ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ್ ಫೈಲ್ಸ್​ ಪನೊರಮಾದಲ್ಲಿ ಪ್ರದರ್ಶನಕ್ಕೆ ಆಯ್ಕೆ...

kashmir files
Published on

ನವದೆಹಲಿ: ಈ ವರ್ಷ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಿದ್ದ ಕಾಶ್ಮೀರ್ ಫೈಲ್ಸ್ ಸಿನಿಮಾ ಈಗ ಇಂಡಿಯನ್ ಪನೊರಮಾ ಫಾರ್ ಐಎಫ್​ಎಫ್​ಐ ವಿಭಾದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಕಾಶ್ಮೀರ್ ಫೈಲ್ಸ್ ಈಗಾಗಲೇ 'ಸಿಯಾಟಲ್​ ಫಿಲಂ ಫೆಸ್ಟಿವಲ್, ಅವೇರ್​ನೆಸ್​ ಫಿಲಂ ಫೆಸ್ಟಿವಲ್​ಗೆ ಆಯ್ಕೆಯಾಗಿದ್ದು ಈಗ ಮತ್ತೊಂದು ಫಿಲಂ ಫೆಸ್ಟಿವಲ್​ನಲ್ಲಿ ಪ್ರದರ್ಶನಕ್ಕೆ ಆಯ್ಕೆ ಆಗಿದೆ. ಅನುಪಂ ಖೇರ್, ಪಲ್ಲವಿ ಜೋಶಿ, ದರ್ಶನ್​ ಕುಮಾರ್, ಮಿಥುನ್ ಚಕ್ರವರ್ತಿ ನಟಿಸಿರುವ ಸಿನಿಮಾ ಜಗತ್ತಿನೆಲ್ಲೆಡೆ ಪ್ರೇಕ್ಷಕರನ್ನು ಆಕರ್ಷಿಸಿತ್ತು.

ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈ ಶುಭ ಸುದ್ದಿಯನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಅವರು ಟ್ವೀಟ್​ನಲ್ಲಿ 'ಕಾಶ್ಮೀರ್ ಫೈಲ್ಸ್ ಸಿನಿಮಾ ಪನೊರಮಾ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆ ಆಗಿರುವುದು ತುಂಬಾ ಸಂತೋಷದ ಸಂಗತಿ' ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net