

ಪುತ್ತೂರು ಗ್ರಾಮಾಂತರ: ಈ ದೇಶದಲ್ಲಿ ಬಿಜೆಪಿ ಉಳಿದಿರುವುದೇ ಸುಳ್ಳಿನ ಅಡಿಪಾಯದಲ್ಲಿ. ಅಧಿಕಾರಕ್ಕಾಗಿ ಸುಳ್ಳು ಹೇಳುವ ಮೂಲಕ ಜನರನ್ನು ಮೋಸ ಮಾಡುವುದು ಬಿಜೆಪಿ ಜಾಯಾಮಾನ ಎಂದು ಶಾಸಕ ಅಶೋಕ್ ಕುಮಾರ್ ರೈ ಸವಾಲು ಹಾಕಿದರು.
ಕೆದಂಬಾಡಿಯಲ್ಲಿ ಭಾನುವಾರ ಕಾಂಗ್ರೆಸ್ ವತಿಯಿಂದ ಬಿಜೆಪಿಯ ಸುಳ್ಳಿಗೆ ಉತ್ತರ ಜನಜಾಗತಿ ಸಭೆಯಲ್ಲಿ ಅವರು ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿದರು. ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಕಾಂಗ್ರೆಸ್ ವಲಯ ಅಧ್ಯಕ್ಷ ಪುರಂದರ್ ರೈ, ಪಕ್ಷದ ಮುಖಂಡರಾದ ಬೂಡಿಯಾರ್ ಪುರುಷೋತ್ತಮ ರೈ, ಪೂರ್ಣೇಶ್ ಭಂಡಾರಿ, ರವೀಂದ್ರ ರೈ ನೆಕ್ಕಿಲು, ರವಿಪ್ರಸಾದ್ ಶೆಟ್ಟಿ ಬನ್ನೂರು, ಚಂದ್ರಪ್ರಭಾ ಗೌಡ, ಶರೂನ್ ಸಿಕ್ವೇರಾ, ಬೋಳೋಡಿ ಚಂದ್ರಹಾಸ ರೈ, ಹಬೀಬ್ ಕಣ್ಣೂರು, ಮಹಮ್ಮದಾಲಿ, ಮೆಲ್ವಿನ್ ಮೊಂತೆರೋ, ಮನೋಹರ್ ರೈ ಎಂಡೆಸಾಗು, ಹೈದರ್ ಗಟ್ಟಮನೆ ಮತ್ತಿತರರಿದ್ದರು.
ಈ ಹಿಂದೆ ಬಿಜೆಪಿಯವರು ರೈಲು ಬಿಟ್ಟಾಗ ಜನ ಅದನ್ನು ನಂಬುತ್ತಿದ್ದರು. ಈಗ ರಾಜ್ಯದಲ್ಲಿ ನುಡಿದಂತೆ ನಡೆಯುವ ಸರ್ಕಾರ ಮತ್ತು ಕ್ಷೇತ್ರದಲ್ಲಿ ಶಾಸಕರಿದ್ದು, ಜನ ಈಗ ಬಿಜೆಪಿಯ ಸುಳ್ಳನ್ನು ನಂಬುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಕಂಡು ಬಿಜೆಪಿಗರಿಗೆ ಸಹಿಸಲು ಆಗುತ್ತಿಲ್ಲ. ಕೃಷ್ಣಪ್ರಸಾದ್ ಆಳ್ವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ