More

    ಗೋಲ್ಡ್ ಸ್ಮಗ್ಲಿಂಗ್: ಕೊನೆಗೂ ದುಬೈನಲ್ಲಿ ಸೆರೆ ಸಿಕ್ಕ ಫೈಸಲ್ ಫರೀದ್

    ನವದೆಹಲಿ: ದೇಶಾದ್ಯಂತ ಸಾಕಷ್ಟು ಸುದ್ದಿ ಮಾಡಿದ್ದ ಕೇರಳದ 30 ಕಿಲೋ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಫೈಸಲ್ ಫರೀದ್‌ನನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಯುಎಇ) ಬಂಧಿಸಲಾಗಿದೆ. ಯುಎಇಯಿಂದ ತಿರುವನಂತಪುರಂಗೆ ರಾಜತಾಂತ್ರಿಕ ಬ್ಯಾಗೇಜ್‌ನಲ್ಲಿ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಪಾಲ್ಗೊಂಡ ಆರೋಪ ಈತನ ಮೇಲಿದೆ.

    ಈತನ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಭಾರತವು ಇಂಟರ್‌ಪೋಲ್‌ಗೆ ನಿನ್ನೆ ಮನವಿ ಮಾಡಿತ್ತು. ಯುಎಇ ಕಾನ್ಸುಲೇಟ್ ಕಚೇರಿಗೆ 30 ಕಿಲೋ ಚಿನ್ನವನ್ನು ಕಳಿಸಿದವನು ಇವನೇ. ಮೂಲತಃ ತ್ರಿಶೂರ್‌ನವನಾದ ಈತ ದುಬೈನ ಅಲ್ ರಶೀದಿಯಾ ಎಂಬಲ್ಲಿ ತನ್ನ ಕುಟುಂಬದೊಂದಿಗೆ ವಾಸವಿದ್ದ. ಯುಎಇಯಲ್ಲಿ ಬಿಸಿನೆಸ್ ಮಾಡುತ್ತಿದ್ದ. ಮನೆಯಿಂದಲೇ ಈತನನ್ನು ವಶಕ್ಕೆ ಪಡೆದಿದ್ದು, ಈಗ ದುಬೈ ಪೊಲೀಸರ ವಶದಲ್ಲಿದ್ದಾನೆ. ವಿಚಾರಣೆ ನಡೆಯುತ್ತಿದೆ ಎಂದು ಎನ್‌ಐಎ ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಇದನ್ನೂ ಓದಿ: ಚಿನ್ನದ ರಾಣಿಯ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಹಿರಿಯ ಅಧಿಕಾರಿಗಳು!

    ಒಟ್ಟು 230 ಕೆಜಿ ಬಂಗಾರ ಸ್ಮಗ್ಲಿಂಗ್: ತಿರುವನಂತರಪುರದಲ್ಲಿರುವ ಯುಎಇ ಕಾನ್ಸುಲ್ ಕಚೇರಿ ಮಾರ್ಗದಲ್ಲೇ ಒಟ್ಟು ಒಂದು ವರ್ಷದಲ್ಲಿ 230 ಕೆಜಿ ಚಿನ್ನ ಕಳ್ಳಸಾಗಣೆ ಆಗಿತ್ತೆಂಬ ಮಾಹಿತಿ ಬೆಳಕಿಗೆ ಬಂದಿದ್ದು, ಒಟ್ಟಾರೆ ಅಕ್ರಮದ ಮೊತ್ತ ಹಾಗೂ ಅದರ ಹಿಂದಿರುವ ಜಾಲದ ವಿಸ್ತಾರ ವ್ಯಾಪಿಸುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಶಂಕಿಸಿದ್ದಾರೆ. 30 ಕೆಜಿ ಚಿನ್ನ ಕಳ್ಳ ಸಾಗಣೆ ಹಗರಣದ ಇಬ್ಬರು ಆರೋಪಿಗಳು ಕಳ್ಳಸಾಗಣೆ ಮಾರ್ಗದ ಸುಳಿವು ನೀಡಿದ್ದಾರೆ. ಈ ಸಂಬಂಧ ಶನಿವಾರ ನಗರದ ವಿವಿಧೆಡೆ ಶೋಧ ನಡೆಸಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಸ್ವಪ್ನಾ ಸುರೇಶ್ ಹಾಗೂ ಸರಿತ್ ಅವರನ್ನು ಅವರ ಮನೆಗಳಿಗೆ ಕರೆದೊಯ್ದು ತನಿಖೆ ನಡೆಸಿರುವ ಮಾಹಿತಿಯನ್ನು ತನಿಖಾಧಿಕಾರಿಗಳು ನೀಡಿದ್ದಾಗಿ ಖಾಸಗಿ ಸುದ್ದಿವಾಹಿನಿ ವರದಿ ಮಾಡಿದೆ.

    12ರಿಂದ 13 ಬಾರಿ ಚಿನ್ನ ಸಾಗಣೆಗೆ ಕಾನ್ಸುಲ್ ಕಚೇರಿ ಬಳಕೆಯಾಗಿರುವ ಅನುಮಾನವಿದೆ. ಸ್ವಪ್ನಾ ಸುರೇಶ್ ಹಾಗೂ ಸರಿತ್ ಈ ಮಾರ್ಗದ ಹಿಂದಿನ ಕಾರಣಕರ್ತರಾಗಿದ್ದು, ಇತರ ಆರೋಪಿಗಳಾದ ಸಂದೀಪ್ ನಾಯರ್ , ರಮೀಜ್ ಕೂಡ ಜಾಲದಲ್ಲಿದ್ದುಕೊಂಡು ಹಣಕಾಸು ನೆರವು ನೀಡಿ ವಿತರಕರ ಜತೆ ನಂಟು ಹೊಂದಿರಬಹುದೆಂದು ಅಂದಾಜಿಸಲಾಗಿದೆ. ಈ ಪ್ರಕರಣಕ್ಕೆ ಮಹತ್ವ ಸಾಕ್ಷಿಯಾದ ಕಾನ್ಸುಲ್ ಕಚೇರಿಯ ಅಧಿಕಾರಿಯೊಬ್ಬರು ದುಬೈಗೆ ಪರಾರಿಯಾಗಿದ್ದಾರೆ. ಕಾನ್ಸಲ್ ಜನರಲ್ ಸಮ್ಮುಖದಲ್ಲಿ ಚಿನ್ನ ಪತ್ತೆಯಾದ ಬ್ಯಾಗ್ ತೆರೆಯುವುದಕ್ಕೆ ವಿದೇಶಾಂಗ ಸಚಿವಾಲಯದಿಂದ ಪ್ರಾಥಮಿಕ ಅನುಮತಿ ಪಡೆಯಲಾಗಿದೆ. ಈ ಪ್ರಕ್ರಿಯೆ ನಡೆದ ಬಳಿಕ ಅಸಲಿ ಆರೋಪಿಗಳ ಕೈವಾಡ, ಸಂಪರ್ಕದ ಸ್ಪಷ್ಟ ಮಾಹಿತಿ ಲಭಿಸುವ ಸಾಧ್ಯತೆ ಇದೆ.

    ಇದನ್ನೂ ಓದಿ: ಈ ‘ಚಿನ್ನದ ರಾಣಿ’ಯ ಇತಿಹಾಸವೇ ರೋಚಕ; ಇವಳಿಂದ ಕೇರಳ ಸಿಎಂ ಕುರ್ಚಿ ಗಡಗಡ!

    ಮತ್ತೊಂದೆಡೆ ಜಾಮೀನಿಗೆ ಅರ್ಜಿ ಸಲ್ಲಿಸಿರುವ ಸ್ವಪ್ನಾ ಸುರೇಶ್, ಕಾನ್ಸುಲ್ ಕಚೇರಿಯ ಮನವಿ ಮೇರೆಗೆ ಕಳ್ಳಸಾಗಣೆ ದಂಧೆಯಲ್ಲಿ ಕೈಜೋಡಿಸಬೇಕಾಯಿತೆಂದು ಹೇಳಿಕೆ ನೀಡಿದ್ದಾರೆ. ಸ್ವಪ್ನಾ ಕೇರಳದ ರಾಜ್ಯ ಮಾಹಿತಿ ಮೂಲಸೌಕರ್ಯ ಸಂಸ್ಥೆಯ ಸ್ಪೇಸ್ ಪ್ರಾಜೆಕ್ಟ್‌ನ ಉದ್ಯೋಗಿ ಆಗಿದ್ದರು. ಸ್ವಪ್ನಾ ಖಾಸಗಿ ಘಟಕದ ನೌಕರಳಾಗಿದ್ದಳೇ ಹೊರತು ಆಕೆಗೆ ಸರ್ಕಾರಿ ನೌಕರಳೆಂದು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿರಲಿಲ್ಲ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆ ನಡುವೆಯೇ ಚಿನ್ನ ಕಳ್ಳಸಾಗಣೆ ಪ್ರಕರಣದ ವಿಚಾರ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಪ್ರತಿಪಕ್ಷ ಯುಡಿಎ್ ಸಜ್ಜಾಗುತ್ತಿದೆ.

    8 ಕೋಟಿ ರೂಪಾಯಿ ಚಿನ್ನ ಕಳ್ಳಸಾಗಣೆಗೆ ಸ್ವಪ್ನಾ ಗ್ಯಾಂಗ್ ಪಡೆದ ಕಮಿಷನ್ ಎಷ್ಟು?

    ಬಾಡಿಗೆ ವಿಮಾನದಲ್ಲಿ ಚಿನ್ನ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದ ಠಕ್ಕರು!

    ‘ಬಂಗಾರಿ’ಯ ಅರಬ್​ ಲಿಂಕ್​- ಕಳ್ಳಸಾಗಣೆ ಚಿನ್ನ ಯುಎಇ ಕಾನ್ಸುಲೇಟ್​ಗೆ 12 ಸಲ ತರಲಾಗಿತ್ತಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts