ಬಹುದೊಡ್ಡ ಸವಾಲು ಕಟ್ಟಿಕೊಂಡವರು : ಉಪನ್ಯಾಸಕ ಚೇತನ್‌ಕುಮಾರ್ ಸಂತಸ

New Project (22)
Published on

ಕಡಬ: ಬಹುದೊಡ್ಡ ಸವಾಲು ಕಟ್ಟಿಕೊಂಡ ಕೆಂಪೇಗೌಡರು ಮುತುವರ್ಜಿ ವಹಿಸಿ ಕಟ್ಟಿದ ಬೆಂಗಳೂರಿಗೆ ಇಂದು ಜಾಗತಿಕ ಮನ್ನಣೆ ದೊರೆತಿರುವುದು ಹೆಮ್ಮೆ. ಅವರ ಜೀವನ ಚರಿತ್ರೆ ಕುರಿತು ಪಠ್ಯಪುಸ್ತಕದಲ್ಲಿ ಅಳವಡಿಸಬೇಕು ಎಂದು ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಚೇತನ್ ಕುಮಾರ್ ಆನೆಗುಂಡಿ ಹೇಳಿದರು.

ಕಡಬ ತಾಲೂಕಿನ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕಡಬ ಒಕ್ಕಲಿಗ ಸಭಾಭವನದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ತಹಸೀಲ್ದಾರ್ ಪ್ರಭಾಕರ ಖಜೂರೆ ಕಾರ್ಯಕ್ರಮ ಉದ್ಘಾಟಿಸಿದರು. ಒಕ್ಕಲಿಗ ಗೌಡ ಸೇವಾ ಸಂಘ ಕಡಬ ಅಧ್ಯಕ್ಷ ಸುರೇಶ್ ಬೈಲು, ಸೈಯದ್ ಮೀರಾ ಸಾಹೇಬ್, ಜನಾರ್ದನ ಗೌಡ ಪಣೆಮಜಲು, ಆಶಾ ತಿಮ್ಮಪ್ಪ ಗೌಡ, ಆಶ್ರಫ್ ಶೇಡಿಗುಂಡಿ ಶುಭಹಾರೈಸಿದರು. ಕೆಂಪೇಗೌಡರ ಕುರಿತು ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಮುಖರಾದ ದೇವರಾಜು, ಡಾ.ವೇದಾವತಿ, ಸತ್ಯನಾರಾಯಣ, ಸಂದೇಶ್ ಉಪಸ್ಥಿತರಿದ್ದರು. ಉಪತಹಸಿಲ್ದಾರ್ ಗೋಪಾಲ್ ಸ್ವಾಗತಿಸಿದರು. ಗ್ರಾಮಸಹಾಯಕ ಉದಯಕುಮಾರ್ ವಂದಿಸಿದರು. ಶಿಕ್ಷಕ ಗಣೇಶ್ ನಡುವಾಳು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net