More

    ರೈಲ್ವೆ ಕ್ರಾಸಿಂಗ್ ವೇಳೆ ಎಕ್ಸ್​ಪ್ರೆಸ್​ ರೈಲು ಡಿಕ್ಕಿ: ತಾಯಿಯ ಕಣ್ಣೆದುರಲ್ಲೇ ಮಗಳ ಸಾವು, ಭಯಾನಕ ವಿಡಿಯೋ ಸೆರೆ

    ಕಣ್ಣೂರು: ರೈಲ್ವೆ ಕ್ರಾಸಿಂಗ್​ ದಾಟುವಾಗ ತುಂಬಾ ಜಾಗ್ರತೆ​ ವಹಿಸಬೇಕು. ಜನರನ್ನು ಎಚ್ಚರಿಸಲೆಂದೇ ಕ್ರಾಸಿಂಗ್​ ಬಳಿ ಸೂಚನಾ ಫಲಕವನ್ನು ಅಳವಡಿಸಲಾಗಿರುತ್ತದೆ. ಆದರೆ, ಅದನ್ನು ಗಮನಿಸದೆ ಮೈಮರೆತು ಕ್ರಾಸಿಂಗ್​ ದಾಟಿದರೆ, ಕೆಲವೊಮ್ಮೆ ಏನಾಗಬಹುದು ಎಂಬುದಕ್ಕೆ ಕೇರಳದಲ್ಲಿ ನಡೆದಿರುವ ಈ ಒಂದು ಭಯಾನಕ ಘಟನೆ ತಾಜಾ ಉದಾಹರಣೆ ಆಗಿದೆ.

    ರೈಲ್ವೆ ಕ್ರಾಸ್​ ದಾಟುವಾಗ ರೈಲು ಡಿಕ್ಕಿ ಹೊಡೆದು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸ್ಥಳದಲ್ಲೇ ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಕ್ರಾಸಿಂಗ್​ ಮುಂದೆ ಕಾರಿನಲ್ಲಿ ಇಳಿದ ವಿದ್ಯಾರ್ಥಿನಿ ಇನ್ನೊಂದು ಬದಿಯಲ್ಲಿ ನಿಂತಿದ್ದ ಶಾಲಾ ಬಸ್​ ಏರಲು ತರಾತುರಿಯಲ್ಲಿ ಕ್ರಾಸಿಂಗ್​ ದಾಟುವಾಗ ಮಿಂಚಿನ ವೇಗದಲ್ಲಿ ಬಂದ ರೈಲು ಡಿಕ್ಕಿ ಹೊಡೆದಿದೆ.

    ಈ ಘಟನೆ ಶನಿವಾರ ಮುಂಜಾನೆ 7.45ರ ಸುಮಾರಿಗೆ ನಡೆದಿದೆ. ಮೃತಳನ್ನು ನಂದಿತಾ ಎಂದು ಗುರುತಿಸಲಾಗಿದೆ. ಕಣ್ಣೂರಿನ ಕಾಕ್ಕಡ್​ನಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ನಂದಿತಾ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಕಣ್ಣೂರು ಕಡೆಗೆ ಹೊರಟ್ಟಿದ್ದ ಪರುಶುರಾಮ್​ ಎಕ್ಸ್​ಪ್ರೆಸ್​ ನಂದಿತಾಳಿಗೆ ಡಿಕ್ಕಿ ಹೊಡೆದಿದೆ.

    ಪ್ರತ್ಯಕ್ಷದರ್ಶಿ ಒಬ್ಬರು ಹೇಳುವ ಪ್ರಕಾರ ನಂದಿತಾ ರೈಲ್ವೆ ಕ್ರಾಸಿಂಗ್​ ದಾಟಿದ್ದಳು. ಆದರೆ, ಆಕೆಯ ಬ್ಯಾಗ್​ ರೈಲಿಗೆ ಸಿಲುಕಿದ್ದರಿಂದ ರೈಲಿನ ಅಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ದುರಂತದ ಸಂಗತಿಯೆಂದರೆ, ನಂದಿತಾ ರೈಲಿಗೆ ಸಿಲುಕಿದಾಗ ಆಕೆಯ ತಾಯಿ ಮತ್ತೊಂದು ರೈಲು ದ್ವಾರದ ಬಳಿ ನಿಂತಿದ್ದರು. ಕಣ್ಣ ಎದುರಲ್ಲೇ ಮಗಳ ದುರ್ಮರಣವು ತಾಯಿಯ ಮನಸ್ಸನ್ನು ನುಚ್ಚು ನೂರು ಮಾಡಿದೆ.

    ಅಪಘಾತದ ಬೆನ್ನಲ್ಲೇ ಹತ್ತಿರ ಓಡಿ ಬಂದ ಸ್ಥಳೀಯರು ನಂದಿತಾಳನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೃತ ನಂದಿತಾ, ಲಿಸಿ ಮತ್ತು ದಿವಂಗತ ಕಿಶೋರ್ ಅವರ ಪುತ್ರಿ. ವರ್ಷಗಳ ಹಿಂದೆ ಅನಾರೋಗ್ಯದಿಂದ ಕಿಶೋರ್ ಸಾವನ್ನಪ್ಪಿದ್ದರು. (ಏಜೆನ್ಸೀಸ್​)

    (ವಿಡಿಯೋ ಕೃಪೆ: ಮಾತೃಭೂಮಿ ಇಂಗ್ಲಿಷ್​)

    ಮೀನುಗಾರರಿಗೆ ಸಿಕ್ಕ 28 ಕೋಟಿ ಮೌಲ್ಯದ ತಿಮಿಂಗಿಲ ವಾಂತಿನಾ ಏನು ಮಾಡಿದ್ರು ಗೊತ್ತಾ? ಇಲ್ಲಿದೆ ಹುಬ್ಬೇರಿಸೋ ಸಂಗತಿ

    ಅಪಘಾತದಲ್ಲಿ ಶಿವಾಜಿ ನಗರ ಪೊಲೀಸ್ ಸಿಬ್ಬಂದಿ ಸಾವು: ಗೃಹ ಸಚಿವ ಆರಗ ಜ್ಞಾನೇಂದ್ರ ಕಂಬನಿ

    ಶಿವಾಜಿ ನಗರ ಪೊಲೀಸ್ ಸಿಬ್ಬಂದಿ ದುರಂತ ಸಾವು: ಅಪಘಾತದ ಭೀಕರತೆ ಬಿಚ್ಚಿಟ್ಟ ಆಂಧ್ರದ ಪೊಲೀಸ್​ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts