ಕಾರ್ತಿಕ ದೀಪೋತ್ಸವ

Kartika Dipotsava
ಇಂಡಿ ತಾಲೂಕು ಲಚ್ಯಾಣದ ಕಮರಿಮಠದ ಆವರಣದಲ್ಲಿ ಕಾರ್ತಿಕ ದೀಪೋತ್ಸವದ ಅಂಗವಾಗಿ ಮಣ್ಣಿನ ಪಣತೆಯಲ್ಲಿ ಓಂ ಎಂಬ ಅಕ್ಷರ ಬೆಳಕಿನ ಚಿತ್ತಾರ ತೆಗೆದಿರುವುದು.
Published on

ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದ ಸಿದ್ಧಲಿಂಗ ಮಹಾರಾಜರ ಕಮರಿಮಠದಲ್ಲಿ ಕಾರ್ತಿಕ ಮಾಸದ ಅಂಗವಾಗಿ ನಿತ್ಯ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಳೆದ ದೀಪಾವಳಿ ಅಮಾವಾಸ್ಯೆಯ ದಿನದಿಂದ ಆರಂಭವಾಗಿ ಬರುವ ಛಟ್ಟಿ ಅಮಾವಾಸ್ಯೆಯವರೆಗೆ ನಿತ್ಯ ಸಂಜೆ ಜರುಗುವ, ಈ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಗನಬಸವೇಶ್ವರ ಐಟಿಐ ಕಾಲೇಜು, ಸರ್ಕಾರಿ ಪಿಯು ಕಾಲೇಜು, ಬಿಎಲ್‌ಡಿಇ ಸಂಸ್ಥೆಯ ಕೃಷಿ ಮಾಧ್ಯಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ನೂರಾರು ತೈಲದ ದೀಪ ಬೆಳಗಿ ಸಂಭ್ರಮಿಸಿದರು.

ಬೆಳಗ್ಗೆ ಸಿದ್ಧಲಿಂಗ ಮಹಾರಾಜರ ಶಿಲಾಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ವಿದ್ಯಾರ್ಥಿಗಳು, ಸಂಜೆ ವೇಳೆಯಲ್ಲಿ ಸಾಮೂಹಿಕವಾಗಿ ಕಮರಿಮಠದ ಆವರಣದಲ್ಲಿ ಮಣ್ಣಿನ ಪಣತೆಯಲ್ಲಿ ದೀಪ ಬೆಳಗಿ, ಓಂ ಎಂಬ ಅಕ್ಷರ ಬೆಳಕಿನ ಚಿತ್ತಾರ ತೆಗೆದು ನೋಡುಗರ ಕಣ್ಮನ ಸೆಳೆದರು. ಸ್ಥಳೀಯ ಹಾಗೂ ಸುತ್ತಲಿನ ಲೋಣಿ, ಕೆ.ಡಿ. ಬರಗುಡಿ, ಆಳೂರ, ಅಹಿರಸಂಗ, ಪಡನೂರ ಗ್ರಾಮದ ಭಕ್ತರು ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net