ಅರವಿಂದ್​ ಕೇಜ್ರಿವಾಲ್​ ಸೋಲಿಗೆ ಇದೇ ಕಾರಣ.. ಅಣ್ಣಾ ಹಜಾರೆ ಹೇಳಿದ್ದೇನು? | Anna Hazare

Untitled design (15)
Published on

ನವದೆಹಲಿ: ರಾಷ್ಟ್ರರಾಜಧಾನಿಯ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸೋಲಿಗೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ(Anna Hazare) ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಅರವಿಂದ್ ಕೇಜ್ರಿವಾಲ್ ದೆಹಲಿಯ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದರು. ಆದರೆ ಅವರು ಮದ್ಯದಂಗಡಿಗಳನ್ನು ತೆರೆಯಲು ಪ್ರಾರಂಭಿಸಿದಾಗ ಜನರ ಕೋಪವನ್ನು ಎದುರಿಸಬೇಕಾಯಿತು. ಈಗ ಜನರು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಅಣ್ಣಾ ಹಜಾರೆ ಹೇಳಿದರು.

ಮುಖ್ಯಮಂತ್ರಿಯಾಗಿ ಕೇಜ್ರಿವಾಲ್ ಸಮಾಜದ ಮುಂದೆ ಒಂದು ಮಾದರಿಯನ್ನು ಇಡಬೇಕಿತ್ತು. ಆದರೆ ಅವರು ದಾರಿ ತಪ್ಪಿದರು. ಅರವಿಂದ್ ಕೇಜ್ರಿವಾಲ್ ಉತ್ತಮ ಕೆಲಸ ಮಾಡುತ್ತಿದ್ದಾಗ, ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾದರು ಎಂದು ಅಣ್ಣಾ ಹಜಾರೆ ತಿಳಿಸಿದರು. ಕೇಜ್ರಿವಾಲ್​ ಒಳ್ಳೆಯ ಕೆಲಸ ಮಾಡುತ್ತಿದ್ದರಿಂದ ನಾನು ಅವನ ವಿರುದ್ಧ ಏನನ್ನೂ ಹೇಳಲಿಲ್ಲ. ಆದರೆ ನಂತರ ಕ್ರಮೇಣ ಅವರು ಮದ್ಯದಂಗಡಿಗಳನ್ನು ತೆರೆಯಲು ಮತ್ತು ಪರವಾನಗಿಗಳನ್ನು ನೀಡಲು ಪ್ರಾರಂಭಿಸಿದರು. ಆಗ ನನಗೆ ಚಿಂತೆಯಾಯಿತು ಎಂದಿದ್ದಾರೆ.

ರೇಖಾ ಗುಪ್ತಾ ದೆಹಲಿಯ ನೂತನ ಮುಖ್ಯಮಂತ್ರಿಯಾಗಿದ್ದಾರೆ. ಅವರ ಶುದ್ಧ ಆಲೋಚನೆಗಳು ಮತ್ತು ಕಾರ್ಯಗಳಿಂದಾಗಿ ಜನರು ಅವರಿಗೆ ಮತ ಹಾಕಿದರು ಎಂಬುದು ಹೆಮ್ಮೆಯ ವಿಷಯ ಎಂದು ಅವರು ಹೇಳಿದರು. ಅಣ್ಣಾ ಹಜಾರೆ ಅವರು ಭ್ರಷ್ಟಾಚಾರ ವಿರೋಧಿ ಆಂದೋಲನವು ಆಮ್ ಆದ್ಮಿ ಪಕ್ಷದ ಜನನಕ್ಕೆ ಕಾರಣವಾಯಿತು. 2011ರಲ್ಲಿ ಅಣ್ಣಾ ಹಜಾರೆ ನೇತೃತ್ವದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನ ನಡೆದಿತ್ತು. ಈ ಚಳವಳಿಯ ನಂತರವೇ 2012ರಲ್ಲಿ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಸ್ಥಾಪನೆಯಾಯಿತು. ಕೇಜ್ರಿವಾಲ್ ಅವರನ್ನು ಹಜಾರೆ ಅವರ ಬೆಂಬಲಿಗರೆಂದು ಪರಿಗಣಿಸಲಾಗಿದೆ, ಆದರೆ 2012ರಲ್ಲಿ ಅವರು ಎಎಪಿ ಸ್ಥಾಪಿಸಿದ ನಂತರ ಇಬ್ಬರೂ ಬೇರೆಯಾದರು.

ದೆಹಲಿಯಲ್ಲಿ 70 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು. 27 ವರ್ಷಗಳ ನಂತರ ಬಿಜೆಪಿ ಭಾರಿ ಬಹುಮತದೊಂದಿಗೆ ದೆಹಲಿಯಲ್ಲಿ ಮತ್ತೆ ಅಧಿಕಾರಕ್ಕೆ ಬಂದಿತು. 70 ಸ್ಥಾನಗಳಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದುಕೊಂಡಿತು. ಆದರೆ ಆಮ್ ಆದ್ಮಿ ಪಕ್ಷ ಕೇವಲ 22 ಸ್ಥಾನಗಳಿಗೆ ಸೀಮಿತವಾಗಿತ್ತು. ಕಾಂಗ್ರೆಸ್ ಬಗ್ಗೆ ಹೇಳುವುದಾದರೆ ಈ ಬಾರಿ ಕಾಂಗ್ರೆಸ್ ದೆಹಲಿಯಲ್ಲಿ ತನ್ನ ಖಾತೆಯನ್ನು ತೆರೆಯಲೂ ಸಾಧ್ಯವಾಗಲಿಲ್ಲ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net