

ಕಳಸ: ತಮ್ಮ ಊರಿಗೆ ತೆರಳಲು ಸಿದ್ಧತೆ ಮಾಡಿಕೊಂಡು ಖುಷಿಯಿಂದ ಪಟ್ಟಣಕ್ಕೆ ಬಂದಿದ್ದ ಕಾರ್ವಿುಕರಿಗೆ ಕೊನೆಯ ಕ್ಷಣದಲ್ಲಿ ಬೆಂಗಳೂರಲ್ಲಿ ರೈಲು ರದ್ದಾಗಿದ್ದರಿಂದ ತೊಂದರೆ ಅನುಭವಿಸಬೇಕಾಯಿತು.
ಕಳಸ ಭಾಗದ ವಿವಿಧ ತೋಟಗಳಿಗೆ ಕೂಲಿಗಾಗಿ ಬಂದು ಲಾಕ್ಡೌನ್ ಹಿನ್ನೆಲೆಯಲ್ಲಿ ತೋಟಗಳಲ್ಲಿಯೇ ಉಳಿದಿದ್ದ ಮಧ್ಯ ಪ್ರದೇಶದ 188 ಕಾರ್ವಿುಕರು ಸ್ವಂತ ಊರಿಗೆ ತೆರಳಲು ಪಾಸ್ ಪಡೆದುಕೊಂಡಿದ್ದರು.
ಇಲಾಖೆ ನಿರ್ದೇಶನದಂತೆ ಕಾರ್ವಿುಕರು ಬೆಳಗ್ಗೆಯೇ ಬಸ್ಗಾಗಿ ಕಾದು ಕುಳಿತಿದ್ದರು. ಕಾರ್ವಿುಕರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಚಿಕ್ಕಮಗಳೂರಿಂದ ನಾಲ್ಕು ಕೆಎಸ್ಆರ್ಟಿಸಿ ಬಸ್ಗಳು ಬಂದಿದ್ದವು. ಆದರೆ ಬೆಂಗಳೂರಿಂದ ಮಧ್ಯ ಪ್ರದೇಶಕ್ಕೆ ತೆರಳಬೇಕಾದ ರೈಲು ರದ್ದಾಗಿದೆ ಎಂದು ಜಿಲ್ಲಾಡಳಿತಕ್ಕೆ ಬೆಳಗ್ಗೆ ಮಾಹಿತಿ ಬಂದಿದೆ. ಅಷ್ಟರಲ್ಲಿ ಕಾರ್ವಿುಕರು ಬಸ್ ನಿಲ್ದಾಣಕ್ಕೆ ಬಂದಿದ್ದರು.
ಕೆಲ ಎಸ್ಟೇಟ್ ಮಾಲಿಕರು ಮಾನವೀಯತೆಯಿಂದ ಕಾರ್ವಿುಕರನ್ನು ವಾಪಸ್ ಎಸ್ಟೇಟ್ಗೆ ಕರೆದುಕೊಂಡು ಹೋಗಿದ್ದರು. ಆದರೆ ಕೆಲ ಎಸ್ಟೇಟ್ ಮಾಲೀಕರು ಸಂಜೆವರೆಗೂ ಬಸ್ ನಿಲ್ದಾಣದಲ್ಲಿ ಕಾರ್ವಿುಕರನ್ನು ಕೂರಿಸಿ ತೊಂದರೆ ನೀಡಿದರು. ಊಟ, ತಿಂಡಿ ಇಲ್ಲದೆ ಸಣ್ಣ ಪುಟ್ಟ ಮಕ್ಕಳು, ಮಹಿಳೆಯರು, ವೃದ್ಧರು ಬೆಳಗ್ಗೆಯಿಂದ ಸಂಜೆವರೆಗೂ ನಿಲ್ದಾಣದಲ್ಲೇ ಕಾಯುವಂತಾಯಿತು. ನಂತರ ಎಲ್ಲರೂ ಅವರವರ ಎಸ್ಟೇಟ್ಗೆ ಕರೆದುಕೊಂಡು ಹೋದರು. ಮುಂದಿನ ಮಾಹಿತಿ ಬರುವವರೆಗೆ ಕಾರ್ವಿುಕರು ಎಸ್ಟೇಟ್ನಲ್ಲೇ ಉಳಿಯಬೇಕಾಗಿದೆ.