ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕರ್ನಾಟಕ ಉತ್ತಮ ವಿತ್ತೀಯ ಸಾಧನೆ; ಮೊದಲ 7 ತಿಂಗಳಲ್ಲೇ ಶೇ.53 ರಾಜಸ್ವ ಸಂಗ್ರಹ..

VidhanaSoudha
Published on

ಬೆಂಗಳೂರು: 2024-25ರ ಮೊದಲ ಏಳು ತಿಂಗಳಲ್ಲಿ ಕರ್ನಾಟಕವು ಆರ್ಥಿಕ ನಿರ್ವಹಣೆಯಲ್ಲಿ ಅಸಾಮಾನ್ಯವಾದುದನ್ನು ಸಾಧಿಸಿದೆ. ₹1,03,689 ಕೋಟಿ ಆದಾಯವನ್ನು ಸೃಜಿಸುವ ಮೂಲಕ , ₹1,96,525 ಕೋಟಿ ವಾರ್ಷಿಕ ಗುರಿಯ 53% ಅನ್ನು ಸಾಧಿಸಿದೆ. ಈ ಆದಾಯವು ಐದು ಪ್ರಮುಖ ಆದಾಯ ಇಲಾಖೆಗಳಾದ ವಾಣಿಜ್ಯ ತೆರಿಗೆ (GST), ಅಬಕಾರಿ, ಗಣಿ, ನೋಂದಣಿ ಮತ್ತು ಮುದ್ರಾಂಕ ಹಾಗೂ ಸಾರಿಗೆಗಳ ಮೂಲಕ ಸೃಜನೆಯಾಗಿದೆ. ವಾರ್ಷಿಕ ಬೆಳವಣಿಗೆ ದರ 11.2% ಇದ್ದು, ಈ ಸಾಧನೆಯು ರಾಜ್ಯದ ಸದೃಢ ಆರ್ಥಿಕ ಬೆಳವಣಿಗೆ, ಹೆಚ್ಚುತ್ತಿರುವ ಗ್ರಾಹಕರ ಕೊಳ್ಳುವ ಸಾಮರ್ಥ್ಯ ಹಾಗೂ ಬೇಡಿಕೆಯ ಹೆಚ್ಚಳ, ಉತ್ತಮ ಆಡಳಿತ, ಉದ್ಯಮ ಸ್ನೇಹಿ ವಾತಾವರಣವನ್ನು ಸೃಷ್ಟಿಸುವ ಸರ್ಕಾರದ ಗುರಿಯನ್ನು ಪ್ರತಿಬಿಂಬಿಸುತ್ತದೆ. ಕರ್ನಾಟಕವು 2023-24ರಲ್ಲಿ 3ನೇ ಸ್ಥಾನದಿಂದ (ಗುಜರಾತ್‌ ಅನ್ನು ಮೀರಿಸುವ ಮೂಲಕ) 2024-25ರ ಮೊದಲ ತ್ರೈಮಾಸಿಕದಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆಗಳಲ್ಲಿ 2ನೇ ಸ್ಥಾನಕ್ಕೇರುವ ಮೂಲಕ ಜಾಗತಿಕವಾಗಿ ಹೂಡಿಕೆ ಸ್ನೇಹಿ ರಾಜ್ಯವಾಗಿ ಗುರುತಿಸಿಕೊಂಡಿದೆ. ಕರ್ನಾಟಕವು ಮೊದಲ ತ್ರೈಮಾಸಿಕದಲ್ಲಿ ಒಟ್ಟಾರೆ $2.2 ಬಿಲಿಯನ್ ಹೂಡಿಕೆಗಳನ್ನು ಆಕರ್ಷಿಸಿದೆ, ಇದು ರಾಜ್ಯದ ಪ್ರಗತಿಶೀಲ ಆರ್ಥಿಕ ನೀತಿಗಳ ಬಗೆಗೆ ಹೂಡಿಕೆದಾರರ ನಂಬಿಕೆಯನ್ನು ಸೂಚಿಸುತ್ತದೆ.

ವಲಯವಾರು ಆರ್ಥಿಕ ಪ್ರಗತಿ

ವಿಭಾಗ 2023-24ರ ಗುರಿ (ಕೋಟಿ ರೂ. ಗಳಲ್ಲಿ) 2023-24ರ ಸಂಗ್ರಹ (ಅಕ್ಟೋಬರ್‌ ವರೆಗೆ ) 2024-25ರ ಗುರಿ (ಕೋಟಿ ರೂ. ಗಳಲ್ಲಿ) 2024-25ರ ಸಂಗ್ರಹ (ಅಕ್ಟೋಬರ್‌ ವರೆಗೆ )

ಶೇಕಡಾವಾರು ಬೆಳವಣಿಗೆ ದರ

(ವರ್ಷದಿಂದ ವರ್ಷಕ್ಕೆ)
ವಾಣಿಜ್ಯ ತೆರಿಗೆ 98,650 52,768 1,10,000 58,537 10.9%
ಅಬಕಾರಿ ಸುಂಕ 36,000 19,302 38,525 20,502 6.2%
ನೋಂದಣಿ ಮತ್ತು ಮುದ್ರಾಂಕ 25,000 10,940 26,000 13,870 26.8%
ಮೋಟಾರ್ ವಾಹನ ತೆರಿಗೆ 11,500 6,301 13,000 6,640 5.4%
ಗಣಿ ತೆರಿಗೆ 9,000 3,939 9,000 4,138 5.1%

ಕಾರ್ಯತಂತ್ರಗಳ ಸುಧಾರಣೆಗಳು ನೋಂದಣಿ ಮತ್ತು ಮುದ್ರಾಂಕ ತೆರಿಗೆ, ಅಬಕಾರಿ ತೆರಿಗೆ ಮತ್ತು ಬಳಕೆದಾರರ ಶುಲ್ಕಗಳನ್ನು ಪರಿಷ್ಕರಣೆಗಳನ್ನು ಮಾಡುವ ಮೂಲಕ ಸರ್ಕಾರವು ದಿಟ್ಟ ಸುಧಾರಣೆಗಳನ್ನು ಅನುಷ್ಠಾನಕ್ಕೆ ತಂದಿದೆ. ಇದು ವರ್ಷಗಳ ವರೆಗೆ ಸ್ಥಿರವಾಗಿತ್ತು. ಹೆಚ್ಚುವರಿಯಾಗಿ, ಗಣಿ ವಿಭಾಗವು ದೀರ್ಘಾವಧಿಯ ಆಂತರಿಕ ಸವಾಲುಗಳನ್ನು ಹಿಮ್ಮೆಟ್ಟಿ ಹೊರಗೆ ಬಂದಿದ್ದು, ತೆರಿಗೆ ಸಂಗ್ರಹದ ಗುರಿ ತಲುಪುವಲ್ಲಿ ಸಹಕಾರಿಯಾಯಿತು. ಅಧಿಕ ವೆಚ್ಚ ನಿಭಾಯಿಸುವ ಸಾಮರ್ಥ್ಯ ಕಾರ್ಯಾಂಗದ ಕ್ಷಮತೆ ವೃದ್ಧಿಯಿಂದಾಗಿ ಬಜೆಟ್‌ ಅನುದಾನ ಬಳಕೆಯಲ್ಲಿ ಮುನ್ನಡೆ ಸಾಧಿಸಿದ್ದೇವೆ. ಅಕ್ಟೋಬರ್‌ 2024ರ ಅವಧಿಗೆ ಈಗಾಗಲೇ ಬಜೆಟ್‌ನ ಅಂದಾಜು ಮೊತ್ತದ 46% ಬಳಕೆಯಾಗಿದೆ, ಕಳೆದ ಹಣಕಾಸು ವರ್ಷ ಈ ಪ್ರಮಾಣ 42% ಇತ್ತು. ಬಜೆಟ್‌ ಅಂದಾಜಿನಲ್ಲಿ ನಮೂದಿಸಿದ್ದ ಬಂಡವಾಳ ವೆಚ್ಚಕ್ಕಿಂತ 29% ಹೆಚ್ಚಾಗಿದೆ, ಕಳೆದ ವರ್ಷ ಈ ಪ್ರಮಾಣವು 24.7% ಇತ್ತು. ಇದು ಮೂಲಸೌಕರ್ಯ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ಗ್ಯಾರಂಟಿ ಯೋಜನೆಗಳಿಗೆ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಹಣ 52,009 ಕೋಟಿ ರೂ.ಗಳ ಬಜೆಟ್‌ ಮೊತ್ತದಲ್ಲಿ 24,235 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿಡುವ ಮೂಲಕ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸುವ ವಿಚಾರವಾಗಿ ಟೀಕಾಕಾರರ ಬಾಯಿ ಮುಚ್ಚಿಸಿದೆ. ಇ-ಆಡಳಿತ ಮಾದರಿಗಳ ಪರಿಣಾಮಕಾರಿ ಬಳಕೆಯಿಂದ ಫಲಾನುಭವಿಗಳನ್ನು ನಿಖರವಾಗಿ ಗುರುತಿಸುವ ಮೂಲಕ ಹಾಗೂ ಅಸಮರ್ಥತೆಯನ್ನು ನಿವಾರಿಸುವ ಮೂಲಕ ಕಲ್ಯಾಣ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಸಹಕಾರಿಯಾಗಿವೆ. ಮೂಲಸೌಕರ್ಯ ಹೂಡಿಕೆಗಳಿಂದ ದೀರ್ಘಕಾಲಿಕ ಬೆಳವಣಿಗೆ ಕರ್ನಾಟಕದ ಆರ್ಥಿಕ ಬೆಳವಣಿಗೆಯ ದರವನ್ನು (ಜಿಎಸ್ ಡಿ ಪಿ) 14% ಕ್ಕೆ ತಲುಪಿಸಲು ಈ ಹಣಕಾಸು ವರ್ಷದಲ್ಲಿ ಜಿ ಎಸ್‌ ಡಿ ಪಿ ಯ 2% ಕ್ಕಿಂತ ಮೇಲೆಯೇ ಬಂಡವಾಳ ವೆಚ್ಚವನ್ನು ನಿರ್ವಹಿಸಲು ಉದ್ದೇಶಿಸಿದೆ. ರಾಜ್ಯದಲ್ಲಿ ಸರ್ಕಾರದ ಬಂಡವಾಳ ಹೂಡಿಕೆಗಳನ್ನು ಹೆಚ್ಚಿಸಲು ಎರಡು ಸಾಧನಗಳನ್ನು ಬಳಸಲಾಗುತ್ತಿದೆ. ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸಲು ವಿಶ್ವ ಬ್ಯಾಂಕ್ ಮತ್ತು ಏಷ್ಯಾ ಅಭಿವೃದ್ಧಿ ಬ್ಯಾಂಕ್ ಮುಂತಾದ ವಿವಿಧ ವಿದೇಶಿ ವಾಣಿಜ್ಯ ಸಂಸ್ಥೆಗಳೊಂದಿಗೆ ಮಾತುಕತೆಗಳನ್ನು ನಡೆಸುತ್ತಿದೆ. ಸರ್ಕಾರವು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳೊಂ ₹16,750 ಕೋಟಿ ಹೂಡಿಕೆಯ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ, ಇದರಲ್ಲಿ: • ಬೆಂಗಳೂರುನಲ್ಲಿ ವಿಪತ್ತು ನಿಯಂತ್ರಣ ಯೋಜನೆಗಳು – ₹3,500 ಕೋಟಿ • ಕರಾವಳಿ ಕರ್ನಾಟಕದಲ್ಲಿ ನೀಲಿ ಆರ್ಥಿಕತೆ ಪರಿವರ್ತನೆ – ₹600 ಕೋಟಿ • ನಗರ ಜಲ ಸರಬರಾಜು ಆಧುನೀಕರಣ – ₹1,200 ಕೋಟಿ • ಸರ್‌ವ ಋತು ಗ್ರಾಮೀಣ ರಸ್ತೆಗಳು (ಪ್ರಗತಿ ಪಥ) – ₹3,600 ಕೋಟಿ • ರಾಜ್ಯ ಹೆದ್ದಾರಿಗಳ ಸುಧಾರಣೆ – ₹3,650 ಕೋಟಿ • ನೀರಾವರಿ – ₹500 ಕೋಟಿ • ಸಾರ್ವಜನಿಕ ಶಾಲಾ ಮೂಲಸೌಕರ್ಯ ಅಭಿವೃದ್ಧಿ – ₹2,800 ಕೋಟಿ • ಸಾರ್ವಜನಿಕ ಸಾರಿಗೆಗಾಗಿ ಎಲೆಕ್ಟ್ರಿಕ್‌ ಬಸ್ಸುಗಳು – ₹1,400 ಕೋಟಿ ಬೆಂಗಳೂರು ನಗರದ ಮೂಲಸೌಕರ್ಯ ₹1,31,500 ಕೋಟಿ ಮೌಲ್ಯದ ಯೋಜನೆಗಳೊಂದಿಗೆ ಪರಿವರ್ತನೆಯತ್ತ ಹೋಗುತ್ತಿದೆ. ಈ ಹೂಡಿಕೆಗಳು ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು, ಹೆಚ್ಚಿನ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಆಕರ್ಷಿಸಲು, ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ಬೆಂಗಳೂರನ್ನು ಜಾಗತಿಕ ವಹಿವಾಟು ಮತ್ತು ತಂತ್ರಜ್ಞಾನ ಕೇಂದ್ರವನ್ನಾಗಿ ಮಾಡಲು ರೂಪಿಸಲಾಗಿದೆ.

ಕೈಗೆತ್ತಿಕೊಳ್ಳಲಿರುವ ಯೋಜನೆಗಳನ್ನು ಒಳಗೊಂಡವು:

• 100 ಕಿಮೀ ಎಲಿವೇಟೆಡ್ ಮಾರ್ಗ — ₹12,000 ಕೋಟಿ • ಡಬಲ್ ಡೆಕ್ಕರ್ ಮೆಟ್ರೋ ಲೈನ್‌ ಗಳು — ₹9,000 ಕೋಟಿ • ಹಂತ-3 ಮತ್ತು 3A ಅಡಿಯಲ್ಲಿ 80 ಕಿಮೀ ಹೆಚ್ಚುವರಿ ಮೆಟ್ರೋ — ₹40,000 ಕೋಟಿ • ಭಾರತದ ಅತಿ ಉದ್ದದ 40 ಕಿಮೀ ಸುರಂಗ ಮಾರ್ಗ — ₹40,000 ಕೋಟಿ • ಫೆರಿಫೆರಲ್‌ ರಸ್ತೆ ಜಾಲ ಅಭಿವೃದ್ಧಿ — ₹3,000 ಕೋಟಿ • ಸ್ಕೈ ಡೆಕ್ ಯೋಜನೆ — ₹500 ಕೋಟಿ • ಬೆಂಗಳೂರು ವಾಣಿಜ್ಯ ಕಾರಿಡಾರ್ — ₹27,000 ಕೋಟಿ ಅಭಿವೃದ್ಧಿಯ ಹೊಸ ಮಾದರಿ ಕರ್ನಾಟಕದ ಆರ್ಥಿಕ ನಿರ್ವಹಣಾ ಕಾರ್ಯತಂತ್ರಗಳಿಂದ ಜನಕಲ್ಯಾಣ ಗ್ಯಾರಂಟಿ ಯೋಜನೆಗಳ ಬಂಡವಾಳ ಹೂಡಿಕೆಗೆ,ಅಭಿವೃದ್ಧಿಯ ನಿರಂತರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಉದ್ದೇಶಿತ ಸುಧಾರಣೆಯ ಗುರಿಗಳು ಮತ್ತು ಮಹತ್ವಾಕಾಂಕ್ಷಿ ಮೂಲಸೌಕರ್ಯ ಯೋಜನೆಗಳ ಮೂಲಕ ರಾಜ್ಯವು ಅಭಿವೃದ್ಧಿಯ ಹೊಸ ಮಾದರಿಯನ್ನು ನಿರ್ಮಿಸಿದ್ದು, ಇದು ಆರ್ಥಿಕ ನಿರ್ವಹಣೆ ಮತ್ತು ಸಮಗ್ರ ಆರ್ಥಿಕ ಅಭಿವೃದ್ಧಿಯಲ್ಲಿ ರಾಜ್ಯವನ್ನು ಮುಂಚೂಣಿಯಲ್ಲಿರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net