

ಹರಿಯಾಣ: ಹರಿಯಾಣದಲ್ಲಿ ನಡೆದ 28ನೇ ಸಬ್ ಜ್ಯೂನಿಯರ್ ರಾಷ್ಟ್ರೀಯ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯದ ವನಿತೆಯರ ತಂಡ ದ್ವಿತೀಯ ಸ್ಥಾನ ಪಡೆದಿದೆ. ಫೈನಲ್ ನಲ್ಲಿ ನಾಯಕಿ ಇಂದು ಜಿ. ಅವರ ನೇತೃತ್ವದ ಕರ್ನಾಟಕ ತಂಡವು ಹರಿಯಾಣ ತಂಡದ ವಿರುದ್ಧ 28- 31 ಅಂತರದಿಂದ ಸೊಲು ಅನುಭವಿಸಿ, ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ತಂಡದ ತರಬೇತುದಾರರಾಗಿ ರಾಮಕೃಷ್ಣಯ್ಯ ಕಾರ್ಯನಿರ್ವಹಿಸಿದ್ದರು.
ಅಲ್ಲಿ ನಡೆದ 28ನೇ ಸಬ್ ಜ್ಯೂನಿಯರ್ ರಾಷ್ಟ್ರೀಯ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯದ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದಿದೆ. ಫೈನಲ್ ನಲ್ಲಿ ನಾಯಕ ನಿಹಾಲ್ ಜಿ ಅವರ ನೇತೃತ್ವದ ಕರ್ನಾಟಕ ತಂಡವು ಹರಿಯಾಣ ತಂಡದ ವಿರುದ್ಧ 32-35 ಅಂತರದಿಂದ ಸೋಲು ಅನುಭವಿಸಿ, ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಬಸವರಾಜ ಪಾಟೀಲ್ ತಂಡದ ತರಬೇತುದಾರರಾಗಿದ್ದರು.