ಪಾಕ್​ ವಿಮಾನದ ಕಥೆಯೂ ಇದೇ ಆಗಿತ್ತು; ಇಳಿಯುವ ಕೆಲ ಕ್ಷಣಗಳ ಮುನ್ನ ಸಂಭವಿಸಿದ್ದ ದುರಂತ; 98 ಮಂದಿ ಬಲಿ

Airindia crash-2
Published on

ನವದೆಹಲಿ: ಕೋಳಿಕ್ಕೋಡ್​ನಲ್ಲಿ ಕ್ರ್ಯಾಷ್​​ ಲ್ಯಾಂಡಿಂಗ್​ ಆದ ವಿಮಾನ ದುರಂತ 10 ವರ್ಷಗಳ ಹಿಂದೆ ಮೇ 22ರಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ದುರಂತವನ್ನು ನೆನಪಿಸಿದೆ.

ಆದರೆ, ಇತ್ತೀಚೆಗೆ ಪಾಕಿಸ್ತಾನದಲ್ಲಿ ಸಂಭವಿಸಿದ್ದ ದುರಂತ ಥೇಟ್​ ಇದೇ ಘಟನೆಯನ್ನು ಹೋಲುತ್ತದೆ. ಇತ್ತೀಚೆಗೆ ಸಂಭವಿಸಿದ ವಿಮಾನ ದುರಂತಗಳ ಪಟ್ಟಿ ಇಲ್ಲಿದೆ.

ಕರಾಚಿ ವಿಮಾನ ದುರಂತ- ಮೇ 2020

ಇತ್ತೀಚೆಗೆಷ್ಟೇ ಕರಾಚಿಯಲ್ಲಿ ಪಾಕಿಸ್ತಾನ್​ ಇಂಟರ್​ ನ್ಯಾಷನಲ್​ ಏರ್​ಲೈನ್ಸ್​ ವಿಮಾನ ರನ್​ವೇಯಲ್ಲಿ ಇಳಿಯುವ ಕೆಲ ಕ್ಷಣಗಳ ಮುಂಚೆ ದುರಂತಕ್ಕೀಡಾಗಿತ್ತು. ವಿಮಾನದಲ್ಲಿದ್ದ 107 ಜನರ ಪೈಕಿ ದುರಂತದಲ್ಲಿ 98 ಜನರು ಬಲಿಯಾಗಿದ್ದರು. ಲ್ಯಾಂಡಿಂಗ್​ ವೇಳೆ ಸಮಸ್ಯೆ ಉಂಟಾಗಿ ವಿಮಾನವನ್ನು ಮತ್ತೆ ಮೇಲಕ್ಕೆ ಹಾರಿಸಲು ಅಸಾಧ್ಯವಾಗಿ ರನ್​ ವೇ ಪಕ್ಕದ ವಸತಿ ಪ್ರದೇಶದ ಮೇಲೆ ವಿಮಾನ ಅಪ್ಪಳಿಸಿತ್ತು. ಇದಲ್ಲದೇ 2016ರಲ್ಲಿ ಪಾಕ್​ ವಿಮಾನ ಗಿಲ್ಗಿಟ್​ ನಿಲ್ದಾಣದಲ್ಲಿ ರನ್​ವೇಯಿಂದ ಜಾರಿ 48 ಜನರು ಪ್ರಾಣ ಕಳೆದುಕೊಂಡಿದ್ದರು.

176 ಜನರನ್ನು ಕರೆದೊಯ್ಯುತ್ತಿದ್ದ ಉಕ್ರೇನ್​ ವಿಮಾನ ಟೆಹ್ರಾನ್​ ಮುಖ್ಯ ವಿಮಾನ ನಿಲ್ದಾಣದಿಂದ ಹಾರಿದ ಕೆಲವೇ ನಿಮಿಷಗಳಲ್ಲಿ ನೆಲಕ್ಕಪ್ಪಳಿಸಿತ್ತು. ಕೊನೆಗೆ ಇದು ಇರಾನ್​ ಹಾರಿಸಿದ ಕ್ಷಿಪಣಿಯಿಂದ ಸಂಭವಿಸಿದ ದುರಂತ ಎಂಬುದು ತಿಳಿದು ಬಂದಿತ್ತು.

ರಷ್ಯಾ ವಿಮಾನ ದುರಂತ- ಮೇ 2019

ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಸರಿಯಾಗಿ ಲ್ಯಾಂಡ್​ ಆಗದ ಕಾರಣ ರಷ್ಯಾದ ಏರೋಫ್ಲೋಟ್​ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಇಬ್ಬರು ಮಕ್ಕಳು ಸೇರಿ 41 ಜನರು ಭಸ್ಮವಾಗಿದ್ದರು.

ಇಥೋಪಿಯನ್​ ವಿಮಾನ ದುರಂತ- ಮಾರ್ಚ್​ 2019

ಆಡೀಸ್​ ಅಬಾಬಾ ಹಾಗೂ ಕೀನ್ಯಾ ರಾಜಧಾನಿ ನೈರೋಬಿ ನಡುವೆ ಸಂಚರಿಸುತ್ತಿದ್ದ ಇಥೋಪಿಯನ್​ ವಿಮಾನದಲ್ಲಿದ್ದ 149 ಮಂದಿ ಬಲಿಯಾಗಿದ್ದರು. ಆಡೀಸ್​ ಅಬಾಬಾದಿಂದ ಹೊರಟ ಕೆಲ ಕ್ಷಣದಲ್ಲಿಯೇ ದುರಂತ ಸಂಭವಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net