ಕರೂರು ಕಾಲ್ತುಳಿತ; ಇಂದು ಮಾಮಲ್ಲಪುರಂನಲ್ಲಿ ಸಂತ್ರಸ್ತರನ್ನು ಭೇಟಿಯಾಗಲಿರುವ ದಳಪತಿ ವಿಜಯ್| Thalapathy Vijay

ವಿಜಯವಾಣಿ (70)
Published on

ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ ಸೆ. 27ರಂದು ಟಿವಿಕೆ ರ‍್ಯಾಲಿಯಲ್ಲಿ ಕಾಲ್ತುಳಿತ ನಡೆದ ಮೃತರಾದ 41 ಮಂದಿ ಕುಟುಂಬಸ್ಥರನ್ನು  ಇಂದು(ಅ. 27) ಚೆನ್ನೈನ ಮಾಮಲ್ಲಪುರಂ ಖಾಸಗಿ ಹೋಟೆಲ್​ವೊಂದರಲ್ಲಿ ತಮಿಳು ನಟ ಮತ್ತು ರಾಜಕಾರಣಿ ದಳಪತಿ ವಿಜಯ್(Thalapathy Vijay) ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ ಎಂದು ವರದಿಯಾಗಿದೆ.

ತಮ್ಮದೇ ಪಕ್ಷದರ‍್ಯಾಲಿಯಲ್ಲಿ ಘಟನೆ ನಡೆದು ಒಂದು ತಿಂಗಳಾದ್ರೂ ಭದ್ರತೆ ಮತ್ತು ಸರ್ಕಾರದ ಅನುಮತಿ ಕಾರಣದಿಂದ ಕರೂರಿಗೆ ಹೋಗಿ ವಿಜಯ್ ಸಂತ್ರಸ್ತರನ್ನು ಭೇಟಿಯಾಗಿರಲಿಲ್ಲ. ಇಂದು ಸಂತ್ರಸ್ತ ಕುಟುಂಬಸ್ಥರನ್ನೇ ವಿಶೇಷ ಖಾಸಗಿ ಬಸ್​ನಲ್ಲೇ ಚೆನ್ನೈಗೆ ಕರೆಸಿಕೊಂಡಿದ್ದು, ಅವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ.

ಇನ್ನೂ ವಿಜಯ್ ಸಂತ್ರಸ್ತರ ಭೇಟಿ ಕಾರ್ಯಕ್ರಮವನ್ನು ಖಾಸಗಿಯಾಗಿ ನಡೆಸಲಿದ್ದು, ಮಾಧ್ಯಮಗಳಿಗೆ ಪ್ರವೇಶ ನೀಡಲಾಗಿಲ್ಲ. ಈಗಾಗಲೇ ದೀಪಾವಳಿಗೂ ಮುನ್ನವೇ ಸಂತ್ರಸ್ತ ಕುಟುಂಬಗಳಿಗೆ ವಿಜಯ್ ತಲಾ 20 ಲಕ್ಷ ರೂ. ಪರಿಹಾರವನ್ನು ಅವರ ಬ್ಯಾಂಕ್​ಗೆ ಖಾತೆಗಳಿಗೆ ಜಮಾ ಮಾಡಿದ್ದಾರೆ.

ಇನ್ನೂ ಕಾಲ್ತುಳಿತ ಘಟನೆಯ ಸುಪ್ರೀಂಕೋರ್ಟ್​ ಸಿಬಿಐ ತನಿಖೆಗೆ ಆದೇಶಿಸಿದೆ. ನಿವೃತ್ತ ಸುಪ್ರೀಂಕೋರ್ಟ್​ ನ್ಯಾಯಾಧೀಶರ ಅಜಯ್ ರಸ್ತೋಗಿ ನೇತೃತ್ವದಲ್ಲಿ ಮೂವರು ಸದಸ್ಯರ ಮೇಲ್ವಿಚಾರಣಾ ಸಮಿತಿಯನ್ನು ಸಹ ಸ್ಥಾಪಿಸಿದೆ. ಇನ್ನು ತನಿಖೆಯನ್ನು ವಹಿಸಿಕೊಂಡಿರುವ ಸಿಬಿಐ ಅಧಿಕಾರಿಗಳು ರಾಜ್ಯ ಪೊಲೀಸರು ದಾಖಲಿಸಿದ್ದ ಎಫ್​ಐಆರ್​ ಅನ್ನು ಮರು ನೊಂದಾಯಿಸಿದ್ದು, ಈ ಬಗ್ಗೆ ನ್ಯಾಯಾಲಯಕ್ಕೂ ಅದನ್ನು ತಿಳಿಸಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net