ಟಿಕ್‌ಟಾಕ್‌ನಲ್ಲಿ ನಕಲಿ ಕರಿಷ್ಮಾ ಕಪೂರ್ ಹವಾ!

Heena - Karishma Kapoor Final
Published on

ಜಗತ್ತಿನಲ್ಲಿ ಒಬ್ಬರ ತರಹ ಏಳು ಜನ ಇರುತ್ತಾರಂತೆ. ಈಗಾಗಲೇ ಸಿನಿಮಾದಲ್ಲಿ ಈ ಾರ್ಮುಲಾ ಸಾಕಷ್ಟು ಬಳಕೆಯಾಗಿಬಿಟ್ಟಿದೆ. ಇನ್ನು ಕೆಲವು ಸಿನಿಮಾ ಸ್ಟಾರ್‌ಗಳಂತೆ ಕಾಣುವ, ಅವರಂತೆ ಮಿಮಿಕ್ರಿ ಮಾಡುವ ಸಾಕಷ್ಟು ಜನ ಸಹ ಇದ್ದಾರೆ. ಈಗ ಕರಿಷ್ಮಾ ಕಪೂರ್ ತರಹವೇ ಕಾಣುವ ಇನ್ನೊಬ್ಬ ಚೆಲುವೆ ಟಿಕ್‌ಟಾಕ್‌ನಲ್ಲಿ ಸಖತ್ ಫೇಮಸ್ ಆಗಿಬಿಟ್ಟಿದ್ದಾರೆ.

ಕರಿಷ್ಮಾ ಕಪೂರ್‌ರ ತದ್ರೂಪಿ ಹೀನಾ. ಈಕೆ ಕರಿಷ್ಮಾ ಕಪೂರ್ ಅವರನ್ನು ಅದೆಷ್ಟು ಹೋಲುತ್ತಾರೆ ಎಂದರೆ, ಹೊರಗೆ ಓಡಾಡುವಾಗ, ಜನ ಇವರನ್ನು ಕರಿಷ್ಮಾ ಕಪೂರ್ ಎಂದು ಕನ್​ಫ್ಯೂಸ್​ ಮಾಡಿಕೊಂಡು ಬಂದು ಸೆಲ್ಫಿ, ಆಟೋಗ್ರಾಫ್​ ಕೇಳುತ್ತಾರಂತೆ.

ಈಗ ಹೀನಾ ಟಿಕ್‌ಟಾಕ್‌ನಲ್ಲಿ ದೊಡ್ಡ ಸ್ಟಾರ್ ಆಗಿಬಿಟ್ಟಿದ್ದಾರೆ. ಕರಿಷ್ಮಾ ಕಪೂರ್‌ರಂತೆಯೇ ಅನುಕರಣೆ ಮಾಡುತ್ತಾ ಜನಪ್ರಿಯರಾಗಿದ್ದಾರೆ. ಕರಿಷ್ಮಾ ಕಪೂರ್ ಚಿತ್ರದ ಹಾಡುಗಳಿಗೆ ಮತ್ತು ಸಂಭಾಷಣೆಗಳಿಗೆ ಲಿಪ್‌ಸಿಂಕ್ ಮಾಡಿ ಹೆಸರು ಮಾಡಿರುವ ಹೀನಾಗೆ ಟಿಕ್‌ಟಾಕ್‌ನಲ್ಲಿ 2.4 ಮಿಲಿಯನ್ ಹಿಂಬಾಲಕರು ಇದ್ದಾರೆ ಎಂದರೆ ಅವರ ಜನಪ್ರಿಯತೆ ಎಷ್ಟಿದೆ ಎಂಬುದು ಗಮನಕ್ಕೆ ಬರುತ್ತದೆ.

ಟಿಕ್‌ಟಾಕ್‌ನಲ್ಲಿ ಈಕೆ ಮಾಡುವ ವಿಡಿಯೋಗಳನ್ನು ನೋಡಿ, ಜನ ಈಕೆಯೇ ಕರಿಷ್ಮಾ ಕಪೂರ್ ಎಂದು ತಪ್ಪು ತಿಳಿದುಕೊಂಡಿದ್ದೂ ಉಂಟಂತೆ. ಆಮೇಲೆ ನಿಜ ಸಂಗತಿ ಗೊತ್ತಾದ ಮೇಲೆ, ಆಶ್ಚರ್ಯ ವ್ಯಕ್ತಪಡಿಸಿದ್ದಾರಂತೆ. ಅಷ್ಟೇ ಅಲ್ಲ, ಕರಿಷ್ಮಾಗೆ ಈಕೆ ಆ ಪರಿ ಹೋಲುವುದನ್ನು ನೋಡಿ, ‘ಖುದ್ರತ್ ಕಾ ಕರಿಷ್ಮಾ’ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೀಗೆ ನಕಲಿ ಕರಿಷ್ಮಾ ಟಿಕ್‌ಟಾಕ್‌ನಲ್ಲಿ ದೊಡ್ಡ ಸುದ್ದಿ ಮಾಡುತ್ತಿದ್ದರೆ, ಇನ್ನೊಂದು ಕಡೆ ಚಿತ್ರರಂಗದಿಂದ ಸ್ವಯಂನಿವೃತ್ತಿ ಪಡೆದಿರುವ ಕರಿಷ್ಮಾ ಕಪೂರ್, ತಮ್ಮ ಮಕ್ಕಳ ಜತೆಗೆ ಮುಂಬೈನಲ್ಲಿ ಕ್ವಾರಂಟೈನ್‌ನಲ್ಲಿ ಸೇಫ್​ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net