ಗಿಡಗಳನ್ನು ನೆಡುವಾಗ, ಅದೇ ದಿನ ಕೇರಳದ ಕೊಲ್ಲಂ ಜಿಲ್ಲೆಯ ಕಂದಚಿರ ಗ್ರಾಮದ ಕೆಲವರು ರಸ್ತೆ ಪಕ್ಕದಲ್ಲಿ ಗಾಂಜಾ ಗಿಡಗಳನ್ನು ನೆಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

    ಗಾಂಜಾ ಗಿಡ ನೆಡುವುದನ್ನು ನೋಡಿದ ಪ್ರತ್ಯಕ್ಷದರ್ಶಿಯೊಬ್ಬರು ಅಬಕಾರಿ ಇಲಾಖೆಗೆ ಮಾಹಿತಿ ನೀಡಿದಾಗ, ಕೊಲ್ಲಂನ ಅಬಕಾರಿ ವಿಶೇಷ ದಳದ ಸಬ್​ ಇನ್ಸ್​ಪೆಕ್ಟರ್​ ಟಿ. ರಾಜೀವ್​ ನೇತೃತ್ವದ ತಂಡವೊಂದು ಸ್ಥಳಕ್ಕೆ ಭೇಟಿ ನೀಡಿದಾಗ 60 ಮತ್ತು 30 ಸೆ.ಮೀ ಉದ್ದದ ಗಾಂಜಾ ಗಿಡಗಳು ಕಂದಚಿರದ ಕುರಿಶಾದಿ ಜಂಕ್ಷನ್​ ಮತ್ತು ಬೈಪಾಸ್​ ನಡುವಿನ ರಸ್ತೆಯಲ್ಲಿ ಪತ್ತೆಯಾಗಿವೆ.

    ಈ ಬಗ್ಗೆ ಪ್ರತ್ಯಕ್ಷದರ್ಶಿ ನೀಡಿರುವ ಮಾಹಿತಿ ಪ್ರಕಾರ, ಗಾಂಜಾ ವ್ಯಸನಿಯಾಗಿರುವ ಯುವಕನೊಬ್ಬ ಇತರೊಂದಿಗೆ ಸೇರಿ ವಿಶ್ವ ಪರಿಸರ ದಿನದಂದು ಗಾಂಜಾ ಗಿಡಗಳನ್ನು ರಸ್ತೆ ಬದಿಯಲ್ಲಿ ನೆಟ್ಟಿದ್ದಾನೆ. ಅದಕ್ಕೂ ಮುನ್ನ ಗಾಂಜಾ ಗಿಡಗಳು ಇಲ್ಲಿಯೇ ಬೆಳೆಯಬೇಕು ಎಂದು ಹೇಳಿ ಯುವಕರು ಗಿಡಗಳ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಆದರೆ, ಈವರೆಗೂ ಯಾರನ್ನು ಸಹ ಪ್ರಕರಣ ಸಂಬಂಧ ಬಂಧಿಸಿಲ್ಲ.

    ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು. ಗಾಂಜಾಕ್ಕಾಗಿ ಇತರೆ ರಾಜ್ಯಗಳಿಗೆ ಪ್ರಯಾಣಿಸಲು ಕರೊನಾ ಲಾಕ್​ಡೌನ್​ ಅಡ್ಡಿಯಾಗಿರುವುದರಿಂದ ಗಾಂಜಾ ಲಾಬಿ ಮಾಡುವವರು ಹೊಸ ದಾರಿಯನ್ನು ಕಂಡುಕೊಂಡಿದ್ದಾರೆಂದು ತಿಳಿದುಬಂದಿದೆ ಎಂದು ಸಹಾಯಕ ಅಬಕಾರಿ ಆಯುಕ್ತರಾದ ಬಿ. ಸುರೇಶ್​ ತಿಳಿಸಿದ್ದಾರೆ. (ಏಜೆನ್ಸೀಸ್​)

    ಯುವತಿಯರು ವಾಸವಿದ್ದ ಬಾಡಿಗೆ ಮನೆಯ ಗುಟ್ಟು ದಿಢೀರ್​ ಪೊಲೀಸ್​ ದಾಳಿಯಿಂದ ರಟ್ಟು!

    ಬ್ಲ್ಯಾಕ್​ಫಂಗಸ್​​ಗೆ ಅಗ್ಗದ ಚಿಕಿತ್ಸೆ!; 35,000 ರೂಪಾಯಿ ಬದಲು ದಿನಕ್ಕೆ 350 ರೂ. ವೆಚ್ಚ

    ಯಡಿಯೂರಪ್ಪ ಮಾಗಿದ ವ್ಯಕ್ತಿತ್ವ ಸಾಬೀತು; ರಾಜ್ಯ ಬಿಜೆಪಿಗೆ ಬಿಎಸ್​ವೈ ಅನಿವಾರ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts