ನದಿ ತಟದ ವೃಕ್ಷ ಕವನ ಸಂಕಲನ ಬಿಡುಗಡೆ

mng-11june-kavana
Published on


ಮಂಗಳೂರು : ಬೆಂಗಳೂರಿನ ಕರ್ನಾಟಕ ಸಾಹಿತ್ಯ ಪರಿಷತ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಿ ಡಾ.ಪ್ರವೀಣರಾಜ್ .ಎಸ್ .ರಾವ್
ಇವರ ‘ನದಿ ತಟದ ವೃಕ್ಷ ‘ಕವನ ಸಂಕಲನ ಬಿಡುಗಡೆಗೊಂಡಿತು,
ಬಿಡುಗಡೆ ನೆರವೇರಿಸಿದ ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪ್ರಕಾಶ ಮೂರ್ತಿ ಮಾತನಾಡಿ ‘ ಕವನ ಸಂಕಲನದಲ್ಲಿ
ಆಧುನಿಕ ಯುಗದ ಆಕರ್ಷಣೆಗೆ ಒಳಗಾಗಿ ನಾವು ನಮ್ಮ ನೆಲ,ಜಲ, ಆಕಾಶವನ್ನು ನಿರ್ಲಕ್ಷ ಮಾಡುತ್ತಿರುವ ಬಗ್ಗೆ ಮಾರ್ಮಿಕವಾಗಿ ಚಿತ್ರಿಸಿದ್ದಾರೆ.
ಪರಿಸರದ ಬಗ್ಗೆ ಒಳ್ಳೆಯ ಸಂದೇಶ ನೀಡುವಲ್ಲಿ ಕವಿ ಯಶಸ್ವಿಯಾಗಿದ್ದಾರೆ ಎಂದರು.
ಆರ್.ಆರ್. ನಗರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉದಂತ ಶಿವಕುಮಾರ್ , ಮಕ್ಕಳ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಡಾ. ಮಹೇಶ್ ,
ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಡಾ. ಕೆ.ಎನ್.ವಿಜಯಕುಮಾರ್ ಕೊಪ್ಪ ಶುಭ ಹಾರೈಸಿದರು.
ಕವಿ ಡಾ. ಪ್ರವೀಣರಾಜ್ ಎಸ್.ರ ರಾವ್ ಕಾಸರಗೋಡು ಮಾತನಾಡಿ ಕಾಸರಗೋಡು ಕನ್ನಡಿಗರು ಸದಾ ಕನ್ನಡ ಕೆಲಸಗಳಲ್ಲಿ
ಮುಂಚೂಣಿಯಲ್ಲಿದ್ದಾರೆ. ಆದರೆ ಕರ್ನಾಟಕ ಸರ್ಕಾರ ಗಡಿನಾಡು ಕಾಸರಗೋಡು ಬಗ್ಗೆ ತೀವ್ರ ನಿರ್ಲಕ್ಷೃ ಹೊಂದಿದೆ ಎಂದರು.
ಡಾ. ಸುಕನ್ಯಾ ಹೆಗಡೆ ಕೆಂಗೇರಿ ಸ್ವಾಗತಿಸಿದರು. ಡಾ.ನಾಗರಾಜ ತಂಬ್ರಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net