ಸೀತೆ ಕುರಿತ ಸಂಭಾಷಣೆ; ಆದಿಪುರುಷ್​ ಸೇರಿದಂತೆ ಭಾರತೀಯ ಚಲನಚಿತ್ರಗಳು ಕಠ್ಮಂಡುವಿನಲ್ಲಿ ಬ್ಯಾನ್​

adipurush
Published on

ಕಠ್ಮಂಡು: ಪ್ರಭಾಸ್​, ಸೈಫ್​ ಅಲಿ ಖಾನ್, ಕೃತಿ ಸನೊನ್​ ಅಭಿನಯದ ಬಹು ನಿರೀಕ್ಷಿತ ಪ್ಯಾನ್​ ಇಂಡಿಯಾ ಚಿತ್ರ ಆದಿಪುರುಷ್ ಬಿಡುಗಡೆಯಾದ ದಿನದಿಂದಲ್ಲೇ ಒಂದಿಲ್ಲೊಂದು ವಿವಾದಗಳಿಂದಲ್ಲೇ ಹೆಚ್ಚು ಸದ್ದು ಮಾಡುತ್ತಿದೆ.

ಸಿನಿಮಾ ಬಿಡುಗಡೆ ಬಳಿಕ ಹಲವರು ಸಿನಿಮಾದ ಬಗ್ಗೆ ಋಣಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೀತೆಯ ಕುರಿತ ಸಂಭಾಷಣೆಯನ್ನು ತೆಗೆಯುವಂತೆ ನೇಪಾಳದ ರಾಜಧಾನಿ ಕಠ್ಮಂಡುವಿನ ಮೇಯರ್​ ಸೇರಿದಂತೆ ಹಲವರು ಒತ್ತಾಯಿಸಿದ್ದರು.

ಆದಿಪುರುಷ್ ಸಿನಿಮಾದಲ್ಲಿ ಸೀತೆ ಭಾರತದ ಮಗಳು ಎಂಬ ಸಂಭಾಷಣೆ ಇದೆ. ಆದರೆ ಈ ಸಂಭಾಷಣೆಯನ್ನು ತೆಗೆಯುವಂತೆ ಕೆಲ ದಿನಗಳ ಹಿಂದೆ ನೇಪಾಳ ಸಿನಿಮಾ ಸೆನ್ಸಾರ್ ಬೋರ್ಡ್ ಸಿನಿಮಾದ ನಿರ್ಮಾಣ ಸಂಸ್ಥೆಗೆ ಸೂಚಿಸಿತ್ತು. ಇಲ್ಲವಾದಲ್ಲಿ ಸಿನಿಮಾವನ್ನು ವ್ಯಾನ್​ ಮಾಡುವುದಾಗಿ ಎಚ್ಚರಿಕೆ ನೀಡಿತ್ತು.

ಕಠ್ಮಂಡುವಿನಲ್ಲಿ ಬ್ಯಾನ್​

ಅದರಂತೆ. ಇದೀಗ ಕಠ್ಮಂಡುವಿನಲ್ಲಿ ಆದಿಪುರುಷ್​ ಚಿತ್ರ ಸೇರಿದಂತೆ ಭಾರತದ ಯಾವ ಸಿನಿಮಾಗಳನ್ನು ಪ್ರದರ್ಶನ ಮಾಡದಂತೆ ನಿಷೇಧಿಸಿ ಅಲ್ಲಿನ ಮೇಯರ್​ ಬಲೇನ್​ ಶಾ ಆದೇಶ ಹೊರಡಿಸಿದ್ದಾರೆ. ಕಠ್ಮಂಡುವಿನಲ್ಲಿರುವ 17 ಚಿತ್ರಮಂದಿರಗಳಲ್ಲಿ ಭಾರತದ ಯಾವ ಚಲನಚಿತ್ರಗಳನ್ನು ಪ್ರದರ್ಶಿಸಬಾರದು ಎಂಬ ಆದೇಶವನ್ನು ನೀಡಲಾಗಿದೆ ಎಂದು ಬಲನ್​ ಶಾ ಟ್ವೀಟ್​ ಮಾಡಿದ್ದಾರೆ.

ಸೀತೆ ಭಾರತದ ಮಗಳು ಎಂಬ ಸಂಭಾಷಣೆಯನ್ನು ಭಾರತದಲ್ಲಿ ಮಾತ್ರವೇ ಅಲ್ಲದೆ ಎಲ್ಲೆಡೆ ಪ್ರದರ್ಶಿತವಾಗುತ್ತಿರುವ ಆವೃತ್ತಿಗಳಿಂದಲೂ ತೆಗೆದಿಲ್ಲದ ಕಾರಣ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮವನ್ನು ಜರುಗಿಸಲಾಗಿದೆ ಎಂದು ಕಠ್ಮಂಡುವಿನ ಮೇಯರ್​ ಬಲನ್​ ಶಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net