

ಮಂಗಳೂರು: ಅದಾನಿ ಫೌಂಡೇಶನ್ ಸುಪೋಶನ್ ಯೋಜನೆ, ಕಾಟಿಪಳ್ಳ 6ನೇ ಬ್ಲಾಕ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಗಸ್ತ್ಯ ಫೌಂಡೇಶನ್ ವತಿಯಿಂದ ಬುಧವಾರ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ರೀಟಾ ಡಿಸೋಜ, ಅದಾನಿ ಫೌಂಡೇಶನ್‌ನ ಸುಪೋಶನ್ ಅಧಿಕಾರಿ ಡಾ.ಪ್ರೇಮಾ ಡಿಸೋಜ, ಸಂಗಿನಿ ಸರಿತಾ ಡಿಸೋಜ, ಶಿಕ್ಷಕರಾದ ಸುಮನಾ, ಲೀಲಾ, ಸುನೀತಾ, ಸುಶೀಲ, ರೆಮಿಟಾ, ಶ್ವೇತಾ ಹಾಗೂ ಅಗಸ್ತ್ಯ ಫೌಂಡೇಶನ್‌ನ ಸುರೇಶ್ ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.