

ನ್ಯೂಯಾರ್ಕ್: ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಸದ್ಯ ನ್ಯೂಯಾರ್ಕ್ನಲ್ಲಿ ಸಮಯ ಕಳೆಯುತ್ತಿದ್ದಾರೆ.
ಮದುವೆಯಾಗಿ ಹನಿಮೂನಿಗೂ ತೆರಳದೇ ಚಿತ್ರದ ಶೂಟಿಂಗ್ನಲ್ಲಿ ಬಿಜಿಯಾಗಿದ್ದ ಇಬ್ಬರು ಈಗ ಸ್ವಲ್ಪ ವಿರಾಮ ತೆಗೆದುಕೊಂಡು ವಿದೇಶ ಪ್ರವಾಸ ಕೈಗೊಂಡಿದ್ದಾರೆ.
ಸದ್ಯ ನ್ಯೂಯಾರ್ಕ್ನಲ್ಲಿರುವ ಈ ಜೋಡಿ, ಪ್ರಿಯಾಂಕಾ ಛೋಪ್ರಾ ಅವರ ಒಡೆತನದ ಭಾರತೀಯ ಶೈಲಿಯ ಸೂನಾ ಹೋಟೆಲ್ಗೆ ಭೇಟಿ ನೀಡಿ, ಭಾರತೀಯ ಖಾದ್ಯವನ್ನು ಸವಿದಿದ್ದಾರೆ.
ಇಲ್ಲಿ ಭೇಟಿ ನೀಡಿದ ವೇಳೆ, ಇಲ್ಲಿನ ಬಾಣಸಿಗನ ಜತೆ ತೆಗೆಸಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಕತ್ರಿನಾ-ವಿಕ್ಕಿ ಕೌಶಲ್ ತನ್ನ ಹೋಟೆಲ್ಗೆ ಭೇಟಿ ನೀಡಿರುವುದಕ್ಕೆ ಪ್ರಿಯಾಂಕಾ ಛೋಪ್ರಾ ಕೂಡ ಸಂತಸ ವ್ಯಕ್ತಪಡಿಸಿ, ಇಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ಇನ್ಸ್ಸ್ಟಾಗ್ರಾಂನಲ್ಲಿ ಕತ್ರಿನಾ ಪೋಸ್ಟ್ ಹಾಕಿಕೊಂಡಿದ್ದು, ಮನೆಯಿಂದ ದೂರ ಮನೆಗೆ ಬಂದಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರಿಯಾಂಕಾ ಕೂಡ ಪ್ರತಿಕ್ರಿಯಿಸಿ ನೀವು ನಮ್ಮ ಹೋಟೆಲ್ಗೆ ಭೇಟಿ ನೀಡಿದ್ದು, ತುಂಬಾ ಖುಷಿಯಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)