ಕಸಮುಕ್ತ ಮಾಡಿದ ಪೌರಕಾರ್ಮಿಕರು

09Jaggu13
ಬುಡಾ ಕಚೇರಿ ಹಿಂಭಾಗದಲ್ಲಿ ಕಸ ಸುರಿಯುತ್ತಿದ್ದ ದೊಡ್ಡ ಸ್ಥಳವನ್ನು ಸ್ವಚ್ಛಗೊಳಿಸಿ ಕಸ ಹಾಕದಂತೆ ವಿನಂತಿಸಿದ ಪೌರಕಾರ್ಮಿಕರು.
Published on

ಬೆಳಗಾವಿ: ಮಹಾನಗರ ಪಾಲಿಕೆಯ ಪೌರಕಾರ್ಮಿಕರು ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸುತ್ತಿದ್ದರೂ ಹಸಿ-ಒಣ ಕಸ ಬಿಸಾಕಿ ಗಲೀಜು ಮಾಡುತ್ತಿದ್ದ 100ಕ್ಕೂ ಹೆಚ್ಚು ಸ್ಥಳಗಳನ್ನು ಪೌರಕಾರ್ಮಿಕರು ಕಸಮುಕ್ತ ಪ್ರದೇಶವನ್ನಾಗಿ ಮಾಡಿದ್ದಾರೆ. ಕಸ ಸುರಿಯುವ ಸ್ಥಳಗಳಲ್ಲಿ ಹೂ-ಮಾಲೆಯಿಂದ ಸುಂದರಗೊಳಿಸಿ ಇಲ್ಲಿ ಕಸ ಹಾಕದಂತೆ ಜಾಗೃತಿ ಲಕ ಅಳವಡಿಸಿದ್ದಾರೆ. ಬುಡಾ ಕಚೇರಿ ಹಿಂಭಾಗದ ಅಸದ್‌ಖಾನ್ ಹೌಸಿಂಗ್ ಸೊಸೈಟಿ ಪ್ರದೇಶದಲ್ಲಿದ್ದ ಕಸ ಸುರಿಯುತ್ತಿದ್ದ ದೊಡ್ಡ ಸ್ಥಳವನ್ನು ಶನಿವಾರ ಸ್ವಚ್ಛಗೊಳಿಸಲಾಯಿತು. 15 ದಿನಗಳಲ್ಲಿ 100ಕ್ಕೂ ಹೆಚ್ಚು ಕಡೆಗಳಲ್ಲಿ ಕಸ ಸುರಿಯುತ್ತಿದ್ದ ಸ್ಥಳಗಳನ್ನು ಸುಂದರಗೊಳಿಸಲಾಗಿದೆ ಮತ್ತು ಕಸ ಎಸೆದವರೆಗೆ 1 ಲಕ್ಷ ರೂ. ದಂಡ ವಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net