More

    ಅಯೋಧ್ಯೆ ಶ್ರೀರಾಮಮಂದಿರ ಭೂಮಿ ಪೂಜೆ ನೇರ ಪ್ರಸಾರ ವೀಕ್ಷಿಸಿದವರ ಸಂಖ್ಯೆ ಎಷ್ಟು?

    ನವದೆಹಲಿ: ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆದ ಶ್ರೀರಾಮಮಂದಿರ ಭೂಮಿ ಪೂಜೆ, ಶಿಲಾನ್ಯಾಸದ ಐತಿಹಾಸಿಕ ಕಾರ್ಯಕ್ರಮವನ್ನು ನೇರ ಪ್ರಸಾರದ ಮೂಲಕ ವೀಕ್ಷಿಸಿದವರು ಎಷ್ಟಿರಬಹುದು? ಊಹಿಸೋಕೆ ಸಾಧ್ಯವೇ ? ಅಥವಾ ನಿಖರ ಲೆಕ್ಕಾಚಾರ ಸಿಗಬಹುದೇ?

    ಈ ಕಾರ್ಯಕ್ರಮವನ್ನು ಪ್ರಸಾರ ಭಾರತಿ ನೇರ ಪ್ರಸಾರ ಮಾಡಿತ್ತು. ಜಗತ್ತಿನಾದ್ಯಂತ ಕೋಟ್ಯಂತರ ಜನ ಈ ಕಾರ್ಯಕ್ರಮವನ್ನು ವೀಕ್ಷಿಸಿದ್ದರು. ಭೂಮಿ ಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದ ಮುಖ್ಯಭಾಗವನ್ನು ದೂರದರ್ಶನ ಬೆಳಗ್ಗೆ 10.45ರಿಂದ ಅಪರಾಹ್ನ 2 ಗಂಟೆ ತನಕ ಪ್ರಸಾರ ಮಾಡಿತ್ತು. ಇದನ್ನು ಅಂದಾಜು 200 ಟಿವಿ ಚಾನೆಲ್​ಗಳು ಪ್ರಸಾರ ಮಾಡಿದ್ದವು ಎಂದು ಪ್ರಸಾರ ಭಾರತಿಯ ಸಿಇಒ ಶಶಿ ಶೇಖರ ವೆಂಪತಿ ಹೇಳಿದ್ದಾರೆ.

    ಇದನ್ನೂ ಓದಿ: VIDEO: ಶ್ರೀರಾಮಲಲ್ಲಾನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ…

    ಪ್ರಾಥಮಿಕ ಅಂದಾಜಿನ ಪ್ರಕಾರ 16 ಕೋಟಿಗೂ ಅಧಿಕ ಜನ ಈ ನೇರ ಪ್ರಸಾರವನ್ನು ವೀಕ್ಷಿಸಿದ್ದಾರೆ. 700 ಕೋಟಿಗೂ ಅಧಿಕ ವ್ಯೂವರ್​ಶಿಪ್​ ಈ ಕಾರ್ಯಕ್ರಮಕ್ಕೆ ಇತ್ತು ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮವನ್ನು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ನಡೆಸಿಕೊಟ್ಟಿದ್ದರು. (ಏಜೆನ್ಸೀಸ್)

    LIVE: ನೆರವೇರಿತು ರಾಮಮಂದಿರದ ಶಿಲಾನ್ಯಾಸ: ರಾಮ ಪರಿವರ್ತನೆಯ ಪ್ರತಿಪಾದಕ – ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts