ಅಬೂಬಕ್ಕರ್ ಆರ್ಲಪದವುಗೆ ಕಸ್ತೂರಿ ಸಿರಿಗನ್ನಡ ಪ್ರಶಸ್ತಿ

Ism_Abubakar
Published on

ಪುತ್ತೂರು ಗ್ರಾಮಾಂತರ: ಕರ್ನಾಟಕ ನಾಮಕರಣದ ಸುವರ್ಣ ವರ್ಷಾಚರಣೆಯ ಹಿನ್ನೆಲೆಯಲ್ಲಿ ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆ ನೀಡುವ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರಕ್ಕೆ ಗಡಿನಾಡು ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಸ್.ಅಬೂಬಕರ್ ಆರ್ಲಪದವು ಆಯ್ಕೆಯಾಗಿದ್ದಾರೆ.

ಸಾಹಿತ್ಯ, ಭಾಷೆ, ನೆಲ-ಜಲ, ನಾಡು-ನುಡಿ ಮೊದಲಾದ ಕ್ಷೇತ್ರಗಳಲ್ಲಿ ಹಾಗೂ ಗಡಿನಾಡ ಕ್ಷೇತ್ರದಲ್ಲಿ ಅಬೂಬಕ್ಕರ್ ಅವರು ವಿವಿಧ ಸಂಘ-ಸಂಸ್ಥೆಗಳ ಮೂಲಕ ಸಲ್ಲಿಸಿರುವ ಸೇವೆ ಮತ್ತು ಸಾಧನೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net