"ಖಂಡಿತ ಬೇಸರವಿದೆ..." ಶಮಿ, ರಹಾನೆ ಬೆನ್ನಲ್ಲೇ ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಕರುಣ್ ನಾಯರ್​ ಕಿಡಿ | Karun Nair

"ಖಂಡಿತ ಬೇಸರವಿದೆ..." ಶಮಿ, ರಹಾನೆ ಬೆನ್ನಲ್ಲೇ ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಕರುಣ್ ನಾಯರ್​ ಕಿಡಿ | Karun Nair
Published on

ನವದೆಹಲಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಿಂದ ತಮ್ಮನ್ನು ಕೈಬಿಟ್ಟ ಅಜಿತ್ ಅಗರ್ಕರ್​​ ನೇತೃತ್ವದ ಆಯ್ಕೆ ಸಮಿತಿ ವಿರುದ್ಧ ವೇಗಿ ಆರಂಭದಲ್ಲಿ ಮೊಹಮ್ಮದ್​ ಶಮಿ ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರ ಬಳಿಕ ಟೀಮ್ ಇಂಡಿಯಾ ಕ್ರಿಕೆಟಿಗ ಅಜಿಂಕ್ಯಾ ರಹಾನೆ ಕಿಡಿಕಾರಿದರು. ಇದೀಗ ಇವರಿಬ್ಬರ ಬೆನ್ನಲ್ಲೇ ಕರುಣ್ ನಾಯರ್ (Karun Nair )​ ಅಸಮಾದಾನ ಹೊರಹಾಕಿದ್ದು, ತಮಗೆ ಅವಕಾಶ ಕೊಡಬೇಕಿತ್ತು ಎಂಬುದನ್ನು ಒತ್ತಿ ಹೇಳಿದ್ದಾರೆ.

ಕಳೆದ ಆವೃತ್ತಿಯಲ್ಲಿ ವಿದರ್ಭ ರಣಜಿ ಟ್ರೋಫಿ ಗೆಲ್ಲುವಲ್ಲಿ ಕರುಣ್ ಪ್ರಮುಖ ಪಾತ್ರ ವಹಿಸಿದ್ದರು. ದೇಶೀಯ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ರನ್​ಗಳ ಕೊಡುಗೆ ನೀಡಿದ ಅವರು, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡಲಿಲ್ಲ. ಇದು ಅವರ ಆಯ್ಕೆಗೆ ದೊಡ್ಡ ಹೊಡೆತ ನೀಡಿತು. ಇದೇ ಕಾರಣವನ್ನು ಮುಂದಿಟ್ಟ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ, ಅವರನ್ನು ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಎ ವಿರುದ್ಧದ ಭಾರತ ಎ ಸರಣಿಗೆ ಆಯ್ಕೆ ಮಾಡದಿರಲು ನಿರ್ಧರಿಸಿತು.

ತಮ್ಮ ಆಯ್ಕೆ ಕುರಿತಂತೆ ಭಾನುವಾರ (ಅ.26) ನಡೆದ ಗೋವಾ ವಿರುದ್ಧದ ರಣಜಿ ಟ್ರೋಫಿ ಪಂದ್ಯದ ಬಳಿಕ ಮಾತನಾಡಿದ ಕರುಣ್, "ಖಂಡಿತ, ಇದು ಬೇಸರ ಮೂಡಿಸಿದೆ. ನಾನು ಅವಕಾಶಕ್ಕೆ ಅರ್ಹ. ತಂಡದಲ್ಲಿ ಕೆಲವು ವ್ಯಕ್ತಿಗಳು ತಮ್ಮ ಭಾವನೆಗಳ ಬಗ್ಗೆ ನನ್ನೊಂದಿಗೆ ಉತ್ತಮ ಸಂಭಾಷಣೆ ನಡೆಸಿದ್ದಾರೆ. ಮತ್ತೊಂದೆಡೆ, ನಮ್ಮ ಕೆಲಸ ರನ್​ ಗಳಿಸುವುದು. ಅದರತ್ತ ಹೆಚ್ಚು ಗಮನ ಹರಿಸಬೇಕು. ಜನರ ಅಭಿಪ್ರಾಯಗಳನ್ನು ಅವರಿಗೆ ಬಿಟ್ಟುಬಿಡಬೇಕು" ಎಂದಿದ್ದಾರೆ.

"ನನ್ನ ಮುಂದಿರುವುದು ದೇಶಕ್ಕಾಗಿ ಆಡುವುದಷ್ಟೇ. ಅದು ನಿಮ್ಮಿಂದ ಸಾಧ್ಯವಾಗ್ತಿಲ್ಲ ಎಂದರೆ, ಮುಂಬರುವ ಪಂದ್ಯಗಳಲ್ಲಿ ಹೆಚ್ಚು ರನ್ ಗಳಿಸುವುದು ಹಾಗೂ ತಂಡಕ್ಕೆ ಗೆಲುವನ್ನು ತಂದುಕೊಡುವುದು" ಎಂದು ಕರುಣ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net