More

    ಬೆಂಗಳೂರಿನ ರಸ್ತೆಬದಿಯಲ್ಲಿ ದೋಸೆ, ಫಿಲ್ಟರ್ ಕಾಫಿ ಸವಿದ ನಟ ಕಾರ್ತಿಕ್ ಆರ್ಯನ್

    ಬೆಂಗಳೂರು: ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಬೆಂಗಳೂರಿನ  ರಸ್ತೆಬದಿಯಲ್ಲಿ ಸ್ನೇಹಿತರ ಜತೆ  ರುಚಿಯಾದ ತಿಂಡಿ ಸವಿದಿದ್ದಾರೆ. ಈ ವೇಳೆ ತೆಗೆದ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

    ಆಹಾರ ಪ್ರಿಯರ ನೆಚ್ಚಿನ ತಾಣ, ಬೆಂಗಳೂರಿನ ಪ್ರಸಿದ್ಧ ಹೋಟೆಲ್ ರಾಮೇಶ್ವರಂ ಕೆಫೆಗೆ ಬಾಲಿವುಡ್ ಸ್ಟಾರ್​ ನಟ ಕಾರ್ತಿಕ್ ಆರ್ಯನ್ ಭೇಟಿ ನೀಡಿದ್ದು, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ​  ವಿಶೇಷವೆಂದರೆ ‘ದಿ ರಾಮೇಶ್ವರನ್ ಕೆಫೆ’ಯಲ್ಲಿ ನಟ ಕಾರ್ತಿಕ್ ಆರ್ಯನ್ ಕನ್ನಡದಲ್ಲಿ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ.

    ರಾಮೇಶ್ವರಂ ಕೆಫೆಗೆ ಬಂದ ಕಾರ್ತಿಕ್ ಆರ್ಯನ್, ದೋಸೆ, ಇಡ್ಲಿ ತಿಂದು  ಜೊತೆಗೆ ಫಿಲ್ಟರ್ ಕಾಫಿ ಕುಡಿದಿದ್ದಾರೆ. ಕಾರ್ತಿಕ್ ಆರ್ಯನ್​ ತಿಂಡಿಗಳನ್ನು ಕನ್ನಡದಲ್ಲಿ ಆರ್ಡರ್ ಮಾಡಿದ್ದಾರೆ. ಈ ವಿಡಿಯೋವನ್ನು ಸಹ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. 

     
     
     
     
     
    View this post on Instagram
     
     
     
     
     
     
     
     
     
     
     

     

    A post shared by KARTIK AARYAN (@kartikaaryan)

    ರಾಮೇಶ್ವರಂ ಕೆಫೆಗೆ ಭೇಟಿ ಕೊಟ್ಟ ಫೋಟೋಗಳನ್ನು ನಟ ಕಾರ್ತಿಕ್ ಆರ್ಯನ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನ ರುಚಿಕರ , ಐಕಾನಿಕ್ ಜಾಗಕ್ಕೆ ಭೇಟಿ ನೀಡಿದ ಮೇಲೆ ಅನ್ನಿಸುತ್ತಿದೆ, ಫುಡ್ ವ್ಲಾಗರ್ ಆಗಿಬಿಡೋದಾ ಎಂದು ಕಾರ್ತಿಕ್ ಸೋಶಿಯಲ್ ಮೀಡಿಯಾದಲ್ಲಿ ಬರೆದು ಕೊಂಡಿದ್ದಾರೆ.

    ‘ಪ್ಯಾರ್ ಕಾ ಪಂಚನಾಮ’ ಚಿತ್ರದ ಮೂಲಕ ಬಾಲಿವುಡ್‌ಗೆ ಕಾರ್ತಿಕ್ ಆರ್ಯನ್ ಎಂಟ್ರಿ ಕೊಟ್ಟರು. ಆಕಾಶ ವಾಣಿ, ಧಮಾಕಾ, ಲವ್ ಆಜ್ ಕಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts