More

    ಲಂಗ-ದಾವಣಿಯಲ್ಲಿ ಮಿಂಚಿದ ಪೂಜಾ ಹೆಗ್ಡೆ: ವಾವ್ ಎಂದ ಅಭಿಮಾನಿಗಳು

    ಮಂಗಳೂರು: ಪೂಜಾ ಹೆಗ್ಡೆ ಕರಾವಳಿ ಮೂಲದ ಹುಡುಗಿ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ. ಬಹುಭಾಷಾ ನಟಿಯಾಗಿರುವ ಇವರು ತೆಲುಗು ಹಿಂದಿ,ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಟಾಲಿವುಡ್‌ ಮಾತ್ರವಲ್ಲದೇ ಬಾಲಿವುಡ್‌ನಲ್ಲೂ ಬ್ಯೂಸಿಯಾಗಿದ್ದಾರೆ.

    ಇದನ್ನೂ ಓದಿ:3 ಲಕ್ಷ ಭಕ್ತರಿಂದ ಬಾಲರಾಮನ ದರ್ಶನ, ದಾಖಲೆ ಬರೆದ ಅಯೋಧ್ಯೆ!

    ಲಂಗ-ದಾವಣಿಯಲ್ಲಿ ಮಿಂಚಿದ ಪೂಜಾ ಹೆಗ್ಡೆ: ವಾವ್ ಎಂದ ಅಭಿಮಾನಿಗಳು

    ಹೈದಾರಾಬಾದ್‌, ಮಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಮನೆಗಳನ್ನು ಹೊಂದಿದ್ದಾರೆ. ಬ್ಯೂಟಿ ಪೂಜಾ ಹೆಗ್ಡೆ ಸಮಯ ಸಿಕ್ಕಾಗಲೆಲ್ಲಾ ಅವರು ತಮ್ಮ ಹುಟ್ಟೂರಿಗೆ ನಟಿ ಭೇಟಿ ನೀಡುತ್ತಿರುತ್ತಾರೆ. ಇದೀಗ ಉಡುಪಿಗೆ ಭೇಟಿ ಕೊಟ್ಟಿರುವ ಪೂಜಾ ಅವರು ದುಬಾರಿ ಮೊತ್ತದ ಲಂಗ-ದಾವಣಿಯಲ್ಲಿ ನಟಿ ಮಿಂಚಿದ್ದಾರೆ.
    ಮತ್ತೊಮ್ಮೆ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಾರೆ.

    ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ಪೂಜಾ ಹೆಗ್ಡೆಯ ಈ ಫೋಟೋಗಳು ಕೂಡ ಅವರ ಫ್ಯಾಷನ್‌ ಅಭಿರುಚಿಯನ್ನು ಮತ್ತೊಮ್ಮೆ ಸಾರಿದೆ. ಇದು ಗ್ರೀನ್‌ ಮತ್ತು ಪಿಂಕ್‌ ಲೆಹಂಗಾ ಚೋಲಿ. ಈ ಲಂಗ ದಾವಣಿಯಲ್ಲಿ ಪೂಜಾ ಹೆಗ್ಡೆ ಮುದ್ದಾಗಿ ಕಾಣಿಸ್ತಾರೆ. ಹೆಗ್ಡೆ ಅವರು ತನ್ನ ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಇವರು ಸಾಂಪ್ರದಾಯಿಕ ಉಡುಗೆಯಲ್ಲಿ ಗಮನ ಸೆಳೆದರು.

    ಪೂಜಾ ಹೆಗಡೆ ಉಟ್ಟುಕೊಂಡ ಡ್ರೆಸ್ ಕಲರ್ ಕೂಡ ಇಂಟ್ರಸ್ಟಿಂಗ್ ಆಗಿಯೇ ಇದೆ. ಗ್ರೀನ್-ಪಿಂಕ್-ಲೈಟ್ ಗ್ರೀನ್ ಹೀಗೆ ಮೂರು ಮೂರು ಕಲರ್ ಈ ಒಂದು ಡ್ರೆಸ್‌ನಲ್ಲಿದೆ. ಇದಕ್ಕೆ ಒಪ್ಪುವ ಆಭರಣಗಳನ್ನು ಪೂಜಾ ಹೆಗಡೆ ಧರಿಸಿಕೊಂಡಿದ್ದಾರೆ. ಹೇರ್ ಸ್ಟೈಲ್ ಕೂಡ ಈ ಡ್ರೆಸ್‌ಗೆ ಸೂಕ್ತವಾಗಿಯ ಇದೆ. ಪೂಜಾ ಲುಕ್ ನೋಡಿ ಅಭಿಮಾನಿಗಳು ಮದುವೆ ಯಾವಾಗ ಎಂದು ಕಾಮೆಂಟ್ ಮಾಡಿದ್ದಾರೆ. ಬಗೆ ಬಗೆಯ ಕಾಮೆಂಟ್‌ಗಳು ಪೂಜಾ ನಯಾ ಫೋಟೋಗೆ ಹರಿದು ಬರುತ್ತಿದೆ.

    ಕಳೆದ ವರ್ಷ ಸಲ್ಮಾನ್ ಖಾನ್‌ಗೆ ನಾಯಕಿಯಾಗಿ ‘ಕಿಸಿ ಕಾ ಭಾಯ್ ಕಿಸಿ ಕೀ ಜಾನ್’ ಚಿತ್ರದಲ್ಲಿ ಪೂಜಾ ನಟಿಸಿದ್ದರು. ಅದಾದ ಬಳಿಕ ಪೂಜಾಗೆ ಚಿತ್ರರಂಗದಲ್ಲಿ ಚಾರ್ಮ್ ಕಮ್ಮಿಯಾಗಿದೆ. ಹೇಳಿಕೊಳ್ಳುವಂತಹ ಅವಕಾಶಗಳು ಅವರಿಗೆ ಸಿಗುತ್ತಿಲ್ಲ.

    ಒಂದು ತಿಂಗಳು ಮೊಬೈಲ್​ ದೂರವಿಟ್ಟರೆ ಸಿಗಲಿದೆ ಭರ್ಜರಿ ಬಹುಮಾನ? ಆದರೆ ಷರತ್ತುಗಳು ಅನ್ವಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts