More

    ಕರಿಪ್ಪೂರ್ ವಿಮಾನ ನಿಲ್ದಾಣದ ರನ್​ ವೇ 10 ಸುರಕ್ಷಿತವಾಗಿಲ್ಲ: 2011ರಲ್ಲೇ ತಜ್ಞರ ತಂಡದ ಎಚ್ಚರಿಕೆ

    ನವದೆಹಲಿ: ಕರಿಪ್ಪುರ್ ವಿಮಾನ ನಿಲ್ದಾಣದ ರನ್‌ವೇ ನಂ.10 ಅಸುರಕ್ಷಿತವಾಗಿದೆ ಮತ್ತು ವಿಶೇಷವಾಗಿ ಆರ್ದ್ರ ವಾತಾವರಣದಲ್ಲಿ ವಿಮಾನ ಇಳಿಯಲು ಆ ರನ್​ವೇಯನ್ನು ಬಳಸಬಾರದು ಎಂದು ತಜ್ಞರು 2011 ರಲ್ಲಿ ಎಚ್ಚರಿಕೆ ನೀಡಿದ್ದರು.
    ಮಂಗಳೂರಿನಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ ನಂ. 812 ಅಪಘಾತವಾಗಿ 158 ಜನ ಸಾವಿಗೀಡಾದ ದುರಂತ ಸಂಭವಿಸಿದ ನಂತರ ನಾಗರಿಕ ವಿಮಾನಯಾನ ಸಚಿವಾಲಯ ರಚಿಸಿದ ಸುರಕ್ಷತಾ ಸಲಹಾ ಸಮಿತಿಯ ಸದಸ್ಯ ಕ್ಯಾಪ್ಟನ್ ಮೋಹನ್ ರಂಗನಾಥನ್ 2011 ರಲ್ಲಿ ಎಚ್ಚರಿಕೆ ನೀಡಿದ್ದರು.

    ಇದನ್ನೂ ಓದಿ:  ಜೋಡಿ ದುರಂತ ಕೇರಳಕ್ಕೆ ಆಘಾತ: 2 ಹೋಳಾದ ವಿಮಾನ, ಭೂಕುಸಿತಕ್ಕೆ 13 ಮಂದಿ ಜೀವಂತ ಸಮಾಧಿ

    ಶುಕ್ರವಾರ ರಾತ್ರಿ ದುಬೈನಿಂದ ಆಗಮಿಸಿದ ಏರ್ ಇಂಡಿಯಾ ವಿಮಾನ ಕೋಳಿಕ್ಕೋಡ್​ನ ಕರಿಪ್ಪುರ್ ವಿಮಾನ ನಿಲ್ದಾಣದ ರನ್​ವೇಯಲ್ಲಿ ಜಾರಿ ಕಮರಿಗೆ ಬಿದ್ದು ಇಬ್ಭಾಗವಾಗಿದೆ. ಈ ದುರಂತದಲ್ಲಿ ಪೈಲಟ್ ಸೇರಿ 17 ಜನ ಸಾವಿಗೀಡಾದ್ದು, 123 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ನಾಗರಿಕ ವಿಮಾನ ಯಾನ ಸಚಿವರು, ಕೇರಳದ ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ಇತರೆ ಸಚಿವರು ಆಗಮಿಸುತ್ತಿದ್ದು, ಪರಿಹಾರ ಕ್ರಮಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ.
    ಮೃತಪಟ್ಟವರಲ್ಲಿ ಪೈಲಟ್ ಕಮಾಂಡ್ ಕ್ಯಾಪ್ಟನ್ ದೀಪಕ್ ಸಾಥೆ ಮತ್ತು ಸಹ ಪೈಲಟ್ ಅಖಿಲೇಶ್ ಕುಮಾರ್ ಸೇರಿದ್ದಾರೆ ಎಂದು ಪೊಲೀಸ್ ಮತ್ತು ವಿಮಾನಯಾನ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಸಾಥೆ ಭಾರತೀಯ ವಾಯುಪಡೆಯ (ಐಎಎಫ್) ಮಾಜಿ ವಿಂಗ್ ಕಮಾಂಡರ್ ಆಗಿದ್ದರು ಮತ್ತು ವಾಯುಪಡೆಯ ವಿಮಾನ ಪರೀಕ್ಷಾ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದರು.

    ಇದನ್ನೂ ಓದಿ:  ಅಯೋಧ್ಯೆ ಶ್ರೀರಾಮಮಂದಿರ ಭೂಮಿ ಪೂಜೆ ನೇರ ಪ್ರಸಾರ ವೀಕ್ಷಿಸಿದವರ ಸಂಖ್ಯೆ ಎಷ್ಟು?

    ಮಂಗಳೂರು ಅಪಘಾತದ ನಂತರ ಅವರು ನೀಡಿದ ಎಚ್ಚರಿಕೆ ನಿರ್ಲಕ್ಷಿಸಲಾಗಿದೆ ಎಂದು ಕ್ಯಾಪ್ಟನ್ ರಂಗನಾಥನ್ ತಿಳಿಸಿದ್ದಾರೆ.
    ಇದು ಇಳಿಜಾರಿನೊಂದಿಗೆ ಕೂಡಿದ ಟೇಬಲ್‌ಟಾಪ್ ರನ್‌ವೇ ಆಗಿದ್ದು, ರನ್‌ವೇಯ ಕೊನೆಯಲ್ಲಿರುವ ಬಫರ್ ವಲಯವು ಅಸಮರ್ಪಕವಾಗಿದೆ ಎಂದು ಅವರು ಹೇಳಿದ್ದಾರೆ.

    ಎಲ್​ಎಸಿ ಬಳಿ ಚೀನಾದ ಉಪಟಳ: ರೋಬೋಟಿಕ್ಸ್​ ಸೇರಿ ಆಧುನಿಕ ಯುದ್ಧ ತಂತ್ರಗಾರಿಕೆ ಕುರಿತು ಭಾರತದ ಚಿಂತನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts