More

    ಪ್ರಾರಂಭಕ್ಕೂ ಮುನ್ನವೇ ಬದಲಾಗ್ತಿದೆ ಕಾರ್ತಿಕ್​ ಆರ್ಯನ್​ ಚಿತ್ರದ ಟೈಟಲ್​

    ಮುಂಬೈ: ಕಾರ್ತಿಕ್​ ಆರ್ಯನ್​ ಇತ್ತೀಚೆಗೆ ಒಂದಲ್ಲ ಒಂದು ವಿವಾದಕ್ಕೆ ಸಿಲುಕುತ್ತಲೇ ಇದ್ದಾರೆ. ಇತ್ತೀಚೆಗೆ, ಎರಡು ಚಿತ್ರಗಳಿಂದ ಅವರು ಕಾರಣಾಂತರಗಳಿಂದ ಹೊರಬಿದ್ದಿದ್ದರು. ಈಗ ಅವರು ಇನ್ನೊಂದು ಕಾರಣಕ್ಕೆ ವಿವಾದಕ್ಕೀಡಾಗಿದ್ದಾರೆ.

    ಇದನ್ನೂ ಓದಿ: 10 ವರ್ಷಗಳ ನಂತರ ಪ್ರಿಯದರ್ಶನ್​ ನಿರ್ದೇಶನದಲ್ಲಿ ಅಕ್ಷಯ್​ ಹೊಸ ಚಿತ್ರ …

    ಎರಡು ಚಿತ್ರಗಳನ್ನು ಬ್ಯಾಕ್​ ಟು ಬ್ಯಾಕ್​ ಕಳೆದುಕೊಂಡ ಕಾರ್ತಿಕ್​, ಆ ನಂತರ ‘ಸತ್ಯನಾರಾಯಣ್​ ಕೀ ಕಥಾ’ ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದು ನೆನಪಿರಬಹುದು. ಸಾಜಿದ್​ ನಡಿಯಾಡ್ವಾಲ ನಿರ್ಮಿಸುತ್ತಿರುವ ಈ ಚಿತ್ರವನ್ನು ಸಮೀರ್​ ವಿದ್ವಂಸ್​ ನಿರ್ದೇಶಿಸುತ್ತಿದ್ದಾರೆ. ಈಗ ಈ ಚಿತ್ರವು ವಿವಾದಕ್ಕೆ ಸಿಲುಕಿದೆ.

    ಸತ್ಯನಾರಾಯಣ ಎನ್ನುವುದು ವಿಷ್ಣುವಿನ ಇನ್ನೊಂದು ರೂಪದ ಹೆಸರು. ‘ಸತ್ಯನಾರಾಯಣ್​ ಕೀ ಕಥಾ’ ಎಂಬ ಹೆಸರನ್ನು ಇಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟಾಗುತ್ತದೆ ಎಂದು ಕೆಲವು ಸಂಘಟನೆಗಳು ಆರೋಪ ಮಾಡಿದ ಹಿನ್ನೆಲೆಯಲ್ಲಿ, ಇದೀಗ ಚಿತ್ರದ ಹೆಸರನ್ನು ಬದಲಾಯಿಸಲು ಚಿತ್ರತಂಡ ಮುಂದಾಗಿದೆ.

    ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರುವ ನಿರ್ದೇಶಕ ಸಮೀರ್​ ವಿದ್ವಂಸ್​, ‘ನಾವು ಯಾರ ಭಾವನೆಗಳಿಗೂ ಧಕ್ಕೆ ಉಂಟು ಮಾಡುವ ಉದ್ದೇಶ ಹೊಂದಿರಲಿಲ್ಲ. ಚಿತ್ರಕಥೆ ಮಾಡುವ ಪ್ರಕ್ರಿಯೆಯಲ್ಲಿ ಈ ಹೆಸರು ಚಿತ್ರಕ್ಕೆ ಸೂಕ್ತವಾಗಿರುತ್ತದೆ ಎಂದನಿಸಿ, ಚಿತ್ರಕ್ಕೆ ‘ಸತ್ಯನಾರಾಯಣ್​ ಕೀ ಕಥಾ’ ಎಂಬ ಹೆಸರನ್ನು ಇಡಲಾಯಿತು. ಈ ಕುರಿತು ಆಕ್ಷೇಪ ಎದುರಾಗಿರುವ ಹಿನ್ನೆಲೆಯಲ್ಲಿ ಚಿತ್ರದ ಹೆಸರನ್ನು ಬದಲಾಯಿಸಲು ಚಿತ್ರತಂಡ ನಿರ್ಧರಿಸಿದೆ’ ಎಂದು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ‘ಸಿ’ ಗ್ರೇಡ್​ ಚಿತ್ರಗಳ ವಿಮರ್ಶೆ ಮಾಡುವುದಿಲ್ಲವಂತೆ ಕೆಆರ್​ಕೆ …

    ಹಾಗಾದರೆ, ‘ಸತ್ಯನಾರಾಯಣ್​ ಕೀ ಕಥಾ’ ಎಂಬ ಹೆಸರಿನ ಬದಲಿಗೆ, ಇನ್ಯಾವ ಹೆಸರಿಡಲಾಗುತ್ತದೆ ಎಂಬ ಪ್ರಶ್ನೆ ಸಹಜವೇ. ಸದ್ಯಕ್ಕೆ ಚಿತ್ರತಂಡ ಯಾವುದೇ ಹೆಸರಿಡದೆ, ಪ್ರೀ-ಪ್ರೊಡಕ್ಷನ್​ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಚಿತ್ರದ ಹೊಸ ಹೆಸರು ಏನಿರಬಹುದು ಎಂಬ ಚಿತ್ರತಂಡ ಇನ್ನಷ್ಟೇ ಬಹಿರಂಗಗೊಳಿಸಬೇಕಿದೆ.

    ಅಮಿತಾಭ್​ ಬಚ್ಚನ್​ ಮನೆಯ ಒಂದು ಭಾಗವನ್ನು ಕೆಡವಲು ಬಿಎಂಸಿ ಸಿದ್ಧತೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts