More

    ಕಾರ್ತಿಕ್​ ಆರ್ಯನ್​ ಈಗ ‘ಕ್ಯಾಪ್ಟನ್​ ಇಂಡಿಯಾ’ …

    ಕಾರ್ತಿಕ್​ ಆರ್ಯನ್​ ಈಗ 'ಕ್ಯಾಪ್ಟನ್​ ಇಂಡಿಯಾ' ...

    ಮುಂಬೈ: ಎರಡೇ ತಿಂಗಳ ಹಿಂದಿನ ಮಾತು. ಕೆಲವೇ ದಿನಗಳ ಅಂತರದಲ್ಲಿ ಮೂರು ಸಿನಿಮಾಗಳಿಂದ ಕಾರಣಾಂತರಗಳಿಂದ ಹೊರಬಂದಿದ್ದರು ನಟ ಕಾರ್ತಿಕ್​ ಆರ್ಯನ್​. ಕರಣ್​ ಜೋಹರ್​ ನಿರ್ಮಾಣದ ‘ದೋಸ್ತಾನಾ 2’, ಶಾರೂಖ್​ ಖಾನ್​ ನಿರ್ಮಾಣದ ‘ಫ್ರೆಡ್ಡಿ’ ಮತ್ತು ಆನಂದ್​ ಎಲ್​ ರೈ ನಿರ್ಮಾಣದ ಒಂದು ಹೊಸ ಚಿತ್ರದಿಂದ ಕಾರ್ತಿಕ್​ ಕಾರಣಾಂತರಗಳಿಂದ ಹೊರಬರಬೇಕಾಯಿತು.

    ಇದನ್ನೂ ಓದಿ: ನಾನು ಆತ್ಮಹತ್ಯೆಗೆ ಯತ್ನಿಸಿದ್ದೆ, ಅಂದು ಅನಾಹುತ ಸಂಭವಿಸಿದ್ದರೆ ಇಂದು ಬದುಕಿರುತ್ತಿರಲೇ ಇಲ್ಲ: ನಟ ಜಗ್ಗೇಶ್​

    ಇನ್ನು ಅವರ ಕೆರಿಯರ್​ ಫಿನಿಶ್​ ಎಂದೇ ಎಲ್ಲರೂ ಭಾವಿಸಿದ್ದರು. ಏಕೆಂದರೆ, ಈ ಮೂರು ಚಿತ್ರಗಳಿಂದ ಹೊರಬರುವುದಕ್ಕೆ ಮುನ್ನ ಕರಣ್ ಜೋಹರ್​ ಜತೆಗೆ ಕಿತ್ತಾಡಿಕೊಂಡಿದ್ದರಂತೆ. ಈ ಕಿತ್ತಾಟದಿಂದ ಕಾರ್ತಿಕ್​ ಭಾರೀ ಬೆಲೆ ತೆರಬೇಕಾಗುವ ಸಾಧ್ಯತೆ ಇದೆ ಎಂದು ಬಾಲಿವುಡ್​ ಪಂಡಿತರು ಭವಿಷ್ಯ ನುಡಿದಿದ್ದರು. ಅದಕ್ಕೆ ಸರಿಯಾಗಿ, ಕಾರ್ತಿಕ್​ ಮೂರು ಚಿತ್ರಗಳನ್ನು ಕಳೆದುಕೊಕಳ್ಳಬೇಕಾಯಿತು. ಈಗ ಕಾರ್ತಿಕ್​ ಹೊಸದೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅದೇ ‘ಕ್ಯಾಪ್ಟನ್​ ಇಂಡಿಯಾ’.

    ಹನ್ಸಲ್​ ಮೆಹ್ತಾ ನಿರ್ದೇಶನದ ‘ಕ್ಯಾಪ್ಟನ್​ ಇಂಡಿಯಾ’ ಎಂಬ ಚಿತ್ರವನ್ನು ಕಾರ್ತಿಕ್​ ಒಪ್ಪಿಕೊಂಡಿದ್ದು, ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಪೈಲಟ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ರಾನ್ನಿ ಸ್ಕ್ರೂವಾಲಾ ಮತ್ತು ಹರ್ಮಾನ್​ ಬವೇಜ ಜತೆಯಾಗಿ ನಿರ್ಮಿಸುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

    ಇದನ್ನೂ ಓದಿ: ಚಿತ್ರ ವಿಮರ್ಶೆ: ಇಕ್ಕಟ್‌ನಲ್ಲಿದೆ ಹಾಸ್ಯದ ಗುಳಿಗೆ…

    ಭಾರತದ ಇತಿಹಾಸದಲ್ಲೇ ಒಂದು ಯಶಸ್ವೀ ರಕ್ಷಣಾ ಕಾರ್ಯಾಚರಣೆಯನ್ನಾಧರಿಸಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಮೊದಲೇ ಹೇಳಿದಂತೆ ಕಾರ್ತಿಕ್​ ಈ ಚಿತ್ರದಲ್ಲಿ ಪೈಲಟ್​ ಪಾತ್ರ ಮಾಡುತ್ತಿದ್ದು, ರಕ್ಷಣಾ ಕಾರ್ಯಾಚರಣೆಯ ಮುಂದಾಳತ್ವವನ್ನು ಅವರು ವಹಿಸಿಕೊಳ್ಳುತ್ತಿದ್ದಾರಂತೆ. ಈ ಚಿತ್ರವು ಕೆಲವು ನೈಜ ಘಟನೆಗಳನ್ನಾಧರಿಸಿದ ಚಿತ್ರವಾಗಿದ್ದು, ಆದರೆ ಯಾವ ಘಟನೆಗಳು ಎಂಬ ವಿಷಯದ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಹೊರಬಿಟ್ಟಿಲ್ಲ.

    ಬ್ಲೂ ಫಿಲ್ಮ್​ ವಿಚಾರ ಶಿಲ್ಪಾಗೆ ಗೊತ್ತಿತ್ತಾ? ಪೊಲೀಸರಿಂದ ವಿಚಾರಣೆ- ಕುಂದ್ರಾಗೆ 27ರವರೆಗೆ ಜೈಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts