

ಬೆಂಗಳೂರು: ಇದೀಗ ರಾಜ್ಯಸರ್ಕಾರ 11 ಮಂದಿ ಐಪಿಎಸ್ ಅಧಿಕಾರಿಗಳನ್ನು ಬೇರೆ ಬೇರೆ ಸ್ಥಾನಗಳಿಗೆ ವರ್ಗಾವಣೆ ಮಾಡಿದ್ದು ಅವರಲ್ಲಿ ಇತ್ತೀಚೆಗೆ ಭ್ರಷ್ಟಾಚಾರದ ಆರೋಪಕ್ಕೆ ತುತ್ತಾಗಿದ್ದ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಕೂಡ ಇದ್ದಾರೆ. ರಾಜ್ಯ ಸರ್ಕಾರ ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಚೆನ್ನಣ್ಣನವರ್ರನ್ನು ಕಿಯೋನಿಕ್ಸ್ ಸಂಸ್ಥೆಯ ನಿರ್ದೇಶಕನಾಗಿ ವರ್ಗಾವಣೆ ಮಾಡಲಾಗಿದೆ.
ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಸ್ಪೆಷಲ್ ಟ್ರಾಫಿಕ್ ಕಮಿಷನರ್ಅನ್ನು ನೇಮಕ ಮಾಡಲಾಗಿದ್ದು ಐಪಿಎಸ್ ಅಬ್ದುಲ್ ಸಲೀಂಗೆ ಈ ಸ್ಥಾನವನ್ನು ನೀಡಲಾಗಿದೆ. ಅದಲ್ಲದೇ ಈ ಬಾರಿ Additional Director General and Special Commissioner (Traffic) ಪದವಿಯನ್ನು ADGP ದರ್ಜೆಗೆ ಸಮಾನವೆಂದು ಸರ್ಕಾರ ಆದೇಶ ಹೊರಡಿಸಿದೆ.
ಯಾವ ಅಧಿಕಾರಿಗಳನ್ನು ಯಾವ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ? ಮಾಹಿತಿ ಇಲ್ಲಿದೆ:
ಅಬ್ದುಲ್ ಸಲೀಂ - ಸಂಚಾರ ವಿಭಾಗ ಮುಖ್ಯಸ್ಥರಾಗಿ ವರ್ಗಾವಣೆ
ಉಮೇಶ್ ಕುಮಾರ್ - ಆಡಳಿತ ವಿಭಾಗ ಎಡಿಜಿಪಿ ವರ್ಗಾವಣೆ
ದಿವ್ಯಾಜ್ಯೋತಿರಾಯ್- ಮಾನವಹಕ್ಕಗಳ ಆಯೋಗ
ರವಿಕಾಂತೇಗೌಡ - ಸಿಐಡಿ ವರ್ಗಾವಣೆ
ಲೋಕೇಶ್ ಕುಮಾರ್ - ಬಳ್ಳಾರಿ ಐಜಿ ವರ್ಗಾವಣೆ
ರಮಣ್ ಗುಪ್ತಾ- ಬೆಂಗಳೂರು ಇಂಟಲಿಜೆನ್ಸ್ ವರ್ಗಾವಣೆ
ಚಂದ್ರಗುಪ್ತ - ಮಂಗಳೂರು ಐಜಿಯಾಗಿ ವರ್ಗಾವಣೆ
ಶರಣಪ್ಪ - ಜಂಟಿ ಪೊಲೀಸ್ ಆಯುಕ್ತ ಸಿಸಿಬಿ ವರ್ಗಾವಣೆ
ಅನುಚೇತ್ - ಜಂಟಿ ಪೊಲೀಸ್ ಆಯುಕ್ತ ಸಂಚಾರ ವಿಭಾಗ
ರವಿ ಡಿ ಚೆನ್ನಣ್ಣದಣವರ್ - ಕಿಯೋನಿಕ್ಸ್ ನಿರ್ದೇಶಕರಾಗಿ ವರ್ಗಾವಣೆ
ರಮೇಶ್ - ಮೈಸೂರು ಸಿಟಿ ಕಮಿಷನರ್ ಆಗಿ ವರ್ಗಾವಣೆ