

ಸುಳ್ಯ: ಭಾರತೀಯ ಅಂಚೆ ಇಲಾಖೆ ವತಿಯಿಂದ ನಡೆದ ರಾಜ್ಯ ಮತ್ತು ರಾಷ್ಟ್ರಮಟ್ಟದ ಪತ್ರಲೇಖನ ಸ್ಪರ್ಧೆ ಢಾಯಿ ಆಖರ್-2024ರಲ್ಲಿ ಸುಳ್ಯ ಅಂಚೆ ಉಪವಿಭಾಗ ವ್ಯಾಪ್ತಿಯ ಅಮರಮುಡ್ನೂರು ಗ್ರಾಮದ ಶೇಣಿಯ ಕಾವ್ಯಶ್ರೀ ಬಿ. ರಾಜ್ಯಮಟ್ಟದಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ.
ಬುಧವಾರ ಕಾವ್ಯಶ್ರೀ ಅವರಿಗೆ ಅವರ ಶೇಣಿ ಮನೆಯಲ್ಲಿ, ಸುಳ್ಯ ಉಪವಿಭಾಗದ ಅಂಚೆ ನಿರೀಕ್ಷಕ ವಿನೋದ್ ಕುಮಾರ್ ಬಹುಮಾನದ ಚೆಕ್ ವಿತರಿಸಿದರು. ಸುಳ್ಯ ಅಂಚೆ ಮೇಲ್ವಿಚಾರಕ ಬಾಬು, ಎಸ್.ರಮೇಶ್, ತೊಡಿಕಾನ ಅಂಚೆಪಾಲಕ ದೇವಪ್ಪ ಹೈದಂಗೂರು, ಚೊಕ್ಕಾಡಿ ತಾತ್ಕಾಲಿಕ ಅಂಚೆ ವಿತರಕಿ ಹೇಮಲತಾ, ಕಾವ್ಯಶ್ರೀ ಅವರ ಪತಿ ಅಶ್ವಿನ್ ರೈ ಹಾಗೂ ಮನೆಯವರು ಉಪಸ್ಥಿತರಿದ್ದರು. ಕಾವ್ಯಶ್ರೀ ಕಡಬ ರಾಮಕೃಷ್ಣ ಸಹಕಾರಿ ಸಂಘದ ಉದ್ಯೋಗಿ.