ಕನ್ನಡೇತರರಿಗೆ ಕನ್ನಡ ಕಲಿಸಲು ಸಚಿವರಿಂದ ಶುರುವಾಗಿದೆ ಹೊಸ ಪ್ಲ್ಯಾನ್​

RAVI
Published on

ಬೆಂಗಳೂರು: ಕರ್ನಾಟಕದಲ್ಲಿ ವಾಸಿಸುವ ಕನ್ನಡೇತರರಿಗೆ ಕನ್ನಡ ಕಲಿಸುವ ಸಲುವಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೊಸ ಯೋಜನೆಯನ್ನು ರೂಪಿಸಿದ್ದಾರೆ.

ಟ್ವಿಟರ್​ ಖಾತೆಯ ಮೂಲಕ ಹೊಸ ಬಗೆಯಲ್ಲಿ ಕನ್ನಡ ಕಲಿಯಲು ಅವಕಾಶವನ್ನು ಸಚಿವರು ರೂಪಿಸಿದ್ದಾರೆ. ಕಲಿ ಕನ್ನಡ ಹೆಸರಿನಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿರುವುದಾಗಿ ರವಿಯವರು ತಮ್ಮ ಟ್ವಿಟರ್​ ಖಾತೆಯಲ್ಲಿ ಮಾಹಿತಿ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಕನ್ನಡಿಗರಲ್ಲದವರಿಗೆ ಈ ಯೋಜನೆ ರೂಪಿಸಲಾಗಿದೆ. ಕರ್ನಾಟಕದಲ್ಲಿ ನೆಲೆಸಿರುವವರು ಎಲ್ಲರೂ ಕನ್ನಡಿಗರು ಎನ್ನುವ ಮನೋಭಾವ ಬರಬೇಕು. ಆದ್ದರಿಂದ ಇಲ್ಲಿ ನೆಲೆಸಿರುವವರು ಇಲ್ಲಿಯ ಭಾಷೆಯನ್ನು ಕಲಿಯಬೇಕು. ಅವರಿಗೆ ಕನ್ನಡ ಕಲಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿರುವ ಸಚಿವರು, ಪ್ರತಿದಿನವೂ ನಮ್ಮ ತಂಡವು ಸ್ಪೋಕನ್​ (ಸಂಭಾಷಣೆ) ಕನ್ನಡವನ್ನು ಆನ್​ಲೈನ್​ನಲ್ಲಿ ಪ್ರಕಟಿಸುತ್ತದೆ ಎಂದಿರುವ ರವಿಯವರು ಇದಾಗಲೇ ಕನ್ನಡದ ಕೆಲವು ನುಡಿಗಟ್ಟುಗಳ ಪಟ್ಟಿಯನ್ನು ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಯತ್ನ

ಹೆಚ್ಚಿನ ಬ್ಯಾಂಕುಗಳಲ್ಲಿ ಅದರಲ್ಲಿಯೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡೇತರರೇ ತುಂಬಿರುವ ಕಾರಣ, ಇಂಗ್ಲಿಷ್​ ಅಥವಾ ಹಿಂದಿ ಮಾತನಾಡಲು ಬಾರದ ಗ್ರಾಹಕರಿಗೆ ತುಂಬಾ ಕಷ್ಟವಾಗುತ್ತಿದೆ ಎಂಬ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಹಾಗೂ ಸರ್ಕಾರಿ ಸೇವೆಗಳನ್ನು ಸಂಪೂರ್ಣವಾಗಿ ಕನ್ನಡಮಯ ಮಾಡಬೇಕು ಎಂಬ ಒತ್ತಾಸೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಈಗಾಗಲೇ ಬ್ಯಾಂಕುಗಳಿಗೆ ನಿರ್ದೇಶನ ನೀಡಿರುವ ಸರ್ಕಾರ, ಗ್ರಾಹಕರಿಗೆ ಕನ್ನಡದಲ್ಲಿಯೇ ಸೇವೆ ನೀಡುವಂತೆ ಹಾಗೂ ಸೈನ್​ಬೋರ್ಡ್​ಗಳನ್ನು ಕನ್ನಡಲ್ಲಿಯೇ ಪ್ರಕಟಿಸುವಂತೆ ಸೂಚಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net