More

    VIDEO: ಚಾಲಕನ ಪಾರ್ಕಿಂಗ್​ ಚಾಕಚಕ್ಯತೆಗೆ ಬೆರಗು ಮೂಡದೇ ಇರದು…!

    ಕಾರು ಚಲಾಯಿಸುವುದಷ್ಟೇ ಅಲ್ಲ, ಅದನ್ನು ಸರಿಯಾಗಿ ಪಾರ್ಕ್​ ಮಾಡುವುದು ಕೂಡ ಕೌಶಲವೇ. ವಿಶಾಲ ಜಾಗ, ಡ್ರೈವ್​ ವೇ ಇದ್ದಲ್ಲಿ ಕಾರನ್ನು ನಿಲ್ಲಿಸುವುದು ಅಂಥ ಸಮಸ್ಯೆಯೇನಲ್ಲ. ಆದರೆ, ರಸ್ತೆ ಪಕ್ಕದಲ್ಲಿ ಕಾರಿಗಿಂತಲೂ ಉದ್ದಕ್ಕಿಂತ ಚಿಕ್ಕದಾದ ಜಾಗದಲ್ಲಿ ನಿಲ್ಲಿಸಬೇಕೆಂದರೆ ಸಾಹಸವನ್ನೇ ಮಾಡಬೇಕು. ಜತೆಗೆ ಅದಕ್ಕೆ ಕೌಶಲವೂ ಬೇಕು..!

    ಈಗಂತೂ ಕಾರುಗಳಿಗೆ ಹಿಂಬದಿ ಕ್ಯಾಮರಾ ಸೆನ್ಸರ್​ಗಳು ಬಂದಿವೆ. ಇವು ಕಾರು ನಿಲ್ಲಿಸುವಲ್ಲಿ ಸಹಾಯ ಮಾಡುತ್ತವೆ. ಆದರೆ, ಅದ್ಯಾವುದು ಇಲ್ಲದ ಕಾರನ್ನು ರಸ್ತೆ ಪಕ್ಕದ ಚರಂಡಿ ಮೇಲಿನ ಕಾಂಕ್ರೀಟ್​ ಸ್ಲ್ಯಾಬ್​ನಲ್ಲಿ ನಿಲ್ಲಿಸಬೇಕೆಂದರೆ ಧೈರ್ಯವೂ ಬೇಕು ಎಂಬುದು ಈ ವಿಡಿಯೋವನ್ನು ನೋಡಿದರೆ ತಿಳಿಯುತ್ತದೆ.

    ಇದನ್ನೂ ಓದಿ; ಸೋಂಕಿನ ಕೇಂದ್ರಗಳಾಗುತ್ತಿವೆ ಢಾಬಾಗಳು; 90 ಸಿಬ್ಬಂದಿಗೆ ಕೋವಿಡ್​; 10 ಸಾವಿರಕ್ಕೂ ಅಧಿಕ ಜನರಿಗೆ​ ಆತಂಕ 

    ಈ ಕೇರಳಿಗನ ಸಾಹಸಕ್ಕೆ ನೆಟ್ಟಿಗರು ಫಿಧಾ ಆಗಿದ್ದಾರೆ. ಈತನನ್ನು ಕಿಂಗ್​ ಆಫ್​ ಪ್ಯಾರಲಲ್​ ಪಾರ್ಕಿಂಗ್​ ಎಂಬ ಬಿರುದನ್ನು ನೀಡಿದ್ದಾರೆ. ಒಮದೇ ದಿನದಲ್ಲಿ ಈ ವಿಡಿಯೋ ಚಾಲಕನಿಗೆ ಸ್ಟಾರ್​ ವ್ಯಾಲ್ಯೂ ತಂದು ಕೊಟ್ಟಿದೆ.

    ಕೇರಳ ವ್ಯಕ್ತಿಯ ಪಾರ್ಕಿಂಗ್​ ಕೌಶಲಕ್ಕೆ ಬೆರಗಾಗಲೇಬೇಕು…!

    ಕಾರಿಗಿಂತಲೂ ಕಿರಿದಾದ ಜಾಗದಲ್ಲಿ ರಸ್ತೆ ಬದಿಯ ಚರಂಡಿ ಮೇಲಿನ ಕಾಂಕ್ರೀಟ್​ ಸ್ಲ್ಯಾಬ್​ ಮೇಲೆ ಕಾರು ನಿಲ್ಲಿಸುವ ಈತನ ಕೌಶಲಕ್ಕೆ ಬೆರಗಾಗಲೇಬೇಕು….!

    Posted by Vijayavani on Tuesday, September 8, 2020

    ಕರೊನಾ ಮರು ಸೋಂಕು; ತಿಂಗಳ ಬಳಿಕ ಮತ್ತೆ ಕೋವಿಡ್​; ಬೆಂಗಳೂರಿನಲ್ಲಿ ಪತ್ತೆಯಾಯ್ತು ಮೊದಲ ಪ್ರಕರಣ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts