ಗೋವಿಗೆ ಮಾತೃ ಸ್ವರೂಪ ನೀಡಿದ ದೇಶ ನಮ್ಮದು - ಉಜ್ಜಿನಿ ಜಗದ್ಗುರು ಆಶೀರ್ವಚನ

ald-1
ಕವಲೂರಿನಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಉಜ್ಜಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶ್ರೀ ಮರುಳಾರಾಧ್ಯ ಶಿವಾಚಾರ್ಯರು, ಸಿದ್ದೇಶ್ವರ ಶಿವಾಚಾರ್ಯರು, ಮಹಾದೇವ ಸ್ವಾಮೀಜಿ, ಬಸವಲಿಂಗೇಶ್ವರ ಶಿವಾಚಾರ್ಯರು, ಒಪ್ಪತ್ತೇಶ್ವರ ಸ್ವಾಮೀಜಿ, ಹಾಲಸೋಮೇಶ್ವರ ಸ್ವಾಮೀಜಿ ಇದ್ದರು.
Published on

ಕವಲೂರು: ನಾಡು ಸಮೃದ್ಧವಾಗಲಿ, ರೈತ ಬೆಳೆದ ಬೆಳೆಗೆ ಮೌಲ್ಯ ದೊರೆತು ಬದುಕು ಹಸನಾಗಲಿ, ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿಯಾಗಿ ನಾವೆಲ್ಲ ಒಂದೇ ಎಂಬ ಸಮನ್ವಯ ಭಾವನೆ ಎಲ್ಲರಲ್ಲೂ ಮೂಡಲಿ ಎಂದು ಉಜ್ಜಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ತಿಳಿಸಿದರು.

ಕವಲೂರಿನಲ್ಲಿ ಉಜ್ಜಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಿಮಿತ್ತ ಬುಧವಾರ ನಡೆದ ಧಾರ್ಮಿಕ ಮಹಾಸಭೆಯಲ್ಲಿ ಆಶೀರ್ವಚನ ನೀಡಿ

ದರು. ಭಾರತ ಸಂಸ್ಕೃತಿಗೆ ಹೆಸರಾಗಿದ್ದು, ಎಲ್ಲ ಗ್ರಾಮಗಳಲ್ಲೂ ದೇವಸ್ಥಾನಗಳಿವೆ. ಜನರಲ್ಲಿ ದೇವರು, ಧರ್ಮದ ಆಚಾರ-ವಿಚಾರ ಹಾಸುಹೊಕ್ಕಾಗಿ ಪ್ರತಿನಿತ್ಯ ದೇವರ ಆರಾಧನೆ ಮಾಡುವ ಗುಣ ದೇಶದಲ್ಲಿದೆ. ಪ್ರಪಂಚದಲ್ಲಿ ಹಲವಾರು ಬಲಾಢ್ಯ ದೇಶಗಳಿವೆ. ಆದರೆ, ಮಹಿಳೆಯರನ್ನು, ಸಂಸ್ಕೃತಿಯನ್ನು ಗೌರವಿಸುವ, ಮಣ್ಣಿನಲ್ಲಿ ದೈವತ್ವ ಕಾಣುವ ದೇಶ ಭಾರತ ಒಂದೇ. ಇಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅನೇಕ ಸಾಧನೆ ಮಾಡಲಾಗಿದೆ ಎಂದರು.

ಗೋವಿಗೆ ಮಾತೃ ಸ್ವರೂಪ ನೀಡಿದ ಸಂಸ್ಕೃತಿ ನಮ್ಮದು. ಪ್ರತಿಯೊಬ್ಬರೂ ಗೋವು ಸಾಕಬೇಕು, ರಕ್ಷಿಸಬೇಕು. ಇದರಿಂದ ಪುಣ್ಯದ ಕೆಲಸ ನಿಮ್ಮದಾಗುತ್ತದೆ. ಪರಮಾತ್ಮನನ್ನು ರಕ್ಷಿಸುವ ಶಕ್ತಿ ಪಾರ್ವತಿಗೆ ಇದೆ. ಹೀಗಾಗಿ ಮಹಿಳೆಯರನ್ನು ಗೌರವದಿಂದ ಕಾಣಬೇಕು. ಯಾವತ್ತೂ ಮಹಿಳೆಯರಿಗೆ ಅಪಸ್ವರದಿಂದ ಕರೆಯುವುದಿಲ್ಲ ಎಂದು ಸಂಕಲ್ಪ ಮಾಡಬೇಕು. ಯುವಕರು ದುಶ್ಚಟ ಮುಕ್ತರಾಗಿ ಆರೋಗ್ಯಕರ ಜೀವನ ನಡೆಸಬೇಕು ಎಂದು ಹೇಳಿದರು.

ಗವಿಸಿದ್ದಯ್ಯ ಹಳ್ಳಿಕೇರಿಮಠ ಜಾನಪದ ಹಾಗೂ ಶ್ರೀಗುರು ಪಂಚಾಕ್ಷರಿ ಸಂಗೀತ ಸೇವಾ ಸಂಸ್ಥೆಯಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಅಳವಂಡಿಯ ಶ್ರೀ ಮರುಳಾರಾಧ್ಯ ಶಿವಾಚಾರ್ಯರು, ಮೈನಳ್ಳಿ-ಬಿಕನಳ್ಳಿಯ ಶ್ರಿ ಸಿದ್ದೇಶ್ವರ ಶಿವಾಚಾರ್ಯರು, ಕುಕನೂರಿನ ಶ್ರೀ ಮಹಾದೇವ ಸ್ವಾಮೀಜಿ, ಯಲಬುರ್ಗಾದ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯರು, ಗುಳೇದಗುಡ್ಡದ ಶ್ರೀ ಒಪ್ಪತ್ತೇಶ್ವರ ಸ್ವಾಮೀಜಿ, ಡೋಣಿಯ ಶ್ರೀ ಹಾಲಸೋಮೇಶ್ವರ ಸ್ವಾಮೀಜಿ, ಪ್ರಮುಖರಾದ ಪ್ರದೀಪಗೌಡ ಮಾಲಿಪಾಟೀಲ, ಬಸನಗೌಡ್ರ ಮಾಲಿಪಾಟೀಲ, ಗುರುಮೂರ್ತಿಸ್ವಾಮಿ ಇನಾಮದಾರ, ಡಾ.ಸಿದ್ಧಲಿಂಗಸ್ವಾಮಿ ಇನಾಮದಾರ, ಮನೋಹರ ದೇಸಾಯಿ, ಶರಣಪ್ಪ ಸಿದ್ನೆಕೊಪ್ಪ, ಸುರೇಶಬಾಬು ಸಿಂದೋಗಿ, ವೀರೇಶ ಕೂಗು, ಶ್ರೀ ದುರ್ಗಾದೇವಿ ಸಮಿತಿ ಪದಾಧಕಾರಿಗಳು ಹಾಗೂ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net