More

    ಬ್ಲ್ಯಾಕ್​ಫಂಗಸ್​​ಗೆ ಅಗ್ಗದ ಚಿಕಿತ್ಸೆ!; 35,000 ರೂಪಾಯಿ ಬದಲು ದಿನಕ್ಕೆ 350 ರೂ. ವೆಚ್ಚ

    ಪುಣೆ: ಕೋವಿಡ್-19 ಚೇತರಿಕೆ ಬಳಿಕ ಕಂಡುಬರುತ್ತಿರುವ ಕಪ್ಪು ಶಿಲೀಂಧ್ರ (ಮ್ಯುಕೊರ್​ವೆುೖಕೊಸಿಸ್-ಎಂಎಂ) ರೋಗದ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಕಡಿಮೆ ಮಾಡುವ ವಿಧಾನವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಚಿಕಿತ್ಸೆಗೆ ಪ್ರತಿ ದಿನ ಸುಮಾರು 35,000 ರೂಪಾಯಿ ವೆಚ್ಚ ತಗಲುತ್ತಿದ್ದು ಅದನ್ನು ಕೇವಲ 350 ರೂಪಾಯಿಗೆ ತಗ್ಗಿಸುವ ಈ ಚಿಕಿತ್ಸಾ ವಿಧಾನ ಜನಸಾಮಾನ್ಯರು ಹಾಗೂ ಮಧ್ಯಮ ವರ್ಗದವರಿಗೆ ವರದಾನ ಆಗಲಿದೆ. ರೋಗಿಗಳ ರಕ್ತದಲ್ಲಿನ ಕ್ರೀಟಿನೈನ್ ಮಟ್ಟವನ್ನು ಟ್ರ್ಯಾಕ್​ ಮಾಡುವ ಮೂಲಕ ಚಿಕಿತ್ಸಾ ವೆಚ್ಚದ ಹೊರೆ ತಗ್ಗಿಸಬಹುದಾಗಿದೆ. ಕಪ್ಪು ಶಿಲೀಂಧ್ರ ಚಿಕಿತ್ಸೆಯಲ್ಲಿ ಪ್ರಮುಖವಾದ ಆಂಫೋಟೆರಿಸಿನ್ ಇಂಜೆಕ್ಷನ್​ನ ಲಿಪೊಸೊಮಾಲ್ ಆವೃತ್ತಿಯು ತುಂಬಾ ದುಬಾರಿಯಾದುದು. ಆದರೆ ಅದೇ ಔಷಧದ ಸಾಂಪ್ರದಾಯಿಕ ರೂಪ ಅಗ್ಗವಾಗಿದೆ. ಆದರೆ ಅದನ್ನು ತುಂಬಾ ಜಾಗೃತೆಯಿಂದ ನೀಡಬೇಕು. ಕಿಡ್ನಿಯಲ್ಲಿ ರಕ್ತ ವಿಷಮಯವಾಗುವುದನ್ನು ತಪ್ಪಿಸಲು ಪ್ರತಿ ಎರಡು ದಿನಕ್ಕೊಮ್ಮೆ ರಕ್ತ ಪರೀಕ್ಷೆ ಮಾಡಿಕೊಳ್ಳಬೇಕಾಗುತ್ತದೆ. ರಕ್ತದ ಕ್ರೀಟಿನೈನ್ ಮಟ್ಟ ಏರಿದರೆ, 21 ದಿನಗಳ ಔಷಧ ಕೋರ್ಸ್​ನ್ನು ಕೇವಲ ಎರಡರಿಂದ ಮೂರು ದಿನಗಳ ‘ಪಿಟ್ ಸ್ಟಾಪ್ಸ್’ನೊಂದಿಗೆ ಮುಗಿಸಿ ದೇಹವನ್ನು ಸಹಜಗೊಳಿಸಬಹುದು. ಪಿಟ್ ಸ್ಟಾಪ್ಸ್ ನ್ನು ‘ಆಂಫೋಟೆರಿಸಿನ್ ಹಾಲಿಡೇಸ್’ ಎಂದೂ ಹೇಳಲಾಗುತ್ತದೆ.

    ಕ್ರೀಟಿನೈನ್ ಎಂದರೇನು?: ಕಿಡ್ನಿ ಮೂಲಕ ದೇಹದಿಂದ ಹೊರ ಹೋಗುವ ಒಂದು ವ್ಯರ್ಥ ಉತ್ಪನ್ನವೇ ಕ್ರೀಟಿನೈನ್.

    ಇಂಜೆಕ್ಷನ್ ಅಡ್ಡಪರಿಣಾಮ: ಮಧ್ಯ ಪ್ರದೇಶದ ಸಾಗರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಆಂಫೋಟೆರಿಸಿನ್ ಬಿ ಇಂಜೆಕ್ಷನ್ ಪಡೆದ 27 ಬ್ಲ್ಯಾಕ್​ಫಂಗಸ್ ರೋಗಿಗಳಲ್ಲಿ ಅಡ್ಡಪರಿಣಾಮ ಉಂಟಾಗಿದೆ. ಅವರಲ್ಲಿ ಲಘು ಜ್ವರ, ಮೈ ನಡುಕ, ವಾಂತಿ ಮುಂತಾದ ಲಕ್ಷಣಗಳು ಕಂಡುಬಂದಿವೆಂದು ಬುಂದೇಲ್​ಖಂಡ್ ಮೆಡಿಕಲ್ ಕಾಲೇಜ್​ನ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಇಂಜೆಕ್ಷನ್ ಬಳಕೆ ಸ್ಥಗಿತಗೊಳಿಸಲಾಗಿದೆ.

    ಅನಗತ್ಯ ಆತಂಕ: ಸಾಂಪ್ರದಾಯಿಕ ಆಂಫೋಟೆರಿಸಿನ್ ಬಗೆಗಿನ ‘ಅನಪೇಕ್ಷಿತ’ ಕಳವಳ ನಿವಾರಿಸುವುದು ಅಗತ್ಯ ಎಂದು ಇಎನ್​ಟಿ ಸರ್ಜನ್ ಸಮೀರ್ ಜೋಷಿ ಹೇಳಿದ್ದಾರೆ. ಆಂಫೋಟೆರಿಸನ್​ನ ಎರಡೂ ವಿಧಗಳ ಪರಿಣಾಮ ಒಂದೇ ರೀತಿಯಿದೆ ಎನ್ನುವುದು ವೈದ್ಯರ ಅಭಿಪ್ರಾಯವಾಗಿದೆ. ಗಣನೀಯ ಪ್ರಮಾಣದ ಅನ್ಯವ್ಯಾಧಿ ಇರುವ ರೋಗಿಗಳಿಗೆ ಸಾಂಪ್ರದಾಯಿಕ ರೂಪದ ಇಂಜೆಕ್ಷನ್ ನೀಡಬಾರದು ಎನ್ನುವುದು ಒಂದು ಮಹತ್ವದ ಸಂಗತಿಯಾಗಿದೆ. ಮೂತ್ರಪಿಂಡ ವೈಫಲ್ಯ ಮತ್ತು ಡಯಾಬಿಟಿಕ್ ಕೆಟೋಸಿಡೊಸಿಸ್​ನಂಥ ವ್ಯಾಧಿ ಅವುಗಳಲ್ಲಿ ಮುಖ್ಯವಾದವು. ಇತರ ರೋಗಿಗಳಲ್ಲಿ ಸಾಂಪ್ರದಾಯಿಕ ಆಂಫೋಟೆರಿಸಿನ್ ಔಷಧ ಕಪು್ಪ ಶಿಲೀಂಧ್ರ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ ಎಂಬುದನ್ನು ತಜ್ಞರು ಕಂಡುಕೊಂಡಿದ್ದಾರೆ. ‘ಲಿಪೊಸೊಮಾಲ್ ಆಂಫೋಟೆರಿಸಿನ್ ಸಾಂಪ್ರದಾಯಿಕ ಆಂಫೋಟೆರಿಸಿನ್​ಗಿಂತ ಸುರಕ್ಷಿತ ಎನ್ನುವಲ್ಲಿ ಅನುಮಾನವಿಲ್ಲ. ಸುರಕ್ಷಿತ ಆವೃತ್ತಿಯನ್ನೇ ಎಲ್ಲರೂ ಬಯಸುತ್ತಾರೆ. ಆದರೆ ಎರಡೂ ರೂಪದ ಔಷಧಗಳ ಪರಿಣಾಮದಲ್ಲಿ ವ್ಯತ್ಯಾಸವೇನೂ ಇಲ್ಲ’ ಎನ್ನುವುದು ಪುಣೆಯ ಬಿಜೆ ಮೆಡಿಕಲ್ ಕಾಲೇಜ್ ಮತ್ತು ಸಸೂನ್ ಜನರಲ್ ಆಸ್ಪತ್ರೆಯ ಎಎನ್​ಟಿ ವಿಭಾಗದ ಮುಖ್ಯಸ್ಥ ಜೋಷಿಯವರ ಅಭಿಮತ.

    ಯಡಿಯೂರಪ್ಪ ಮಾಗಿದ ವ್ಯಕ್ತಿತ್ವ ಸಾಬೀತು; ರಾಜ್ಯ ಬಿಜೆಪಿಗೆ ಬಿಎಸ್​ವೈ ಅನಿವಾರ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts