

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಸೇನಾ ಗಸ್ತು ವಾಹನದ ಮೇಲೆ ದಾಳಿ ನಡೆಸಿರುವ ಉಗ್ರರ ಪತ್ತೆಗಾಗಿ ಸೇನೆಯು ಮಂಗಳವಾರ ಜಂಟಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಸನ್ನಡತೆ ಆಧಾರದ ಮೇಲೆ 77 ಕೈದಿಗಳ ಬಿಡುಗಡೆ
ಹೆಲಿಕಾಪ್ಟರ್ ಮತ್ತು ಮಾನವರಹಿತ ವೈಮಾನಿಕ (ಯುಎವಿ) ನೆರವಿನೊಂದಿಗೆ ಸೇನೆಯು ಕಣ್ಗಾವಲನ್ನು ತೀವ್ರಗೊಳಿಸಿದೆ. ಕಾರ್ಯಚರಣೆ ನಡೆಯುತ್ತಿರುವ ಪ್ರದೇಶವು ದಟ್ಟ ಅರಣ್ಯ ಪ್ರದೇಶದಿಂದ ಕೂಡಿರುವ ಕಾರಣದಿಂದ ಲೋಹ ಪತ್ತೆ ಸಾಧನಗಳು, ವಾಸನೆ ಗ್ರಹಿಸುವ ಶ್ವಾಸನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಗಳಾದ ಮಚೇಡಿ, ಬದ್ನೋಟ್, ಕಿಂಡ್ಲಿ ಮತ್ತು ಲೋಹಾಯ್ ಮಲ್ಹಾರ್ ಪ್ರದೇಶಗಳಲ್ಲಿ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಸುತ್ತುವರೆದಿದ್ದು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಕಾರ್ಯಚರಣೆಯನ್ನು ನೆರೆಯ ಜಿಲ್ಲೆಗಳಾದ ಉಧಂಪುರ, ಬಸಂತಗಢವಲ್ಲದೇ ಎತ್ತರದ ಪ್ರದೇಶಗಳಾದ ಸೆಯೋಜ್. ಬನಿ, ದಗ್ಗರ್ ಹಾಗೂ ಕಿಂಡ್ಲಿಗಳಿಗೂ ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೂಲಗಳ ಪ್ರಕಾರ, ಮೂರರಿಂದ ನಾಲ್ಕು ಭಯೋತ್ಪಾದಕರು, ಈ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.ಈ ಉಗ್ರರೆಲ್ಲ ಬಹುತೇಕ ವಿದೇಶಿಯವರು ಎಂದು ಹೇಳಿವೆ. ಬಸನಗಢದಲ್ಲಿ ಗ್ರಾಮ ರಕ್ಷಕ ಮೊಹ್ಮದ್ ಷರೀಪ್ ಅವರ ಹತ್ಯೆ ಮಾಡಿದ್ದ ಉಗ್ರರ ಗುಂಪಿನ ಸದಸ್ಯರೂ ಆಗಿದ್ದಾರೆ ಎಂದು ಹೇಳಿವೆ.
ಕಥುವಾ ಜಿಲ್ಲೆಯ ಬನಿ, ದಗ್ಗರ್ ಮತ್ತು ಕಿಂಡ್ಲಿ ಪ್ರದೇಶಗಳಲ್ಲಿ ಒಂದು ಗುಂಪಿನ ಚಲನವಲನವನ್ನು ಭದ್ರತಾ ಪಡೆಗಳು ಪತ್ತೆಹಚ್ಚಿದ್ದವು ಮತ್ತು ಶೋಧ ಕಾರ್ಯಾಚರಣೆಗಳನ್ನು ನಡೆಸಿದ್ದವು. ಮಚೇಡಿ-ಕಿಂಡ್ಲಿ-ಮಲ್ಹಾರ್ ರಸ್ತೆಯಲ್ಲಿ ಯೋಧರು ಗಸ್ತು ತಿರುಗುತ್ತಿದ್ದಾಗ ಉಗ್ರರು ಸೋಮವಾರ ಗ್ರೆನೇಡ್ ಮತ್ತು ಗುಂಡಿನ ದಾಳಿ ನಡೆಸಿದ್ದ ರು. ಈ ದಾಳಿಯಲ್ಲಿ ಗಾಯಗೊಂಡಿದ್ದ 10 ಮಂದಿ ಯೋಧರ ಪೈಕಿ ಐವರು ಸಾವನ್ನಪ್ಪಿದ್ದರು.