ಇಂಡಿ: ಡೋಹರ ಸಮುದಾಯವನ್ನು ಪರಿಶಿಷ್ಟ ಜಾತಿಯ 4ನೇ ಗುಂಪಿನಲ್ಲಿ ಇರಿಸಲಾಗಿರುವ ಕ್ರಮವನ್ನು ಖಂಡಿಸಿ ಮಿನಿ ವಿಧಾನಸೌಧದ ಎದುರು ಸಮಾಜ ಬಾಂಧವರು ಮಂಗಳವಾರ ಪ್ರತಿಭಟಿಸಿ ಕಂದಾಯ ಎಸಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು.
ಭೀಮಾಶಂಕರ ಸಕ್ಕರೆ ಕಾರ್ಖಾನೆ ನಿರ್ದೇಶಕ- ನ್ಯಾಯವಾದಿ ಅಶೋಕ ಗಜಾಕೋಶ ಮಾತನಾಡಿ, ಪರಿಶಿಷ್ಟ ಜಾತಿ ವರ್ಗೀಕರಣದಲ್ಲಿ ಡೋಹರ ಕಕ್ಕಯ್ಯ ಸಮುದಾಯವನ್ನು ಅವೈಜ್ಞಾನಿಕವಾಗಿ 4ನೇ ಗುಂಪಿನಲ್ಲಿ ಇರಿಸಲಾಗಿದೆ. ಸಮುದಾಯವು ಚರ್ಮ ಸಂಬಂಧಿತ ಸಮುದಾಯವಾಗಿದೆ. ಚರ್ಮ ಸಂಬಂಧಿತ ಕಸಬು ಮಾಡುವ ಮಾದಿಗ, ಸಮಗಾರ, ಚಮ್ಮಾರ, ಮೋಚಿ ಜಾತಿಗಳಿದ್ದು ಅವರಿಗೆ ಒಂದನೇ ಗುಂಪಿನಲ್ಲಿ ಸೇರಿಸಿ ಶೇ.6 ಮೀಸಲಾತಿ ನೀಡಲಾಗಿದೆ ಎಂದರು.
ನಿವೃತ್ತ ಉಪನ್ಯಾಸಕ ಸುರೇಶ ಕಟಕಧೋಂಡ ಮಾತನಾಡಿ, ಡೋಹರ ಕಕ್ಕಯ್ಯ ಸಮುದಾಯವನ್ನು ಅತಿ ಸಣ್ಣ ಮತ್ತು ಅಲೆಮಾರಿ ಜನಾಂಗವೆಂದು ತಿಳಿದು 89 ಸಮುದಾಯದಲ್ಲಿ ಸೇರ್ಪಡೆ ಮಾಡಿದ್ದಾರೆ. ಒಂದನೇ ಗುಂಪಿನಲ್ಲಿರಿಸಿ ಶೇ.6 ಮೀಸಲಾತಿ ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್.ಆರ್.ಪೋಳ , ಮಳಸಿದ್ದ ಗಜಾಕೋಶ, ಮಾರುತಿ ಇಂಗಳೆ, ಜಗದೀಶ ಗಜಾಕೋಶ, ಶಿವಾಜಿ ನಾರಾಯಣಕರ, ಶರತ ಗಜಾಕೋಶ, ಅಮಿತ ಇಂಗಳೆ, ತುಳಜಾರಾಮ ಇಂಗಳೆ, ಸುಧೀರ ಕಟಕಧೋಂಡ, ಕಿರಣ ಕಟಕಧೋಂಡ, ಮಾನಪ್ಪ ಹೊಟಕರ, ಕಲ್ಲು ಚಾಂದಕವಟೆ, ಆನಂದಪ್ಪ ಹೊಟಕರ ಇತರರಿದ್ದರು.