

ನವದೆಹಲಿ: ಪ್ರತಿಯೊಬ್ಬರೂ ತಮ್ಮ ಮದುವೆಯನ್ನು ಮದುವೆ ಮಂಟಪ, ಚರ್ಚ್ ಅಥವಾ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆಯಬೇಕೆಂದು ಬಯಸುತ್ತಾರೆ. ಇದೀಗ ಡೆಸ್ಟಿನೇಶನ್ ವೆಡ್ಡಿಂಗ್ ಕ್ರೇಜ್ ಜನರಲ್ಲೂ ಹಬ್ಬಿದೆ. ಆದರೆ ಇಲ್ಲೊಂದು ಜೋಡಿ ಎಲ್ಲ ಸ್ಥಳಗಳನ್ನು ಬಿಟ್ಟು ಶೌಚಾಲಯದಲ್ಲಿ ಮದುವೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಲೋಗನ್ ಅಬ್ನಿ ಮತ್ತು ಟಿಯಾನಾ ಎಲಿಸ್ಟಾಕ್ ಎಚ್ಒಪಿ ಗ್ಯಾಸ್ ಸ್ಟೇಶನ್ನಲ್ಲಿರುವ ಶೌಚಾಲಯದಲ್ಲಿ ಜೋಡಿ ವಿವಾಹವಾದರು ಮತ್ತು ಇಲ್ಲಿಯೇ ಅವರು ಒಟ್ಟಿಗೆ ವಾಸಿಸುವ ಮತ್ತು ಸಾಯುವ ಪ್ರತಿಜ್ಞೆ ಮಾಡಿದರು. ಫೆಬ್ರವರಿ 14 ರಂದು ಕೆಂಟುಕಿಯ ಶೌಚಾಲಯದಲ್ಲಿ ದಂಪತಿ ವಿವಾಹವಾದರು.
ವಿಭಿನ್ನವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತೀರುವ ಜೋಡಿಗಳ ಮದ್ಯೆ ಈ ಜೋಡಿ ವಿಶೇಷವಾಗಿ ಮದುವೆಯಾಗಲು ಹೀಗೆ ಮಾಡಿದ್ದಾರೆ. ಈ ಮದುವೆಗೆ ಸಂಬಂಧಿಸಿದ ತಮಾಷೆಯ ಕಥೆಯನ್ನು ತನ್ನ ಮಕ್ಕಳಿಗೆ ಹೇಳಲು ಈ ಜೋಡಿ ಎಲ್ಲರಿಗಿಂತ ವಿಭಿನ್ನವಾಗಿ ಮದುವೆಯಾಗಿದ್ದಾರೆ.
ಈ ಐಡಿಯಾ ಬಂದಿದ್ದು ಹೀಗೆ...HOP ಶಾಪ್ ತನ್ನ ವಿಶಿಷ್ಟ ಸ್ನಾನಗೃಹಗಳಿಗೆ ಹೆಸರುವಾಸಿಯಾಗಿದೆ. ಬಾತ್ರೂಮ್ನಲ್ಲಿ ಮದುವೆಯಾಗಲು ನಿರ್ಧರಿಸುತ್ತಿದ್ದೇವೆ. ಇದನ್ನು ನಾವು ತಮಾಷೆಗಾಗಿ ಹೇಳುತ್ತಿದ್ದರೂ, ನಂತರ ನಾವು ಅಂದುಕೊಂಡಂತೆ ಮದುವೆಯಾಗಲು ಸಾಧ್ಯವಾಯ್ತು. ಇದು ಮದುವೆಗೆ ವಿಭಿನ್ನ ಸ್ಥಳವಾಗಲಿದೆ ಎಂದು ನಿರ್ಧರಿಸಿ ಬಾಸ್ ಬಳಿ ಕೇಳಿದಾರ ಅವರೂ ಕೂಡಾ ಒಪ್ಪಿಗೆ ಸೂಚಿಸಿದ್ದರು. ಹೀಗಾಗಿ ಅಲ್ಕೇ ಮದುವೆ ಆಗಲಿ ನಿರ್ಧೆರಿಸಿದೇವು. HOP ಶಾಪ್ ಕೂಡ ಈ ಮದುವೆಯ ವಿಡಿಯೋವನ್ನು ಬಿಡುಗಡೆ ಮಾಡಿದೆ.
ಶೌಚಾಲಯದಲ್ಲಿ ಡಿಸ್ಕೋ ಬಾಲ್ ಅಳವಡಿಸಲಾಗಿದ್ದು, ಸಾಕಷ್ಟು ಅಲಂಕಾರ ಮಾಡಲಾಗಿತ್ತು. ಮದುವೆಗೆ ಇಬ್ಬರ ಸಂಬಂಧಿಕರೂ ಬರಬೇಕು. ಪುರುಷರ ಶೌಚಾಲಯದಲ್ಲಿ ದಂಪತಿ ಪರಸ್ಪರ ವಿವಾಹವಾದರು ಮತ್ತು ಈ ಸಮಯದಲ್ಲಿ ಎಲ್ಲರೂ ಸಂತೋಷವಾಗಿ ಭಾಗಿಯಾಗಿದ್ದರು. ನಿಜವಾಗಿಯೂ ಈ ಮದುವೆ ಎಲ್ಲಕ್ಕಿಂತ ಭಿನ್ನವಾಗಿತ್ತು.