More

    ಕರ್ನಾಟಕದ ಕ್ರಿಕೆಟಿಗ ಮನೀಷ್​ ಪಾಂಡೆ ದಾಂಪತ್ಯದಲ್ಲಿ ಬಿರುಕು?

    ಬೆಂಗಳೂರು: ಕರ್ನಾಟಕದ ಬ್ಯಾಟರ್​ ಮನೀಷ್​ ಪಾಂಡೆ ಮತ್ತು ನಟಿ&ರೂಪದರ್ಶಿ ಆಶ್ರಿತಾ ಶೆಟ್ಟಿ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂದು ವರದಿಯಾಗಿದೆ.

    ಇತ್ತೀಚೆಗೆ ಐಪಿಎಲ್​ ಟ್ರೋಫಿ ಗೆದ್ದ ಕೆಕೆಆರ್​ ತಂಡದ ಭಾಗವಾಗಿದ್ದ 34 ವರ್ಷದ ಮನೀಷ್​ ಪಾಂಡೆ ಮತ್ತು ಆಶ್ರಿತಾ ಶೆಟ್ಟಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಲಾಗಿದ್ದ ತಮ್ಮ ಮದುವೆಯ ಚಿತ್ರಗಳನ್ನು ಡಿಲೀಟ್​ ಮಾಡಿದ್ದಾರೆ. ಅಲ್ಲದೆ ಇಬ್ಬರ ಖಾತೆಯಲ್ಲೂ ಇಬ್ಬರೂ ಜತೆಗಿರುವ ಎಲ್ಲ ಚಿತ್ರಗಳನ್ನು ಡಿಲೀಟ್​ ಮಾಡಿದ್ದಾರೆ. ಪರಸ್ಪರರನ್ನು ಅನ್​ಾಲೋ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಮನೀಷ್​&ಆಶ್ರಿತಾ 2019ರಲ್ಲಿ ಮುಂಬೈನಲ್ಲಿ ವಿವಾಹವಾಗಿದ್ದರು.

    ಕಳೆದ ಐಪಿಎಲ್​ ವೇಳೆ ಮನೀಷ್​ ಜತೆಗೆ ಆಶ್ರಿತಾ ಕಾಣಿಸಿಕೊಂಡಿರಲಿಲ್ಲ. ಇದರಿಂದ ಇಬ್ಬರೂ ಕಳೆದ ಕೆಲ ತಿಂಗಳುಗಳಿಂದಲೇ ಪರಸ್ಪರ ದೂರವಾಗಿ ಬದುಕುತ್ತಿದ್ದಾರೆ ಎನ್ನಲಾಗಿದೆ. ಮನೀಷ್​ ಪಾಂಡೆ ಭಾರತ ಪರ 29 ಏಕದಿನ, 39 ಟಿ20 ಪಂದ್ಯಗಳನ್ನು ಆಡಿದ್ದಾರೆ. ಮಂಗಳೂರು ಮೂಲದ ಆಶ್ರಿತಾ ಮುಂಬೈ ನಿವಾಸಿಯಾಗಿದ್ದು, ಕೆಲ ತುಳು ಸಿನಿಮಾಗಳಲ್ಲೂ ನಟಿಸಿದ್ದಾರೆ.

    See also  ಸೌತ್​ ನಿರ್ಮಾಪಕರ ಸಿನಿಮಾದಲ್ಲಿ ಯಶ್​?; ಜನವರಿ 8ರ ಬರ್ತ್​ಡೇಗೆ ಅಚ್ಚರಿಯ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts