More

    ವಿಕಿ ಕೌಶಲ್​ ಜತೆ ಕತ್ರೀನಾ ಮದುವೆ; ಅತಿಥಿ ಆಗಲಿದ್ದಾರಾ, ಸಲ್ಮಾನ್​ ಖಾನ್​?

    ಮುಂಬೈ: ಡಿಸೆಂಬರ್ 9 ರಂದು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ನಡೆಯಲಿದೆ ಎನ್ನಲಾಗಿರುವ ಬಾಲಿವುಡ್​ ಬ್ಯೂಟಿ ಕತ್ರೀನಾ ಕೈಫ್​ ಮತ್ತು ಯುವನಟ ವಿಕಿ ಕೌಶಲ್​ ಮದುವೆಯಲ್ಲಿ, ಇದೀಗ ಯಾವ ಯಾವ ಸೂಪರ್​ ಸ್ಟಾರ್​ಗಳು ಪಾಲ್ಗೊಳ್ಳಲಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಅದರಲ್ಲೂ ಒಂದು ಕಾಲದಲ್ಲಿ ಕತ್ರೀನಾರನ್ನು ಮದುವೆ ಆಗುತ್ತಾರೆ ಎಂದೇ ಭಾವಿಸಲಾಗಿದ್ದ ಬಾಲಿವುಡ್​ನ ಫರೆವರ್​ ಬ್ಯಾಚಲರ್​ ನಟ ಸಲ್ಮಾನ್​ ಖಾನ್​ಗೆ ಮದುವೆ ಆಮಂತ್ರಣ ನೀಡಲಾಗಿದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿಬಂದಿದೆ.

    ಸಲ್ಮಾನ್​ರಿಗೆ ಮತ್ತು ಅವರ ಸೋದರಿಯರಾದ ಅರ್ಪಿತಾ ಮತ್ತು ಅಲ್ವೀರಾ ಅವರಿಗೆ ವಿಕಿ-ಕತ್ರೀನಾರ ಅದ್ದೂರಿ ಮದುವೆಯ ಆಮಂತ್ರಣ ನೀಡಲಾಗಿದೆ. ಸಲ್ಮಾನ್​ ಸೋದರಿಯರು ಮದುವೆಗೆ ಹೋಗಲಿದ್ದಾರೆ ಎಂಬ ವರದಿಗಳು ನಿನ್ನೆಯಿಂದ ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಇಂಡಿಯಾ ಟುಡೇ ಜತೆ ಮಾತಾಡಿರುವ ಅರ್ಪಿತಾ ಖಾನ್​, “ನಮಗೆ ಮದುವೆಯ ಯಾವುದೇ ಇನ್ವೈಟ್​ ಬಂದಿಲ್ಲ” ಎಂದಿದ್ದಾರೆಂದು ವರದಿ ತಿಳಿಸಿದೆ.

    ಇದನ್ನೂ ಓದಿ: ಕತ್ರೀನಾ-ವಿಕಿ ಮದುವೆ ಯಾವತ್ತು? ಎಲ್ಲಿ? ವೆಡ್ಡಿಂಗ್​​​ ಸೂಟ್​ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ

    ಹಾಗೆ ನೋಡಿದರೆ, ವಿಕಿ-ಕತ್ರೀನಾ ಮದುವೆಯ ಔಪಚಾರಿಕ ಆಮಂತ್ರಣವನ್ನು ಇನ್ನೂ ಯಾರಿಗೂ ನೀಡಿಲ್ಲ. ಹಾಗಾಗಿ ಸದ್ಯದಲ್ಲೇ ಸಲ್ಮಾನ್​ರೊಂದಿಗೆ ಹಲವು ಸಿನಿಮಾಗಳನ್ನು ಮಾಡಿರುವ ಕತ್ರೀನಾ ಮದುವೆಗೆ ಸಲ್ಮಾನ್​ಗೆ ಆಮಂತ್ರಣ ಹೋಗೇ ಹೋಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಜೊತೆಯಲ್ಲೇ ಸಲ್ಮಾನ್ ಮದುವೆ ಅಟೆಂಡ್​ ಮಾಡ್ತಾರಾ ಎಂಬ ಪ್ರಶ್ನೆ ಎದ್ದಿದೆ. (ಏಜೆನ್ಸೀಸ್)

    ಕಂಗನಾ ಪೋಸ್ಟ್​ಗಳ್ನ ಸೆನ್ಸರ್​ ಮಾಡಿ ಎಂದು ಅರ್ಜಿ! ನಟಿಯ ಪ್ರತಿಕ್ರಿಯೆ ಹೀಗಿತ್ತು

    ಕಮಲ್​ ಹಾಸನ್​ ಅಭಿಮಾನಿಗಳಿಗೆ ಶುಭ ಸುದ್ದಿ; ಬಿಗ್​ ಬಾಸ್​​ಗೆ ಯಾವಾಗ ವಾಪಸ್​?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts