ಕ್ರಿಕೆಟ್ ಆಟಗಾರ್ತಿ ಆದ ಗಾಯಕಿ; ಇವರು ಯಾರೆಂದು ಊಹಿಸಬಲ್ಲಿರಾ?

women1
Published on

ಬೆಂಗಳೂರು: ಸಂಗೀತದ ಹಿನ್ನೆಲೆ ಹೊಂದಿದ್ದ ಕುಟುಂಬದಲ್ಲಿ ಇವರು ಜನಿಸಿದ್ದರಿಂದ ಸಹಜವಾಗಿಯೇ ಸಂಗೀತ ಸಿದ್ಧಿಸಿತ್ತು. ಆದರೆ ಗಾಯಕಿ ಆಗಬೇಕಾಗಿದ್ದವರು, ಆಗಿದ್ದು ಮಾತ್ರ ಕ್ರಿಕೆಟ್ ಆಟಗಾರ್ತಿ. ಇದು ಭಾರತ ಮಹಿಳಾ ಕ್ರಿಕೆಟ್ ತಂಡದ ಎಡಗೈ ಸ್ಪಿನ್ ಬೌಲರ್ ಹಾಗೂ ಕರ್ನಾಟಕದವರೇ ಆದ ರಾಜೇಶ್ವರಿ ಗಾಯಕ್ವಾಡ್ ಅವರ ಯಶೋಗಾಥೆ. 

ಇತ್ತೀಚೆಗಷ್ಟೇ ನಡೆದ ಏಷ್ಯನ್‌ಗೇಮ್ಸ್ ಕ್ರೀಡಾಕೂಟದ ಮಹಿಳಾ ಟಿ20 ಟೂರ್ನಿಯಲ್ಲಿ ಭಾರತೀಯ ತಂಡ ಚಿನ್ನ ಗೆದ್ದಿದ್ದು, ಈ ಗೆಲುವಿಗೆ ರಾಜೇಶ್ವರಿ ಕೂಡ ಪ್ರಮುಖವಾಗಿ ಕಾರಣವಾಗಿದ್ದಾರೆ. ಶಾಲಾ ದಿನಗಳಲ್ಲಿ ಖೋ-ಖೋ, ವಾಲಿಬಾಲ್ ಆಟದಲ್ಲಿ ಅತೀವ ಆಸಕ್ತಿ ಹೊಂದಿದ್ದ ರಾಜೇಶ್ವರಿ ಕ್ರಿಕೆಟ್ ಆಟವನ್ನು ಮಾತ್ರ ಟೈಮ್‌ಪಾಸ್‌ಗೆಂದು ಆಡುತ್ತಿದ್ದರು. ತಂದೆಯ ಬೆಂಬಲದ ಪರಿಣಾಮ ಕ್ರಿಕೆಟ್ ಕ್ಲಬ್‌ಗೂ ಸೇರ್ಪಡೆಯಾದರು. ಎಡಗೈ ವೇಗಿಯಾಗಿದ್ದ ರಾಜೇಶ್ವರಿ ಅವರ ಬೌಲಿಂಗ್ ವೈಖರಿ ಗಮನಿಸಿದ್ದ ಬಿಜಾಪುರ ಮಹಿಳಾ ಕ್ರಿಕೆಟ್ ಕ್ಲಬ್‌ನ ಪ್ರಧಾನ ತರಬೇತುದಾರ ಅಶೋಕ್ ಜಾಧವ್ ಎಡಗೈ ಸ್ಪಿನ್ನರ್ ಆಗುವಂತೆ ಸಲಹೆ ನೀಡಿದರು.

ಕಠಿಣ ತರಬೇತಿ ಪಡೆದ ಬಳಿಕ ಕರ್ನಾಟಕ ತಂಡಕ್ಕೂ ಸೇರ್ಪಡೆಗೊಂಡದರು. ಇಲ್ಲಿಂದ ಎಲ್ಲವೂ ಅವರ ಯಶೋಗಾಥೆಯೇ. 2014ರಲ್ಲಿ ಮೂರು ಮಾದರಿಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಾಜೇಶ್ವರಿ ಈ ವರ್ಷದ ಡಬ್ಲ್ಯುಪಿಎಲ್‌ನಲ್ಲಿ ಯುಪಿ ವಾರಿಯರ್ಸ್ ತಂಡದ ಪರ ಆಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net