ಕತಾರ್​ ಭಾರತೀಯ ಸಂಸ್ಕೃತಿ ಸಂಘಕ್ಕೆ ಆಯ್ಕೆಯಾದವರಿಗೆ ಚಿಕ್ಕಮಗಳೂರಿನಲ್ಲಿ ಸನ್ಮಾನ

katar
Published on

ಚಿಕ್ಕಮಗಳೂರು: ಕತಾರಿನ ಭಾರತೀಯ ಸಾಂಸ್ಕೃತಿಕ ಸಂಘಕ್ಕೆ ಈಚೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪಿ.ಎನ್. ಬಾಬುರಾಜನ್ ಅವರಿಗೆ ಚಿಕ್ಕಮಗಳೂರು ಗೆಳೆಯರ ಬಳಗ (CFC) ಹಾಗೂ ನಿಯಾಜ್ ಅಹ್ಮದ್ ಅಭಿಮಾನಿ ಬಳಗದವರಿಂದ (NFC) ಸನ್ಮಾನಿಸಲಾಯಿತು.

ಈ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ಗಳಿಸುವ ಮೂಲಕ ದಾಖಲೆ ನಿರ್ಮಿಸಿದ ಕತಾರ್​ನಲ್ಲಿ ನೆಲೆಸಿರುವ ಕನ್ನಡಿಗ, ಸಮಾಜ ಸೇವಕ, ಸುಬ್ರಮಣ್ಯ ಹೆಬ್ಬಾಗಿಲು ( ಮಾಜಿ ಉಪಾಧ್ಯಕ್ಷ - ಕರ್ಣಾಟಕ ಸಂಘ ಕತಾರ್ , ಮಾಜಿ ಸಹ ಕಾರ್ಯದರ್ಶಿ - ಐ.ಸಿ.ಬಿ.ಫ್ ) ಅವರಿಗೂ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಂಘದ (CFC ಹಾಗೂ NFC) ಅಧ್ಯಕ್ಷರಾದ ಇಸ್ಮಾಯಿಲ್ ಅಬೂಬಕ್ಕರ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶೈಖ್ ಮುದಸ್ಸಿರ್ ಅಹ್ಮದ್​ ಸನ್ಮಾನಿಸಿದರು. ಮಹಿಳಾ ವಿಭಾಗದ ಮುಖ್ಯಸ್ಥರಾದ ನೂರ್ ಉಲ್ ಹುದಾ ಹಾಗೂ ಮಿಸ್ ಶೇಖಾ ಮಡಿಹಾ ಸನ್ಮಾನಿತರನ್ನು ಅಭಿನಂದಿಸಿದರು. ಉಪಾಧ್ಯಕ್ಷರಾದ ಜಾಕಿರ್ ಅಹ್ಮದ್ ಕತಾರ್​ನ ಖ್ಯಾತ ಸಿಹಿ ಪೆಟ್ಟಿಗೆಯನ್ನು ವಿತರಿಸಿ ಶುಭ ಹಾರೈಸಿದರು .

ಕಾರ್ಯಕ್ರಮವನ್ನು ಜಾಕಿರ್ ಅಹ್ಮದ್ ನಿರೂಪಿಸಿದರು. ಇಸ್ಮಾಯಿಲ್ ಅಬೂಬಕ್ಕರ್ ವಂದಿಸಿದರು.

ಐಸಿಬಿಎಫ್ ಮಾಜಿ ಮುಖ್ಯಸ್ಥ ಮಹೇಶ್ ಗೌಡ, ಐಸಿಬಿಎಫ್​ನ ನೂತನ ಸದಸ್ಯ ದಿನೇಶ್ ಗೌಡ, ಸಂಘದ (CFC ಹಾಗೂ NFC) ಪದಾಧಿಕಾರಿಗಳಾದ ರಾಇಶ್ , ಜುನೈದ್ , ಒವಯಿಸ್, ಇಸ್ಹಾಕ್, ಇಮ್ರಾನ್ ಹಾಗೂ ಇರ್ಷಾದ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net