More

    ಜಾತ್ರಾ-ಉತ್ಸವಗಳಿಂದ ಸಾಮರಸ್ಯ ಬಲ ಹೆಚ್ಚಳ; ಡಿ.ಎಲ್. ಚವಾಣ್

    ವಿಜಯಪುರ: ಜಾತ್ರೆ-ಉತ್ಸವಗಳು ಕೋಮುಸೌಹಾರ್ದತೆಯ ಪ್ರತೀಕ. ಸಮಾಜದಲ್ಲಿ ಸಾಮರಸ್ಯದ ಪ್ರತಿಬಿಂಬ ಮೂಡಿಸುತ್ತವೆ. ಸಂತೋಷದ ಹೊನಲು ಹರಿಸುತ್ತವೆ ಎಂದು ಬಂಜಾರಾ ಶಿಕ್ಷಣ ಸಂಸ್ಥೆ ಜಿಲ್ಲಾಧ್ಯಕ್ಷ ಡಿ.ಎಲ್. ಚವಾಣ್ ಹೇಳಿದರು.

    ತಾಲೂಕಿನ ಕನ್ನೂರ ಗ್ರಾಮದ ಸವಾಯಿ ವಸ್ತಿ ತೋಟದಲ್ಲಿನ ಹಜರತ್‌ಪೀರ್ ದರ್ಗಾದ ಶಾಹನೂರವಲಿ ಬಾಬಾ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ರಾತ್ರಿ ಜರುಗಿದ ಧಾರ್ಮಿಕ ಧರ್ಮಸಭೆ, ಗಣ್ಯರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ದೇವರ ಅನುಗ್ರಹದಿಂದ ಜೀವನ ಪಥ ಪಾವನಗೊಳ್ಳುತ್ತವೆ. ಈ ದರ್ಗಾದ ದೇವರು ಒಳಿತು ಮಾಡುತ್ತದೆ. ಬಾಬಾರ ದೈವಬಲ ದೊಡ್ಡದಾಗಿದೆ. ಹೀಗಾಗಿ ಪ್ರೇರಣಾದಾಯಕ ದೇವರಾಗಿ ಮಹಿಮೆ ಸಾರುತ್ತಿದ್ದಾರೆ. ಜಾತಿ, ಮಥ, ಪಂಥಗಳ ಮೇಲು-ಕೀಳೆನ್ನದೇ ಸರ್ವಧರ್ಮಿಯರೂ ಒಂದೇ ಎಂಬ ವಿಶಾಲ ಮನೋಜ್ಞ ಭಾವದಿಂದ ಜಾತ್ರೆಯಲ್ಲಿ ಸೇರಿ ಭಕ್ತಿಭಾವದಿಂದ ಧನ್ಯತೆ ಮೆರೆಯುತ್ತಿರುವುದು ವಿಶೇಷವಾಗಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಕನ್ನೂರ ಗ್ರಾಪಂ ಅಧ್ಯಕ್ಷ ವಿಠಲ ಭಜಂತ್ರಿ ಮಾತನಾಡಿ, ಜಾತ್ರಾ ಮಹೋತ್ಸವ ಅತ್ಯಂತ ಉತ್ಸುಕತೆಯಿಂದ ನಡೆಯಲು ಕನ್ನೂರ ಗ್ರಾಮ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಸಕಲ ಹಿರಿಯರು, ಭಕ್ತರ ಸಹಾಯ, ಸಹಕಾರದ ಶ್ರಮವೇ ಕಾರಣವಾಗಿದೆ. ಧರ್ಮಕಾರ್ಯಗಳು ನಿರಂತರ ನಡೆಯಲಿ. ಎಲ್ಲೆಡೆಗೂ ಶಾಂತಿ, ನೆಮ್ಮದಿ ಲಭಿಸಲಿ ಎಂದರು.

    ದೇವರ ಉಪಾಸಕಿ ಶಾರದಾಬಾಯಿ ಮೋಹನ ರಾಠೋಡ ಸಾನ್ನಿಧ್ಯ ವಹಿಸಿದ್ದರು.

    ಹೊರ್ತಿ ಪಿಕೆಪಿಎಸ್ ಅಧ್ಯಕ್ಷ ಅಣ್ಣಪ್ಪ ಪೂಜಾರಿ, ಸಚೀನ ರಾಠೋಡ, ಕಾಳು ಬೆಳ್ಳುಂಡಗಿ, ಬಾಬು ಚವಾಣ್, ದಲಿಸಾಬಾ ಹಿಪ್ಪರಗಿ, ಸಫಿಕ ಸಲೀಂ ಮುಜಾವರ್, ಮುತ್ತಣ್ಣಗೌಡ ಪಾಟೀಲ, ವಿಜು ರಾಠೋಡ, ಪುನೀತ್ ಚವಾಣ್, ಸವಾಯಿ ರಾಠೋಡ, ರಮೇಶಗೌಡ ಬಿರಾದಾರ, ಸೀತಾರಾಮ ಚವಾಣ್, ಮಶಾಖಸಾಬ ಮಂದಾರೆ, ಸಂಜು ಚವಾಣ್, ಸಂತೋಷ ಚವಾಣ್, ಪ್ರಿಯಾಂಕಾ ಚವಾಣ್, ಸಂಜಯಗಾಂಧಿ ಚವಾಣ್, ಅಕ್ಷತಾ ಚವಾಣ್, ಪುನೀತ ಚವಾಣ್, ಸಂಜನಾ ರಾಠೋಡ, ಸಂತೋಷ ಚವಾಣ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts