ಕಳಸದ ಯುವತಿ ದುಬೈನಲ್ಲಿ ಸಾವು; ಒಂದು ವರ್ಷದ ಹಿಂದಷ್ಟೇ ಆಗಿತ್ತು ವಿವಾಹ...

Shreya
Published on

ಚಿಕ್ಕಮಗಳೂರು: ರಾಜ್ಯದ ಮಹಿಳೆಯೊಬ್ಬರು ದೂರದ ದುಬೈನಲ್ಲಿ ಮೃತಪಟ್ಟಿದ್ದಾರೆ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿನ ಶ್ರೇಯಾ (26) ಮೃತಪಟ್ಟವರು.

ಪಡುಬಿದ್ರೆಯ ಪವನ್ ಎಂಬವರೊಂದಿಗೆ ಒಂದು ವರ್ಷದ ಹಿಂದಷ್ಟೇ ಶ್ರೇಯಾ ವಿವಾಹ ನಡೆದಿತ್ತು. ಮದುವೆಯ ಬಳಿಕ ಅವರು ಪತಿ ಪವನ್ ಅವರೊಂದಿಗೆ ದುಬೈಗೆ ತೆರಳಿದ್ದು, ಅಲ್ಲಿಯೇ ನೆಲೆ ಕಂಡುಕೊಂಡಿದ್ದರು. ಆದರೆ ಶ್ರೇಯಾ ಈಗ ಕೊನೆಯುಸಿರೆಳೆದಿದ್ದಾರೆ.

ಶ್ರೇಯಾ ನ್ಯುಮೋನಿಯಾದಿಂದ ಬಳಲುತ್ತಿದ್ದು, ಸಾವಿಗೀಡಾಗಲು ಕಾರಣ ಏನೆಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಮತ್ತೊಂದೆಡೆ ಕರೊನಾ ಸೋಂಕಿನಿಂದಾಗಿ ಅವರು ಮೃತಪಟ್ಟಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net